ಟ್ರಂಪ್‌ಗೆ ತಿರುಗೇಟು ನೀಡಿದ ಎಲಾನ್ ಮಸ್ಕ್: “ನಿಮ್ಮ ಸ್ವಾತಂತ್ರ್ಯ ಮರಳಿ ನೀಡಲು ‘ಅಮೆರಿಕ ಪಾರ್ಟಿ’ ರಚಿಸಿದ್ದೇನೆ” ಎಂದ ಉದ್ಯಮಿ!

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರಾಗಿದ್ದ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇದೀಗ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. “ಅಮೆರಿಕ ಪಾರ್ಟಿ” ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ. ಅಮೆರಿಕದ ಪ್ರಸ್ತುತ ಏಕಪಕ್ಷ ವ್ಯವಸ್ಥೆಗೆ ಸವಾಲೊಡ್ಡಲು ಈ ಪಕ್ಷವನ್ನು ಘೋಷಿಸಲಾಗಿದೆ ಎಂದು ಮಸ್ಕ್ ಹೇಳಿದ್ದಾರೆ.

ಒಂದು ಕಾಲದಲ್ಲಿ ಟ್ರಂಪ್ ಪ್ರಚಾರಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ್ದ ಹಾಗೂ ಸರ್ಕಾರಿ ಕ್ಷಮತಾ ಇಲಾಖೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಎಲಾನ್ ಮಸ್ಕ್, ಫೆಡರಲ್ ವೆಚ್ಚ ಕಡಿತ ಮತ್ತು ಸರ್ಕಾರಿ ಉದ್ಯೋಗ ಕಡಿತಗೊಳಿಸುವ ಉದ್ದೇಶ ಹೊಂದಿದ್ದರು. ಆದರೆ, ನಂತರ ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಬೇರ್ಪಟ್ಟಿದ್ದರು.

“ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನಿಮಗೆ ನೀಡುವ ಉದ್ದೇಶದಿಂದ ‘ಅಮೆರಿಕ ಪಾರ್ಟಿ’ಯನ್ನು ಇಂದು ರಚಿಸಲಾಗಿದೆ” ಎಂದು ಮಸ್ಕ್ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ಘೋಷಿಸಿದ್ದಾರೆ. “ಒಂದರಿಂದ ಎರಡು ಅಂಶಗಳಿಗೆ ನಿಮಗೆ ಹೊಸ ರಾಜಕೀಯ ಪಕ್ಷ ಅಗತ್ಯವಿದೆ; ನೀವು ಅದನ್ನು ಪಡೆದುಕೊಳ್ಳಿ. ನಾವು ದೇಶದಲ್ಲಿ ಹೊಂದಿರುವ ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದೇಶವನ್ನು ದಿವಾಳಿ ಮಾಡುವ ಏಕಪಕ್ಷ ವ್ಯವಸ್ಥೆಗೆ ಬಂದರೆ, ಅದು ಪ್ರಜಾಪ್ರಭುತ್ವ ಎನಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ : ವಿಗ್ರಹ ವಿರೂಪ : ಶಾಸಕರ ವಿರಾಟ ರೂಪ:ವಿಘ್ನ ನಿವಾರಕನಿಗೆ ರಾಗಿಗುಡ್ಡದಲ್ಲಿ ವಿಘ್ನ ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ, ಕಠಿಣ ಕ್ರಮಕ್ಕೆ ಸೂಚನೆ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಪೂರ್ತಿ ಓದಲು ಲಿಂಕ್ ಕ್ಲಿಕ್  ಮಾಡಿ

ಜುಲೈ 4ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಸ್ಕ್ ಜಾಲತಾಣದಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದರು. “ದ್ವಿಪಕ್ಷೀಯ ವ್ಯವಸ್ಥೆಯಿಂದ (ಕೆಲವರು ಇದನ್ನು ಏಕಪಕ್ಷ ಎಂದೂ ಕರೆಯುತ್ತಾರೆ) ನಿಮಗೆ ಸ್ವಾತಂತ್ರ್ಯ ಬೇಕೇ ಎಂದು ಕೇಳಲು ಸ್ವಾತಂತ್ರ್ಯ ದಿನ ಸರಿಯಾದ ಸಂದರ್ಭ! ನಾವು ಅಮೆರಿಕ ಪಾರ್ಟಿ ರಚಿಸಬಹುದೇ?” ಎಂದು ಕೇಳಿದಾಗ, ಶೇಕಡಾ 65.4ರಷ್ಟು ಮಂದಿ ಸಹಮತ ಸೂಚಿಸಿದ್ದರು. ಈ ಸಮೀಕ್ಷೆಯ ಬೆನ್ನಲ್ಲೇ ಮಸ್ಕ್ ತಮ್ಮ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ.

ಇದನ್ನು ಓದಿ :  ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವಿಶೇಷ ವರದಿ!   ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ

WhatsApp Number : 7795829207


Leave a Reply

Your email address will not be published.