ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲಾಗದು, ಇದು ಜೀವನದಲ್ಲಿ ಸಾರ್ಥಕ ಭಾವವನ್ನು ಮೂಡಿಸುತ್ತದೆ. ಇನ್ನೊಬ್ಬರ ಕಷ್ಟಕ್ಕೆ ಕೈಜೋಡಿಸುವ ಸೇವಾ ಮನೋಭಾವನೆ ಇರಬೇಕು ಎಂದು ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಹೇಳಿದರು.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ನಗರದ ಸರ್ಕಾರಿ ನೌಕರರ ಭವನದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಆಯೋಜಿಸಿದ್ದ ಪದವಿ ಪ್ರಧಾನ ಸಮಾರಂಭ ಮತ್ತು ಮಾನವೀಯ ಸೇವಾ ಕಾರ್ಯಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೋಟರಿ ದತ್ತಿ ನಿಧಿಯಿಂದ ಪ್ರಪಂಚದಾದ್ಯಂತ ಲಕ್ಷಾಂತರ ಮಾನವೀಯ ಸೇವೆಗಳ ಮೂಲಕ ಅತಿ ಹೆಚ್ಚು ಜನರನ್ನು ಮತ್ತು ಸಮುದಾಯವನ್ನು ತಲುಪುತ್ತಿರುವ ಏಕೈಕ ಸಂಸ್ಥೆ ರೋಟರಿ ಎಂದು ತಿಳಿಸಿದರು.
ಇದನ್ನು ಓದಿ: ಭಯಾನಕ ಅಂತ್ಯ: ಶಿವಮೊಗ್ಗ ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನಿಂದಲೇ ಸ್ನೇಹಿತನ ಕೊಲೆ! ಬೊಮ್ಮನಕಟ್ಟೆಯಲ್ಲಿ ಮತ್ತೊಂದು ಮರ್ಡರ್ !!
ಬೆಂಗಳೂರಿನ ಉದ್ಯಮಿ ಮತ್ತು ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ಡಕೋಜಿ ಅವರು ಈಗಾಗಲೇ ರೋಟರಿ ದತ್ತಿ ನಿಧಿಗೆ ಒಂದೇ ಬಾರಿಗೆ ನೂರು ಕೋಟಿ ದೇಣಿಗೆ ನೀಡಿ ಮಾನವೀಯ ಸೇವೆಗಳಿಗೆ ಕೈಜೋಡಿಸಿರುವುದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಕೇವಲ ನಾಲ್ಕು ವರ್ಷಗಳಲ್ಲಿ ನಾಲ್ಕು ಪಟ್ಟು ಸಂಪಾದನೆ ಮಾಡಿದ್ದು, ಮುಂದಿನ ವರ್ಷ ಮತ್ತೆ 100 ಕೋಟಿ ರೂ. ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಬಿ.ಎಂ. ಭಟ್ ಪ್ರಶಂಸಿಸಿದರು.
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಇದು ಕೇಂದ್ರ ಸರ್ಕಾರ ಅಧಿಕಾರ ನೀಡಿದ ಜನರ ಕೂಗಿಗೆ ತಕ್ಷಣವೇ ಸ್ಪಂದಿಸುವ ಮನೋಭಾವ ಇರುವ ಸರ್ಕಾರ ಎಂದು ಮತ್ತೊಮ್ಮೆ ದೇಶಕ್ಕೆ ಸಂದೇಶ ರವಾನಿಸಿದೆ. ಜೊತೆಗೆ ಶಂಕು ಸ್ಥಾಪನೆ ಮಾಡಿದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ತನ್ನ ಅಧಿಕಾರದ ಅವಧಿಯಲ್ಲಿ ಉದ್ಘಾಟನೆ ಮಾಡುವ ಸಂಪ್ರದಾಯವನ್ನು ಮುಂದುವರೆಸಿ ಇತಿಹಾಸ ನಿರ್ಮಿಸುತ್ತಿದೆ.
ಇದನ್ನು ಓದಿ: ಶಾಕಿಂಗ್: ₹2 ಲಕ್ಷ ಸಾಲಕ್ಕೆ, ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ! 😱
ಎಲ್ಲರೂ ರೋಟರಿ ದತ್ತಿ ನಿಧಿಗೆ ದೇಣಿಗೆ ನೀಡುವುದರ ಮೂಲಕ ರೋಟರಿ ಫೌಂಡೇಶನ್ ಅನ್ನು ಬಲಪಡಿಸಬೇಕು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ರೋಟರಿ ಜಿಲ್ಲೆಯಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ಹೆಸರುವಾಸಿಯಾದ ಕ್ಲಬ್ ಆಗಿದ್ದು, ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ ಎಂದು ಅವರು ಹೇಳಿದರು.
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಹೊಸ ಸದಸ್ಯರ ಸೇರ್ಪಡೆ ಮತ್ತು ಪದಾಧಿಕಾರಿಗಳ ಅಧಿಕಾರ ಹಸ್ತಾಂತರ:
ಇದೇ ಸಂದರ್ಭದಲ್ಲಿ ಮತ್ತೊಬ್ಬ ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್ ಅವರು ರೋಟರಿ ಸಂಸ್ಥೆಗೆ ಹೊಸದಾಗಿ ಸೇರ್ಪಡೆಯಾದ 14 ಜನ ಸದಸ್ಯರಿಗೆ ರೋಟರಿ ಲೇಪನ ಪಿನ್ ನೀಡಿ, ಪ್ರಮಾಣ ಪತ್ರ ನೀಡಿ ಗೌರವಿಸಿದರು.
ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣ್ ಗೌಡ ಅವರು ಕ್ಲಬ್‌ನ ಮುಖವಾಣಿ ಭಾಸ್ಕರ ಪತ್ರಿಕೆ ಯನ್ನು ಬಿಡುಗಡೆ ಮಾಡಿ ಮಾತನಾಡಿದರು. ವಲಯ ಸೇನಾನಿ ಕಿರಣ್ ಕುಮಾರ್ ಅವರು ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಶುಭಾಶಯ ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವದ ನೂತನ ಅಧ್ಯಕ್ಷರಾಗಿ ನೆಪ್ಚೂನ್ ಕಿಶೋರ್ ಅವರು ಅರುಣ್ ದೀಕ್ಷಿತ್ ಅವರಿಂದ ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಅವರಿಂದ ಡಾ. ಧನಂಜಯ ರಾಂಪುರ ಅವರು ಅಧಿಕಾರ ವಹಿಸಿಕೊಂಡರು.
ಇದನ್ನು ಓದಿ: ನದಿಗೆ ತಳ್ಳಲ್ಪಟ್ಟರೂ ಬದುಕುಳಿದ ಪತಿ; ಪತ್ನಿಗೆ ವಿಚ್ಛೇದನ ನೀಡಲು ನಿರ್ಧಾರ! ಏನಿದು ವೈರಲ್ ಸುದ್ದಿ??🟢🟣
ಮಾನವೀಯ ನೆರವು:
ಕಾರ್ಯಕ್ರಮದ ವೇಳೆ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗೆ ಕೃತಕವಾದ ಕಾಲು ಜೋಡಿಸಲು ಧನಸಹಾಯವನ್ನು ಮಾಡಲಾಯಿತು. ಮಾಜಿ ಸಹಾಯಕ ಗವರ್ನರ್ ಜಿ. ವಿಜಯಕುಮಾರ್, ಕ್ಲಬ್ ಮಾಜಿ ಅಧ್ಯಕ್ಷರು, ಸಹಾಯಕ ಗವರ್ನರ್ ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾಜಕ್ಕೆ ರೋಟರಿ ಸಂಸ್ಥೆಯ ಕೊಡುಗೆ ನಿಜಕ್ಕೂ ಶ್ಲಾಘನೀಯ! ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. 👇
ಇದನ್ನು ಓದಿ: ಶರಾವತಿ ಮುಕುಟಕ್ಕೆ ಹೊಸ ಸೇತುವೆ ಸೊಬಗು: ಸಿಗಂಧೂರು ಸಿಂಧೂರ ರಾಷ್ಟ್ರಕ್ಕೆ ಅರ್ಪಣೆ – ಆರು ದಶಕಗಳ ಹೋರಾಟಕ್ಕೆ ಮುಕ್ತಿ!
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply