ಶಿವಮೊಗ್ಗ: “ಸೇವೆ ಎಂದರೆ ಸ್ವಾರ್ಥವಿಲ್ಲದ ಮಾನವೀಯತೆಯ ಅಭಿವ್ಯಕ್ತಿ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ (ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182, ವಲಯ-10) ತನ್ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಿದೆ.
ಈ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲರಾದ ಶ್ರೀ ಕೆ.ಎಸ್.ವಿಶ್ವನಾಥ ನಾಯಕ ಮತ್ತು ಕಾರ್ಯದರ್ಶಿಯಾಗಿ ಶ್ರೀ ನಿತಿನ್ ಯಾದವ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ.
ಶುಭ ಕೋರುವವರು:
ಸಮಾರಂಭದ ವಿವರಗಳು:
- ದಿನಾಂಕ: ಜುಲೈ 09, 2025 ರ ಬುಧವಾರ
- ಸಮಯ: ಬೆಳಿಗ್ಗೆ 10:00 ಗಂಟೆಗೆ
- ಸ್ಥಳ: ರೋಟರಿ ರಿವರ್ಸೈಡ್ ಭವನ, ಕೃಷಿ ನಗರ, ಶಿವಮೊಗ್ಗ
ಪದವಿ ಪ್ರಧಾನ ಮಾಡುವ ಮುಖ್ಯಸ್ಥರು ಮತ್ತು ಅತಿಥಿಗಳು:
ಪದವಿ ಪ್ರಧಾನ ಮಾಡುವ ಮುಖ್ಯಸ್ಥರು: ಶ್ರೀಯುತ ಅಭಿನಂದನ್ ಶೆಟ್ಟಿ, ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್, ರೋಟರಿ ಡಿಸ್ಟ್ರಿಕ್ಟ್ 3182.
ಉಪಸ್ಥಿತಿ: ಕೆ.ಪಿ. ಶೆಟ್ಟಿ (ಅಸಿಸ್ಟೆಂಟ್ ಗವರ್ನರ್, ಝೋನ್-10) ಮತ್ತು ರೋ. ಎಸ್.ಪಿ. ಶಂಕರ್ (ಝೋನಲ್ ಲೆಫ್ಟಿನೆಂಟ್, ವಲಯ-10).
ಮುಖ್ಯ ಅತಿಥಿಗಳು: ಗೌರವಾನ್ವಿತ ಶ್ರೀ ಸಂತೋಷ್ ಎಂ.ಎಸ್., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ. ಇವರು “ಕಾನೂನು ಸೇವೆಗಳ ಅಗತ್ಯತೆ ಮತ್ತು ರೋಟರಿ ಸೇವೆಯಲ್ಲಿ ಇದರ ಪಾತ್ರ” ಕುರಿತು ವಿಷಯ ಮಂಡಿಸಲಿದ್ದಾರೆ.
ಇತರೆ ಗಣ್ಯರು: ಶಿವಮೊಗ್ಗ ನಗರದ ಶಾಸಕರಾದ ಚೆನ್ನಬಸಪ್ಪ ರವರು, ರೋಟರಿ ಕ್ಲಬ್ ರಿವರ್ ಸೈಡ್ನ ನಿಕಟಪೂರ್ವ ಅಧ್ಯಕ್ಷರಾದ ಬಸವರಾಜ್ ಎಂ.ಆರ್. ಮತ್ತು ಕಾರ್ಯದರ್ಶಿ ವಿನಯ್ ಚೌಡಿಕೆ ರವರು ಉಪಸ್ಥಿತರಿರುವರು.
ಸೇವಾ ಚಟುವಟಿಕೆಗಳಿಗೆ ಚಾಲನೆ:
ಈ ಸಮಾರಂಭದ ಮೂಲಕ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಹಲವು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಿದೆ. ಅವುಗಳಲ್ಲಿ ಪ್ರಮುಖವಾಗಿ:
- ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ.
- ಪಠ್ಯಪುಸ್ತಕಗಳ ವಿತರಣಾ ಸೇವೆ.
- ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಕಾಲೇಜು ಶುಲ್ಕ ಪೂರೈಕೆ.
ಸಮಸ್ತ ರೋಟರಿ ಕುಟುಂಬ, ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ (ಅಧ್ಯಕ್ಷರು ಕೆ.ಎಸ್. ವಿಶ್ವನಾಥ ನಾಯಕ, ಕಾರ್ಯದರ್ಶಿ ನಿತಿನ್ ಯಾದವ್ ಹಾಗೂ ಕಾರ್ಯಕಾರಿ ಮಂಡಳಿ 2025-2026) ನಿಮ್ಮ ಪ್ರೀತಿಭರಿತ ಹಾಜರಾತಿಯಿಂದ ಕಾರ್ಯಕ್ರಮದ ಗೌರವ ಹೆಚ್ಚಿಸಿ, ತಮ್ಮ ಸೇವಾ ಉದ್ದೇಶವನ್ನು ಬೆಂಬಲಿಸಲು ಕೋರಿದೆ.
ಜಾಹಿರಾತು:
ಇದನ್ನು ಓದಿ : ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್ಪ್ರೆಸ್ನ್ಯೂಸ್ ವಿಶೇಷ ವರದಿ! ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:
WhatsApp Number : 7795829207
Leave a Reply