ಶಿವಮೊಗ್ಗ: ಜಿಲ್ಲೆಯ ಸೊರಬ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ‘ಪ್ರಕೃತಿ ಮೆಡಿಕಲ್ಸ್’ ಮಾಲೀಕ ಹರೀಶ್ ಭಟ್ ಎಂಬುವರು ಮೆಡಿಕಲ್ಸ್ ಮಾರಾಟದ ನೆಪದಲ್ಲಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊಟ್ಟ ಹಣವನ್ನು ವಾಪಸ್ ಕೇಳಿದಾಗ,ಪುನೀತ್ ಕುಮಾರ್ ಎಂಬುವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ಹೆಸರಿಡಿದು ಬೈದ ಕಾರಣ ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಅವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ಸೊರಬದ ಪ್ರಕೃತಿ ಮೆಡಿಕಲ್ಸ್ ಮಾಲೀಕ ಹರೀಶ್ ಭಟ್ ಅವರು ಪುನೀತ್ ಕುಮಾರ್ ಎಂಬುವರಿಗೆ ತಮ್ಮ ಮೆಡಿಕಲ್ಸ್ ಮಾರಾಟ ಮಾಡಲು ಮಾತುಕತೆ ನಡೆಸಿದ್ದರು. 2024ರ ಆಗಸ್ಟ್ 31ರಂದು ಹಲವರ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಪ್ರಕೃತಿ ಮೆಡಿಕಲ್ಸ್ ಮಾರಾಟ ಮಾಡಲು ಒಪ್ಪಿಕೊಂಡಿದ್ದರು. ಮೆಡಿಕಲ್ಸ್ ಖರೀದಿಸಲು ಪುನೀತ್ ಕುಮಾರ್ ಹರೀಶ್ ಭಟ್‌ಗೆ ನಗದು ಮತ್ತು ಚೆಕ್ ಮೂಲಕ ಹಂತ ಹಂತವಾಗಿ 35 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು.
ಇದನ್ನು ಓದಿ: ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ‘ರಾಜಕೀಯ ಕೆಸರೆರೆಚಾಟ’: ಸಂಸದ ಬಿ.ವೈ. ರಾಘವೇಂದ್ರ ತೀವ್ರ ಬೇಸರ!
ಆದರೆ, ಹಣ ಪಡೆದ ನಂತರವೂ ಹರೀಶ್ ಭಟ್ ಅವರು ಪ್ರಕೃತಿ ಮೆಡಿಕುಲ್ಸ್ ಅನ್ನು ಪುನೀತ್ ಕುಮಾರ್ ಹೆಸರಿಗೆ ಮಾಡಿಕೊಡದೇ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಹತ್ತಾರು ತಿಂಗಳಿನಿಂದ ಮೆಡಿಕಲ್ಸ್ ಅನ್ನು ಪುನೀತ್ ಕುಮಾರ್ ಹೆಸರಿಗೆ ಮಾಡಿಕೊಡದೇ, ಕೊಟ್ಟ ಹಣವನ್ನು ಹಿಂದಿರುಗಿಸದೇ ಹರೀಶ್ ಭಟ್ ಕೈಗೆ ಸಿಗದಂತೆ ಓಡಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನು ಓದಿ : ಸಿಗಂದೂರು ಲಾಂಚ್‌ಗಳು ಇನ್ನು ಬೋಟ್ ಹೋಟೆಲ್‌ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಇದನ್ನು ಓದಿ: ಶಾಕಿಂಗ್: ₹2 ಲಕ್ಷ ಸಾಲಕ್ಕೆ, ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ! 😱
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಈ ದೂರಿನ ಆಧಾರದ ಮೇಲೆ, ಸೊರಬ ಠಾಣೆಯಲ್ಲಿ 2025ರ ಜುಲೈ 15ರಂದು ಪ್ರಕೃತಿ ಮೆಡಿಕಲ್ಸ್ ಮಾಲೀಕ ಹರೀಶ್ ಭಟ್ ಮತ್ತು ಅವರ ಪತ್ನಿ ವಸುದಾ ಭಟ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 115(2), 352, 318(4), 351(2), 3(5) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ 2015 ರ ಕಲಂ 3(1)(ಆರ್), (ಎಸ್), 3(2)(ವಿಎ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಸೊರಬ ಠಾಣೆಯ ಪೊಲೀಸರು, ಪ್ರಕೃತಿ ಮೆಡಿಕಲ್ಸ್ ಮಾಲೀಕ ಹರೀಶ್ ಭಟ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನು ಓದಿ: ಸಾಗರದಲ್ಲಿ ಭೀಕರ ಅಪಘಾತ: ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಾಯ!
ಇದನ್ನು ಓದಿ: ಶರಾವತಿ ಮುಕುಟಕ್ಕೆ ಹೊಸ ಸೇತುವೆ ಸೊಬಗು: ಸಿಗಂಧೂರು ಸಿಂಧೂರ ರಾಷ್ಟ್ರಕ್ಕೆ ಅರ್ಪಣೆ – ಆರು ದಶಕಗಳ ಹೋರಾಟಕ್ಕೆ ಮುಕ್ತಿ!
ಹೆಚ್ಚಿನ ಮಾಹಿತಿ ಹಾಗೂ ಕ್ಷಣ ಕ್ಷಣದ ಶಿವಮೊಗ್ಗ ಸುದ್ದಿಗಳಿಗಾಗಿ ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ವೀಕ್ಷಿಸುತ್ತಿರಿ.
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply