ಶಿವಮೊಗ್ಗ : ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದ ಗಣಪತಿ ಮತ್ತು ನಾಗರ ವಿಗ್ರಹ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶಿವಮೊಗ್ಗ ನಗರ ಶಾಸಕರಾದ ಶ್ರೀ ಚನ್ನಬಸಪ್ಪನವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯದ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ರಕ್ಷಣಾ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಇದನ್ನು ಓದಿ : ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ: ಡಾ. ಸಿ. ಎನ್ ಮಂಜುನಾಥ್ ಅವರಿಂದ ಮಹತ್ವದ ಸಲಹೆಗಳು!!ಪೂರ್ತಿ ಓದಲು ಕ್ಲಿಕ್ ಮಾಡಿ.
ಘಟನೆಯ ಕುರಿತು ಸ್ಥಳೀಯರೊಂದಿಗೆ ಮಾತನಾಡಿದ ಶಾಸಕ ಚನ್ನಬಸಪ್ಪನವರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ದ್ವಂಸಗೊಳಿಸಲಾದ ದೇವರ ವಿಗ್ರಹಗಳ ಎದುರು ಭಾಗದಲ್ಲಿರುವ ಅನ್ಯಕೋಮಿನ ಮನೆ ಅಕ್ರಮವಾಗಿ ನಿರ್ಮಿಸಿದ್ದು, ಆ ಮನೆಯ ನಿವಾಸಿಗಳು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಈ ದೇವರ ವಿಗ್ರಹಗಳನ್ನು ನೋಡಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, “ಅವರಿಗೆ ತೊಂದರೆಯಾದರೆ, ಅವರು ಈ ಭಾಗದಲ್ಲಿ ವಾಸಿಸಲು ಅರ್ಹರಲ್ಲ” ಎಂದು ಖಾರವಾಗಿ ನುಡಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕ ಚನ್ನಬಸಪ್ಪನವರು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರವಾಣಿ ಕರೆ ಮಾಡಿ, ಅಕ್ರಮವಾಗಿ ನಿರ್ಮಿಸಲಾದ ಮನೆಯ ದಾಖಲಾತಿಗಳನ್ನು ಪರಿಶೀಲಿಸಿ, ಅದು ಅಕ್ರಮವಾಗಿದ್ದರೆ ತಕ್ಷಣವೇ ತೆರವುಗೊಳಿಸುವಂತೆ ಸೂಚನೆ ನೀಡಿದರು. ಅಲ್ಲದೆ, ಬಂಗಾರಪ್ಪ ಬಡಾವಣೆಯಲ್ಲಿ ವಾಸಿಸುತ್ತಿರುವ ಹಿಂದೂ ಜನಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆಯೂ ಪೊಲೀಸ್ ಇಲಾಖೆಗೆ ತಿಳಿಸಿದರು.
ಇದನ್ನು ಓದಿ : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ: ಆರೋಗ್ಯ ಇಲಾಖೆಯಲ್ಲಿ 6,770 ‘ಡಿ’ ದರ್ಜೆ ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್!! ವಿವರವಾಗಿ ಓದಲು ಕ್ಲಿಕ್ ಮಾಡಿ.
ಈ ಸಂದರ್ಭದಲ್ಲಿ, ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ದೀನದಯಾಳು, ಮಂಜುನಾಥ್ ಕೆ ನವಲೆ, ಮಾಧ್ಯಮ ಸಂಚಾಲಕ ಶ್ರೀನಾಗ, ಸ್ಥಳೀಯ ಪ್ರಮುಖರು, ಮತ್ತು ಬಂಗಾರಪ್ಪ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ಈ ಘಟನೆ ಸ್ಥಳೀಯ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಾಹಿರಾತು:
ಇಂತಹ ಇನ್ನಷ್ಟು ಆಸಕ್ತಿದಾಯಕ ಮತ್ತು ಉಪಯುಕ್ತ ಮಾಹಿತಿಗಳನ್ನು ಪಡೆಯಲು ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವೆಬ್ ಚಾನೆಲ್‌ನೊಂದಿಗೆ ಸಂಪರ್ಕದಲ್ಲಿರಿ.
WhatsApp Number : 7795829207
Leave a Reply