ತುಂಗಾ ನದಿಯ ನೀರಿನ ಮಟ್ಟದಲ್ಲಿ ಇಳಿಕೆ: ಶಿವಮೊಗ್ಗಕ್ಕೆ ಸಮಾಧಾನದ ಸುದ್ದಿ!

ಶಿವಮೊಗ್ಗ: ತುಂಗಾ ನದಿಯ ಪಾತ್ರದಲ್ಲಿ ನಿನ್ನೆ ಆತಂಕ ಸೃಷ್ಟಿಸಿದ್ದ ಪ್ರವಾಹದ ಭೀತಿ ಕೊಂಚ ಕಡಿಮೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಕೊಂಚ ತಗ್ಗಿದ ಹಿನ್ನೆಲೆಯಲ್ಲಿ ನದಿಯ ಒಳಹರಿವು ಗಣನೀಯವಾಗಿ ಇಳಿಕೆಯಾಗಿದೆ.

ಇದನ್ನು ಓದಿ: ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ: ಡಾ. ಸಿ. ಎನ್ ಮಂಜುನಾಥ್ ಅವರಿಂದ ಮಹತ್ವದ ಸಲಹೆಗಳು! ಪೂರ್ತಿ ಓದಲು  ಲಿಂಕ್ ಕ್ಲಿಕ್ ಮಾಡಿ

ನಿನ್ನೆ (ಜುಲೈ 3) ಬೆಳಗ್ಗೆ 80 ಸಾವಿರ ಕ್ಯೂಸೆಕ್ ನೀರು ಒಳಹರಿವು ದಾಖಲಾಗಿತ್ತು, ಇದು ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ, ನಿನ್ನೆ ರಾತ್ರಿ 64 ಸಾವಿರ ಕ್ಯೂಸೆಕ್‌ಗೆ ಇಳಿದಿದ್ದ ಒಳಹರಿವು, ಇಂದು (ಜುಲೈ 4) ಬೆಳಗ್ಗೆ ಮತ್ತಷ್ಟು ಕಡಿಮೆಯಾಗಿ ಸದ್ಯಕ್ಕೆ 55 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಗಾಜನೂರು ಜಲಾಶಯದ 22 ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ನಿನ್ನೆ 80 ಸಾವಿರ ಕ್ಯೂಸೆಕ್ ಒಳಹರಿವಿನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ನದಿಪಾತ್ರದ ಬಡಾವಣೆಗಳಲ್ಲಿ ಸ್ಥಳಾಂತರಕ್ಕೆ ಮೈಕ್ ಮೂಲಕ ಅನೌನ್ಸ್ ಮಾಡಿಸಿತ್ತು. ಆದರೂ, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನದಿ ನೀರು ಸಾಮಾನ್ಯ ಮಟ್ಟದಲ್ಲಿ ಹರಿಯುತ್ತಿದೆ.

ಇಂದು ಮಂಟಪ ಮುಳುಗಿದ್ದರೂ, ಒಳಹರಿವು ಕಡಿಮೆಯಾಗಿರುವುದು ಸಮಾಧಾನಕರ ಸಂಗತಿ. ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ವೆಬ್ ಚಾನೆಲ್ ವೀಕ್ಷಿಸುತ್ತಿರಿ.

ಜಾಹಿರಾತು:

 

ವರದಿ: ಅಮಿತ್ ಆನಂದಪುರ

WhatsApp Number : 7795829207


Leave a Reply

Your email address will not be published.