ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??

ಶಿವಮೊಗ್ಗ: ಜಿಲ್ಲೆಯ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಅಭಿವೃದ್ಧಿಗಳನ್ನು ತಂದಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಮತ್ತೊಂದು ಶುಭ ಸುದ್ದಿಯನ್ನು ನೀಡಿದ್ದಾರೆ. ದೇಶದ ರೈಲ್ವೆ ಸಂಚಾರದಲ್ಲಿ ಸಂಚಲನ ಮೂಡಿಸಿರುವ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಆಗಮಿಸುವುದು ಬಹುತೇಕ ಖಚಿತವಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ಇದನ್ನು ಓದಿ: ಶಾಕಿಂಗ್: ₹2 ಲಕ್ಷ ಸಾಲಕ್ಕೆ, ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ! 😱

ಈ ಕುರಿತು ಮಾಹಿತಿ ನೀಡಿದ ಸಂಸದರು, ಜನವರಿಯಲ್ಲಿ ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಉದ್ಘಾಟನೆಯಾಗಲಿದೆ. ಇದರ ಬೆನ್ನಲ್ಲೇ, ಮುಂದಿನ ಫೆಬ್ರವರಿ ತಿಂಗಳಲ್ಲಿ ಶಿವಮೊಗ್ಗದಿಂದ ತಿರುಪತಿ, ಬೆಂಗಳೂರು, ಕೇರಳದ ಎರ್ನಾಕುಲಂ ಮತ್ತು ಬಿಹಾರದ ಚಂಡೀಗಢಕ್ಕೆ ವಂದೇ ಭಾರತ್ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ. ರೈಲ್ವೆ ಇಲಾಖೆಯು ವಂದೇ ಭಾರತ್ ಸಂಚಾರಕ್ಕೆ ವೇಳಾಪಟ್ಟಿ ಮತ್ತು ರೈಲು ಸಂಖ್ಯೆಯನ್ನು ಸಹ ಸಿದ್ಧಪಡಿಸಿಟ್ಟುಕೊಂಡಿದೆ ಎಂದು ಅವರು ಹೇಳಿದರು.

ಕೊಂಕಣ ರೈಲ್ವೆ ಸಂಪರ್ಕ ಮತ್ತು ಇತರ ಯೋಜನೆಗಳು:

ತಾಳಗುಪ್ಪದಿಂದ ಹುಬ್ಬಳ್ಳಿಗೆ 150 ಕಿ.ಮೀ ದೂರದ ರೈಲು ವ್ಯವಸ್ಥೆಗೆ ಸಮೀಕ್ಷೆ ನಡೆದಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ. ಆದರೆ, ಈ ಮಾರ್ಗಕ್ಕೆ ಸಂಬಂಧಿಸಿದಂತೆ ಪರ್ಯಾಯ ಜಮೀನು ಬೇಕಿದ್ದು, ತಾಳಗುಪ್ಪದಿಂದ ಹೊನ್ನಾವರ ಮಾರ್ಗದಲ್ಲಿ ಶೇಕಡಾ 73ರಷ್ಟು ಅರಣ್ಯ ಪ್ರದೇಶ ಬರುವುದರಿಂದ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ ಎಂದರು.

ಇದನ್ನು ಓದಿ: ಶಿವಮೊಗ್ಗದಿಂದ ಎಲ್ಲಾ ರಾಜ್ಯಗಳಿಗೆ ರೈಲು ಸಂಚಾರ ಆರಂಭವಾಗಲಿದೆ! ಶಿವಮೊಗ್ಗಕ್ಕೆ ವಂದೇ ಭಾರತ್ ಸಹಿತ 7 ಹೊಸ ರೈಲುಗಳು: ಸಂಸದ ಬಿ ವೈ ರಾಘವೇಂದ್ರ 

ಇದಲ್ಲದೆ, ಬೀರೂರು-ಶಿವಮೊಗ್ಗ ನಡುವೆ ಡಬಲ್ ಟ್ರ್ಯಾಕ್ ಕಾಮಗಾರಿ ನಡೆಯಬೇಕಿದೆ. ಹಾಗೆಯೇ, ಭದ್ರಾವತಿ-ಚಿಕ್ಕಜಾಜೂರು ನಡುವೆ ನೂತನ ಸಂಪರ್ಕ ಏರ್ಪಡಲಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಕ್ರಾಂತಿಕಾರಿ ಬೆಳವಣಿಗೆಗಳು ಶಿವಮೊಗ್ಗದಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಶಕ್ತಿಯಿಂದ ಮಾತ್ರ ದೇಶವನ್ನು ಕಟ್ಟುವ ಇಂತಹ ಕಾರ್ಯಗಳು ಸಾಧ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಬಣ್ಣಿಸಿದ್ದಾರೆ.

ಇದನ್ನು ಓದಿ : ಭಯಾನಕ ಅಂತ್ಯ: ಶಿವಮೊಗ್ಗ ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನಿಂದಲೇ ಸ್ನೇಹಿತನ ಕೊಲೆ! ಬೊಮ್ಮನಕಟ್ಟೆಯಲ್ಲಿ ಮತ್ತೊಂದು ಮರ್ಡರ್!!  ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ

ಜಾಹಿರಾತು:

WhatsApp Number : 7795829207


Leave a Reply

Your email address will not be published.