ಶಿವಮೊಗ್ಗ: ಕರ್ನಾಟಕ ರಾಜ್ಯ ಪ.ಜಾತಿ/ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ. ಪಲ್ಲವಿ ಅವರ ಹೇಳಿಕೆ ಹಾಗೂ ಅಲೆಮಾರಿ ಸಮುದಾಯದ ಮುಖಂಡರ ವಿರುದ್ಧ ದೂರು ದಾಖಲಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಪಲ್ಲವಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಮತ್ತು ಅವರ ವಿರುದ್ಧದ ದೂರನ್ನು ಹಿಂಪಡೆಯುವಂತೆ ಅಲೆಮಾರಿ ಸಮುದಾಯದವರು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ಘಟನೆ ಹಿನ್ನೆಲೆ:
ದಿನಾಂಕ 05.07.2025 ರಂದು, ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಹೆಚ್. ಆಂಜನೇಯ ಅವರ ನೇತೃತ್ವದಲ್ಲಿ ಅಲೆಮಾರಿಗಳ ರಾಜ್ಯ ಸಮ್ಮೇಳನಕ್ಕೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ 49 ಅಲೆಮಾರಿ ಸಮುದಾಯದ ಮುಖಂಡರು ಹಾಗೂ ರಾಜ್ಯಾಧ್ಯಕ್ಷರನ್ನು ಮಾತ್ರ ಆಹ್ವಾನಿಸಲಾಗಿತ್ತು. ಆದರೆ, ಆಹ್ವಾನವಿಲ್ಲದಿದ್ದರೂ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರು ಸಭೆ ನಡೆಯುತ್ತಿದ್ದ ಸಭಾ ಮಂಟಪಕ್ಕೆ ಬಂದು ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ ಎಂದು ಅಲೆಮಾರಿ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.
ಆರೋಪಗಳೇನು?
- ಸನ್ಮಾನ್ಯ ಮಾಜಿ ಸಚಿವರಾದ ಶ್ರೀ ಹೆಚ್. ಆಂಜನೇಯ ಸಾಹೇಬರು ಹಾಗೂ ಸಭೆಯನ್ನು ಆಯೋಜಿಸಿದ್ದ ಅಲೆಮಾರಿ ಸಮುದಾಯದ ಮುಖಂಡರಿಗೆ ಪಲ್ಲವಿ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
- ಸಭೆಯಲ್ಲಿದ್ದ ಮುಖಂಡರುಗಳಿಗೆ ಅವರ ಆಪ್ತ ಕಾರ್ಯದರ್ಶಿ ಆನಂದ್ಕುಮಾರ್ ಏಕಲವ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
- ನಿಗಮದ ಅಧ್ಯಕ್ಷರ ಜೊತೆಗಿದ್ದ 8-10 ಜನ ಸಭೆಯಲ್ಲಿ ಗೂಂಡಾ ವರ್ತನೆ ತೋರಿದ್ದಾರೆ.
- ಅಲೆಮಾರಿ ಸಮುದಾಯದ ಏಳು ಜನ ಮುಖಂಡರ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ.
ಅಲೆಮಾರಿ ಸಮುದಾಯದ ಆಕ್ರೋಶ ಮತ್ತು ಬೇಡಿಕೆಗಳು:
ನಿಗಮದ ಅಧ್ಯಕ್ಷರಾಗಿರುವ ಜಿ. ಪಲ್ಲವಿ ಅವರು ಅಲೆಮಾರಿ ಸಮುದಾಯದ ಒಬ್ಬ ಜವಾಬ್ದಾರಿ ಮುಖಂಡರಾಗಿದ್ದರೂ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರ ಏಕಪಕ್ಷೀಯ ಕಾರ್ಯಗಳ ದಾಖಲೆಗಳು ತಮ್ಮ ಬಳಿ ಇವೆ ಎಂದು ಅಲೆಮಾರಿ ಸಮುದಾಯದ ಮುಖಂಡರು ಹೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಹಾಗೂ ಮಾಜಿ ಸಮಾಜ ಕಲ್ಯಾಣ ಸಚಿವರಾದ ಆಂಜನೇಯ ಸಾಹೇಬರು ಯಾವತ್ತೂ ದಮನಿತರ ಪರವಾಗಿ ಅಲೆಮಾರಿ ಜನಾಂಗದ ಪರವಾಗಿ ಧ್ವನಿವೆತ್ತು ಅಂತ ನಾಯಕರು ಇಂಥವರ ಬಗ್ಗೆ ಅಪಮಾನವಾಗಿ ಮಾತನಾಡಿ ಕಂಡು ಬಂದಲ್ಲಿ ಅಂತವರ ವಿರುದ್ಧ ನಾವು 101 ಪರಿಶಿಷ್ಟ ಜಾತಿ ಯಾವತ್ತೂ ಕೂಡ ಅವರ ಬೆಂಬಲಕ್ಕೆ ಇದ್ದೇ ಇರುತ್ತೇವೆ ಎಂದು ಅಲೆಮಾರಿ ಮುಖಂಡರಾದ ಮಾರುತಿ ಸೊರಬ ಹೇಳಿದರು
ಇದನ್ನು ಓದಿ: ಸಾಗರದಲ್ಲಿ “ನೈತಿಕ ಪೊಲೀಸ್ ಗಿರಿ” ದರ್ಪ: ನಾಗರಿಕ ಸ್ವಾತಂತ್ರ್ಯದ ಮೇಲೆ ದಾಳಿ! ಮೂವರು ಸೆರೆ, ಪೊಲೀಸರ ಸ್ಪಷ್ಟ ಸಂದೇಶ
ಆದ್ದರಿಂದ, ಅಲೆಮಾರಿ ಸಮುದಾಯದ ಬೇಡಿಕೆಗಳು ಹೀಗಿವೆ:
1. ಜಿ. ಪಲ್ಲವಿ ಅವರನ್ನು ಅತಿ ಶೀಘ್ರದಲ್ಲಿ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು.
2. ಅವರ ಆಪ್ತ ಕಾರ್ಯದರ್ಶಿ ಆನಂದ್ಕುಮಾರ್ ಏಕಲವ್ಯ ಅವರನ್ನು ಅಮಾನತ್ತಿನಲ್ಲಿಡಬೇಕು.
3. ಪಲ್ಲವಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿರುವುದರಿಂದ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿ, ಅಧ್ಯಕ್ಷ ಸ್ಥಾನವನ್ನು ಹಿಂಪಡೆಯಬೇಕು.
4. ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಹೆಚ್. ಆಂಜನೇಯ ಸಾಹೇಬರು ಹಾಗೂ 49 ಅಲೆಮಾರಿ ಸಮುದಾಯಕ್ಕೂ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು.
5. ಏಳು ಜನರ ಮೇಲೆ ದಾಖಲಾಗಿರುವ ಸುಳ್ಳು ಕೇಸನ್ನು ತಕ್ಷಣವೇ ಹಿಂಪಡೆಯಬೇಕು.
6. ನಿಗಮದ ಆವರಣದಲ್ಲೇ ಮಾಜಿ ಸಚಿವರು ಹಾಗೂ ಏಳು ಜನ ಮುಖಂಡರಿಗೂ ಕ್ಷಮೆ ಯಾಚಿಸಬೇಕು.
ಎಚ್ಚರಿಕೆ:
ಒಂದು ವೇಳೆ ಅಧ್ಯಕ್ಷೆ ಪಲ್ಲವಿ ಅವರು ಕ್ಷಮೆ ಯಾಚಿಸಲು ಹಿಂದೇಟು ಹಾಕಿದರೆ, ರಾಜ್ಯಾದಾದ್ಯಂತ ವಾಸಿಸುವ 49 ಅಲೆಮಾರಿ ಸಮುದಾಯಗಳು ರಾಜ್ಯ ರಾಜಧಾನಿಯಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಧರಣಿಗೆ ಅವಕಾಶ ನೀಡಿದರೆ, ಒಂದೊತ್ತಿನ ಊಟಕ್ಕೂ ಪರದಾಡುವ ಅಲೆಮಾರಿಗಳ ಧರಣಿಯ ಸಂಪೂರ್ಣ ವೆಚ್ಚದ ಜವಾಬ್ದಾರಿಯನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಸಮುದಾಯದ ಮುಖಂಡರುಗಳಾದಶ್ಯಾಮ್ ಸುಂದರ್, ಮಾರುತಿ , ರಾಘವೇಂದ್ರ, ಗಿರೀಶ್ , ಗಣೇಶ್, ಸೇರಿದಂತೆ ಪ್ರಮುಖರು ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ : ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್ಪ್ರೆಸ್ನ್ಯೂಸ್ ವಿಶೇಷ ವರದಿ! ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply