ಬೆಂಗಳೂರು: 1975ರ ಕರಾಳ ತುರ್ತು ಪರಿಸ್ಥಿತಿಗೆ 50 ವರ್ಷಗಳಾದ ಹಿನ್ನೆಲೆಯಲ್ಲಿ ರಾಷ್ಟೋತ್ಥಾನ ಬಳಗ ಶಿವಮೊಗ್ಗ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು, “ಈ ದೇಶಕ್ಕೆ ಇನ್ನೆಂದೂ ತುರ್ತು ಪರಿಸ್ಥಿತಿ ಎದುರಿಸುವ ಅನಿವಾರ್ಯತೆ ಬೀಳುವುದಿಲ್ಲ. ಏಕೆಂದರೆ 1975ರ ಭಾರತ, ಅಂದಿನ ಆರ್‌ಎಸ್‌ಎಸ್, ಅಂದಿನ ಎಬಿವಿಪಿ ಎಲ್ಲವೂ ಇಂದು ಬದಲಾಗಿವೆ” ಎಂದು ಹೇಳಿದರು.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ದ್ವಾರಕ ಸಭಾಂಗಣದಲ್ಲಿ ನಡೆದ “ದೇಶ ಅನುಭವಿಸಿದ ಕರಾಳ ತುರ್ತು ಪರಿಸ್ಥಿತಿಗೆ 50 ವರ್ಷಗಳು” ವಿಷಯದ ಕುರಿತು ಮಾತನಾಡಿದ ಸಂತೋಷ್, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪಕ್ಷವನ್ನು ಕೈವಶ ಮಾಡಿಕೊಂಡು, ಆಡಳಿತವನ್ನು ತಮ್ಮ ಸುತ್ತಲೇ ಕೇಂದ್ರೀಕರಿಸಿ, ನಂತರ ದೇಶವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು ಎಂದು ಅಭಿಪ್ರಾಯಪಟ್ಟರು. ತುರ್ತು ಪರಿಸ್ಥಿತಿ ಹೇರುವ ಮುನ್ನವೇ ಇಂದಿರಾ ಗಾಂಧಿ ಪ್ರಜಾಪ್ರಭುತ್ವದಿಂದ ವಿಮುಖರಾಗಿದ್ದರು ಎಂಬುದಕ್ಕೆ ಕೀನ್ಯಾದಲ್ಲಿ ಅವರು ನೀಡಿದ್ದ ಭಾಷಣದಲ್ಲಿನ ಹೇಳಿಕೆಯನ್ನು ಉದಾಹರಿಸಿದರು.
ಇದನ್ನು ಓದಿ: ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ‘ರಾಜಕೀಯ ಕೆಸರೆರೆಚಾಟ’: ಸಂಸದ ಬಿ.ವೈ. ರಾಘವೇಂದ್ರ ತೀವ್ರ ಬೇಸರ!
“ಅಂದು ದೇಶದಲ್ಲಿ ಸರ್ವವ್ಯಾಪಿಯಾಗಿದ್ದ ಕಾಂಗ್ರೆಸ್ ಈಗ ಶಕ್ತಿ ಕಳೆದುಕೊಂಡಿದೆ. ಅಂದು ನಮ್ಮ ಮನೆಗಳನ್ನು ಹಾಳು ಮಾಡಿದವರು ಇಂದು ತಮ್ಮ ಮನೆ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು. ಈ ದೇಶ ಸ್ವಾತಂತ್ರ್ಯ ವಿಚಾರದಲ್ಲಿ ಯಾವ ಕಾಲದಲ್ಲಿಯೂ ರಾಜಿ ಮಾಡಿಕೊಳ್ಳಲಿಲ್ಲ. ದೈತ, ಅದ್ವೈತ, ವಿಶಿಷ್ಟಾದ್ವೈತಗಳ ನಡುವೆಯೂ ಹಿಂಸೆ ನಡೆದಿಲ್ಲ, ವಿಚಾರದ ವಶವನ್ನು ಒಪ್ಪಲಿಲ್ಲ ಎಂದು ಸಂತೋಷ್ ಹೇಳಿದರು.
ಇದನ್ನು ಓದಿ : ಸಿಗಂದೂರು ಲಾಂಚ್‌ಗಳು ಇನ್ನು ಬೋಟ್ ಹೋಟೆಲ್‌ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ರಾಷ್ಟೋತ್ಥಾನ ಬಳಗದ ಅಧ್ಯಕ್ಷ ಡಾ.ಪಿ.ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮರು ಮುದ್ರಿತಗೊಂಡ “ಭುಗಿಲು” ಕೃತಿಯನ್ನು ಬಿಡುಗಡೆ ಮಾಡಲಾಯಿತು. ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮಾತನಾಡಿ, ಇಂದಿನ ಜನಾಂಗ “ಭುಗಿಲು” ಪುಸ್ತಕವನ್ನು ಓದಬೇಕು ಎಂದರು. ಖ್ಯಾತ ರಂಗಕರ್ಮಿ ಪ್ರಕಾಶ್ ಬೆಳವಾಡಿ, ತಾನು ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ತುರ್ತು ಪರಿಸ್ಥಿತಿಯ ಹೆಚ್ಚು ಅರ್ಥ ಆಗಿರಲಿಲ್ಲ ಎಂದು ಸ್ಮರಿಸಿದರು.
ಇದನ್ನು ಓದಿ: ಶಾಕಿಂಗ್: ₹2 ಲಕ್ಷ ಸಾಲಕ್ಕೆ, ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ! 😱
“ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಅಂತ ಭಟ್ಟಂಗಿಗಳು ಹೇಳಿದ್ದರು. ಆಡಳಿತ, ಪಕ್ಷ ಎಲ್ಲವನ್ನು ವಶ ಮಾಡಿಕೊಳ್ಳಲು ನೋಡಿದರು. ತಮ್ಮ ಸುತ್ತ ಅಧಿಕಾರ ಇರುವಂತೆ ನೋಡಿಕೊಂಡಿದ್ದರು. ತಮ್ಮ ಸ್ವಾರ್ಥಕ್ಕೆ ಅನುಯಾಯಿ ತರ ಕೆಲವರು ಇದ್ದರು. ಇದು ಆಗಬಾರದು” ಎಂದ ಪ್ರಕಾಶ್ ಬೆಳವಾಡಿ, ಈ ದೇಶದಲ್ಲಿ ಸತ್ಯ ಯಾವತ್ತೂ ನಾಶ ಆಗುವುದಿಲ್ಲ, ಸಮಯ ತೆಗೆದುಕೊಳ್ಳಬಹುದು ಎಂದರು.
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ರಾಷ್ಟೋತ್ಥಾನ ಪರಿಷತ್‌ನ ಡಾ. ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮಕ್ಕೆ ಸಭಾಂಗಣ ತುಂಬಿ ತುಳುಕಿತ್ತು. ಕಾರ್ಯಕ್ರಮ ಆರಂಭಕ್ಕೂ ಮೊದಲೇ ಸಭಾಂಗಣ ಸಂಪೂರ್ಣ ಭರ್ತಿಯಾಗಿದ್ದು, ನೂರಾರು ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮ ಆಯೋಜಿಸಲು ರಂಗಮಂದಿರ ನಿರಾಕರಿಸುವಂತೆ ಮಾಡಿದವರು ಹೊಟ್ಟೆಕಿಚ್ಚು ಪಡುವಷ್ಟು ಸಂಖ್ಯೆಯ ಜನರು ಸೇರಿದ್ದರು ಎಂದು ಆಯೋಜಕರು ಸಂತಸ ವ್ಯಕ್ತಪಡಿಸಿದರು.
ಇದನ್ನು ಓದಿ: ಸಾಗರದಲ್ಲಿ ಭೀಕರ ಅಪಘಾತ: ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಾಯ!
ಗಾಂಧಿ ವ್ಯಕ್ತಿತ್ವ ಮತ್ತು ಗಾಂಧಿ ಹೆಸರು 1975ರವರೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. ಜನರಲ್ಲಿ ಕಾಂಗ್ರೆಸ್ ಬಗ್ಗೆ ಕೃತಜ್ಞತೆ ಇತ್ತು. “ನಮ್ಮ ದೇಶದಲ್ಲಿ ಭಟ್ರು ಮಗ ಭಟ್ರು, ಶೆಟ್ರು ಮಗ ಶೆಟ್ರು ಆಗಿರುತ್ತಾರೆ. ಆದರೆ ನೆಹರು ಮಕ್ಕಳು ಗಾಂಧಿ ಆಗಿದ್ದು ವಿಶೇಷ” ಎಂದರು.
ಇದನ್ನು ಓದಿ: ಶರಾವತಿ ಮುಕುಟಕ್ಕೆ ಹೊಸ ಸೇತುವೆ ಸೊಬಗು: ಸಿಗಂಧೂರು ಸಿಂಧೂರ ರಾಷ್ಟ್ರಕ್ಕೆ ಅರ್ಪಣೆ – ಆರು ದಶಕಗಳ ಹೋರಾಟಕ್ಕೆ ಮುಕ್ತಿ!
ಸಂವಿಧಾನಕ್ಕೆ ಹೆಚ್ಚು ಅನ್ಯಾಯ ಅತ್ಯಾಚಾರ ಮಾಡಿರುವುದು ಕಾಂಗ್ರೆಸ್ ಎಂದು ಆರೋಪಿಸಿದ ಸಂತೋಷ್, ಈಗ ರಾಹುಲ್ ಗಾಂಧಿ ಸಂವಿಧಾನ ಕೈಯಲ್ಲಿ ಹಿಡಿದು ಓಡಾಡುತ್ತಾರೆ, ಬ್ರಾಂಡ್ ಮಾಡಲು ಓಡಾಡುತ್ತಾರೆ ಎಂದು ಟೀಕಿಸಿದರು. ಸೆಕ್ಯುಲರ್ ಮತ್ತು ಸೋಷಿಯಲಿಸಂ ಬಗ್ಗೆ ನಮಗೆ ತೊಂದರೆ ಇಲ್ಲ, ಸರ್ವರಿಗೂ ಸಮಬಾಳು ಎಂದು ನಾವು ಹೇಳಿದ್ದೇವೆ. ಅಂಬೇಡ್ಕರ್ ಮೂಲ ಸಂವಿಧಾನ ಬರಲಿ ಎಂಬುದು ನಮ್ಮ ಆಶಯ ಎಂದರು.
ಹೆಚ್ಚಿನ ಮಾಹಿತಿ ಹಾಗೂ ಕ್ಷಣ ಕ್ಷಣದ ಶಿವಮೊಗ್ಗ ಸುದ್ದಿಗಳಿಗಾಗಿ ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ವೀಕ್ಷಿಸುತ್ತಿರಿ.
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply