ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ರೈಲ್ವೆ ಸಂಪರ್ಕದಲ್ಲಿ ಮಹತ್ತರ ಕೊಡುಗೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಮತ್ತೊಂದು ಕ್ರಾಂತಿಕಾರಿ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ! ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ಈಗಾಗಲೇ ಹಲವು ನಗರಗಳಿಗೆ ರೈಲುಗಳ ಸಂಚಾರ ಆರಂಭವಾಗಿದ್ದು, ಈಗ ಮತ್ತೆ ಏಳು ಹೊಸ ರೈಲುಗಳ ಸಂಚಾರವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ಯಾವೆಲ್ಲಾ ಹೊಸ ರೈಲು ಮಾರ್ಗಗಳು?
- ಶಿವಮೊಗ್ಗದಿಂದ ತಿರುಪತಿ
- ಶಿವಮೊಗ್ಗದಿಂದ ಬೆಂಗಳೂರು (ಇವು ಬಹುತೇಕ ವಂದೇ ಭಾರತ್ ರೈಲುಗಳಾಗಿರಲಿವೆ)
ಇದಲ್ಲದೆ, ದೇಶದ ಪ್ರಮುಖ ನಗರಗಳಾದ:
- ಶಿವಮೊಗ್ಗದಿಂದ ಕೇರಳದ ಎರ್ನಾಕುಲಂ
- ಶಿವಮೊಗ್ಗದಿಂದ ಬಿಹಾರದ ಬಗಲ್ ಪುರ
- ಶಿವಮೊಗ್ಗದಿಂದ ಜಾರ್ಖಂಡ್‌ನ ಜೆಮ್‌ಶೆಡ್‌ಪುರ
- ಶಿವಮೊಗ್ಗದಿಂದ ಪಂಜಾಬ್‌ನ ಚಂಡೀಗಡ
ಶಿವಮೊಗ್ಗದಿಂದ ಅಸ್ಸಾಂನ ಗುವಾಹಟಿ ನಿಲ್ದಾಣಗಳಿಗೂ ನೂತನ ರೈಲು ಸಂಚಾರ ಆರಂಭವಾಗಲಿದೆ. ಇವುಗಳಲ್ಲಿ ಹೆಚ್ಚಿನವು ವಂದೇ ಭಾರತ್ ರೈಲುಗಳಾಗಿರಲಿವೆ ಎಂದು ಹೇಳಲಾಗಿದೆ.
ಇದನ್ನು ಓದಿ: ಸಾಗರದಲ್ಲಿ “ನೈತಿಕ ಪೊಲೀಸ್ ಗಿರಿ” ದರ್ಪ: ನಾಗರಿಕ ಸ್ವಾತಂತ್ರ್ಯದ ಮೇಲೆ ದಾಳಿ! ಮೂವರು ಸೆರೆ, ಪೊಲೀಸರ ಸ್ಪಷ್ಟ ಸಂದೇಶ
ಯಾವಾಗ ಆರಂಭ?
ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ಕೋಚಿಂಗ್ ಡಿಪೋ ಜನವರಿ ವೇಳೆಗೆ ಆರಂಭವಾಗಲಿದ್ದು, ಇದೇ ವೇಳೆ ಈ ಹೊಸ ರೈಲು ಸಂಚಾರಗಳೂ ಸಹ ಶುರುವಾಗಲಿವೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗಕ್ಕೆ ವಂದೇ ಭಾರತ್ ಸಂಚಾರಕ್ಕೆ ರೈಲ್ವೆ ಇಲಾಖೆ ಈಗಾಗಲೇ ವೇಳಾಪಟ್ಟಿ ಹಾಗೂ ರೈಲಿನ ಸಂಖ್ಯೆಯನ್ನೂ ಸಿದ್ಧಪಡಿಸಿದೆ ಎಂದೂ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು.
ಇದನ್ನು ಓದಿ : ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವಿಶೇಷ ವರದಿ! ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಕೊಂಕಣ ರೈಲ್ವೆ ಸಂಪರ್ಕ ಮತ್ತು ಇತರ ಅಭಿವೃದ್ಧಿಗಳು:
- ತಾಳಗುಪ್ಪದಿಂದ ಹುಬ್ಬಳ್ಳಿಗೆ 150 ಕಿ.ಮೀ. ದೂರಕ್ಕೆ ರೈಲು ವ್ಯವಸ್ಥೆಗೆ ಸರ್ವೆ ನಡೆದಿದೆ.
- ತಾಳಗುಪ್ಪದಿಂದ ಹೊನ್ನಾವರ ಮಾರ್ಗದಲ್ಲಿ ಶೇ.73ರಷ್ಟು ಅರಣ್ಯ ಪ್ರದೇಶ ಬರುವುದರಿಂದ, ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ.
- ಬೀರೂರು-ಶಿವಮೊಗ್ಗ ನಡುವೆ ಡಬಲ್ ಟ್ರ್ಯಾಕಿಂಗ್ ಕಾಮಗಾರಿ ನಡೆಯಲಿದೆ.
- ಭದ್ರಾವತಿ-ಚಿಕ್ಕಜಾಜೂರು ನಡುವೆ ನೂತನ ಸಂಪರ್ಕ ಏರ್ಪಡಲಿದೆ.
ಈ ಕ್ರಾಂತಿಕಾರಿ ಅಭಿವೃದ್ಧಿಯು ದೇಶದಾದ್ಯಂತ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರ ಇಚ್ಛಾಶಕ್ತಿಯಿಂದ ಮಾತ್ರ ಇದು ಸಾಧ್ಯ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ
ಇದನ್ನು ಓದಿ: ಶಿವಮೊಗ್ಗದಲ್ಲಿ ವಾಟ್ಸಾಪ್ ಮೆಸೇಜ್ ಮೂಲಕ ಸೈಬರ್ ವಂಚನೆ: ಷೇರು ಮಾರುಕಟ್ಟೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕಳವು!!
ಶಿವಮೊಗ್ಗದ ರೈಲ್ವೆ ಇತಿಹಾಸದಲ್ಲಿ ಇದೊಂದು ಸುವರ್ಣಾಕ್ಷರಗಳಲ್ಲಿ ಬರೆಯುವ ಅಧ್ಯಾಯವಾಗಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳೇನು? ಕಾಮೆಂಟ್‌ಗಳಲ್ಲಿ ತಿಳಿಸಿ.
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply