ರಾಗಿಗುಡ್ಡ ಘಟನೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಂಎಲ್‌ಸಿ ಡಾ. ಸರ್ಜಿ ಅವರಿಂದ ಪಾದಯಾತ್ರೆ ಎಚ್ಚರಿಕೆ!

ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿರುವ ಬಂಗಾರಪ್ಪನವರ ಬಡಾವಣೆಯಲ್ಲಿ ಗಣಪತಿ ಮತ್ತು ನಾಗ ದೇವತೆಗಳ ವಿಗ್ರಹಗಳನ್ನ ಹಾನಿ ಮಾಡಿದ ಘಟನೆಯು ಅತ್ಯಂತ ಶೋಚನೀಯ ಸಂಗತಿ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಹಲವು ಆಗ್ರಹಗಳನ್ನು ಮುಂದಿಟ್ಟರು.

“ದೇವರ ಮೂರ್ತಿಯನ್ನು ಕಾಲಿನಿಂದ ಒದಿಯುತ್ತಾನೆ ಎಂದರೆ ಹೇಗೆ? ಇಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಬೇಕು” ಎಂದು ಡಾ. ಸರ್ಜಿ ಆಗ್ರಹಿಸಿದರು.

ಅಕ್ರಮ ಕಟ್ಟಡ ತೆರವಿಗೆ ಮನವಿ, ಪ್ರತಿಭಟನೆ ಎಚ್ಚರಿಕೆ:

ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡವನ್ನು ತಕ್ಷಣವೇ ನೆಲಸಮ ಮಾಡಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು. “ಈ ದೇವಸ್ಥಾನದ ಶುದ್ಧೀಕರಣ ಆಗಬೇಕು, ದೇವಸ್ಥಾನ ನಿರ್ಮಾಣವಾಗಬೇಕು. ಆ ಕೆಲಸವನ್ನು ನಾವು ಮಾಡುತ್ತೇವೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಇಲ್ಲವಾದರೆ, **ಶಿವಮೊಗ್ಗದ ಜನತೆ ಪಾದಯಾತ್ರೆ ಮೂಲಕ ಇದೇ ಸ್ಥಳದಲ್ಲಿ ಧರಣಿ ಕೂರುತ್ತೇವೆ**” ಎಂದು ಎಚ್ಚರಿಕೆ ನೀಡಿದರು.

ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ:

ಕಿಡಿಗೇಡಿಗಳ ವಿರುದ್ಧ ತೀವ್ರ ಅಕ್ರೋಶ ಹೊರಹಾಕಿದ ಎಂಎಲ್‌ಸಿ ಧನಂಜಯ ಸರ್ಜಿ, ಯಾವುದೇ ಕಾರಣಕ್ಕೂ ಈ ಭಾಗದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸುವಂತೆ ಪುನರುಚ್ಚರಿಸಿದರು.

ಇದನ್ನು ಓದಿ : ವಿಗ್ರಹ ವಿರೂಪ : ಶಾಸಕರ ವಿರಾಟ ರೂಪ:ವಿಘ್ನ ನಿವಾರಕನಿಗೆ ರಾಗಿಗುಡ್ಡದಲ್ಲಿ ವಿಘ್ನ ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ, ಕಠಿಣ ಕ್ರಮಕ್ಕೆ ಸೂಚನೆ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಪೂರ್ತಿ ಓದಲು ಲಿಂಕ್ ಕ್ಲಿಕ್  ಮಾಡಿ

ಈ ಸಂದರ್ಭದಲ್ಲಿ ಡಾ. ಸರ್ಜಿ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಕಾರ್ಪೊರೇಟರ್‌ಗಳಾದ ರಾಹುಲ್ ಬಿದರಿ, ಸುರೇಖಾ ಮುರುಳೀಧರ್, ಸುನೀತಾ ಅಣ್ಣಪ್ಪ, ಶ್ರೀನಾಗ್ ಬೊಮ್ಸ್ ಕಟ್ಟೆ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಸಾಥ್ ನೀಡಿದ್ದರು.

ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ವೀಕ್ಷಿಸುತ್ತಿರಿ.

ಇದನ್ನು ಓದಿ :  ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವಿಶೇಷ ವರದಿ!   ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ

WhatsApp Number : 7795829207


Leave a Reply

Your email address will not be published.