ಶಿವಮೊಗ್ಗ: ಇ-ಸ್ವತ್ತು ಮಾಡಿಕೊಡಲು ₹3,000 ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆಯುತ್ತಿದ್ದಾಗ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರನಾಯ್ಕ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದಿದ್ದಾರೆ. ಈ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ಲೋಕಾಯುಕ್ತ ಪತ್ರಿಕಾ ಪ್ರಕಟಣೆಯ ಪ್ರಕಾರ, ಶಿವಮೊಗ್ಗ ತಾಲ್ಲೂಕು, ಶ್ರೀರಾಮಪುರ ಗ್ರಾಮದ ವಿನೋದ್ ಬಿ. ಎಂಬುವರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ತಾಯಿಯ ಹೆಸರಿನಲ್ಲಿರುವ 30×50 ಅಳತೆಯ ಸೈಟ್ನಲ್ಲಿ ನಿರ್ಮಿಸಿರುವ 23×38 ಅಡಿ ಮನೆಯ ಇ-ಸ್ವತ್ತು ಮಾಡಿಸಲು ಕಳೆದ ವರ್ಷ ನವೆಂಬರ್ 28ರಂದು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನು ಓದಿ: ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ‘ರಾಜಕೀಯ ಕೆಸರೆರೆಚಾಟ’: ಸಂಸದ ಬಿ.ವೈ. ರಾಘವೇಂದ್ರ ತೀವ್ರ ಬೇಸರ!
ಇದನ್ನು ಓದಿ : ಸಿಗಂದೂರು ಲಾಂಚ್ಗಳು ಇನ್ನು ಬೋಟ್ ಹೋಟೆಲ್ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಇ-ಸ್ವತ್ತು ಮಾಡಿಕೊಡುವಂತೆ ಹಲವು ಬಾರಿ ಕಾರ್ಯದರ್ಶಿ ಕುಮಾರನಾಯ್ಕ ಅವರನ್ನು ಸಂಪರ್ಕಿಸಿದಾಗ, ಅವರು ಕೆಲಸ ಮಾಡದೆ ಅಲೆದಾಡಿಸುತ್ತಿದ್ದರು. ನಂತರ ₹3,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ನೀಡಲು ಇಷ್ಟವಿಲ್ಲದ ವಿನೋದ್, ಕುಮಾರನಾಯ್ಕ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ವಾಯ್ಸ್ ರೆಕಾರ್ಡ್ ಮಾಡಿಕೊಂಡು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ಕಲಂ 7(3) ರಡಿ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ: ದೇಶಕ್ಕೆ ಮತ್ತೆ ತುರ್ತು ಪರಿಸ್ಥಿತಿ ಬರುವುದಿಲ್ಲ: ಬಿ.ಎಲ್.ಸಂತೋಷ್ ಭರವಸೆ
ಇದನ್ನು ಓದಿ: ಕ್ರೆಡಿಟ್ ಕಾರ್ಡ್ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಇದನ್ನು ಓದಿ: ಸೊರಬದ ‘ಪ್ರಕೃತಿ ಮೆಡಿಕಲ್ಸ್’ ಮಾಲೀಕ ಹರೀಶ್ ಭಟ್ ವಿರುದ್ಧ ಜಾತಿ ನಿಂದನೆ ಕೇಸ್: ಅರೆಸ್ಟ್, ಜೈಲುಪಾಲು!
ಇಂದು (ಜುಲೈ 17, 2025) ಮಧ್ಯಾಹ್ನ 2:10 ರ ಸುಮಾರಿಗೆ, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಚೇರಿಯಲ್ಲಿ ಕುಮಾರನಾಯ್ಕ ಅವರು ದೂರುದಾರರಿಂದ ₹3,000 ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ. ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು, ಆರೋಪಿ ಕುಮಾರನಾಯ್ಕ ಅವರನ್ನು ವಶಕ್ಕೆ ಪಡೆದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುರಾಜ್ ಎನ್ ಮೈಲಾರ ಅವರು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ: ಶರಾವತಿ ಮುಕುಟಕ್ಕೆ ಹೊಸ ಸೇತುವೆ ಸೊಬಗು: ಸಿಗಂಧೂರು ಸಿಂಧೂರ ರಾಷ್ಟ್ರಕ್ಕೆ ಅರ್ಪಣೆ – ಆರು ದಶಕಗಳ ಹೋರಾಟಕ್ಕೆ ಮುಕ್ತಿ!
ಹೆಚ್ಚಿನ ಮಾಹಿತಿ ಹಾಗೂ ಕ್ಷಣ ಕ್ಷಣದ ಶಿವಮೊಗ್ಗ ಸುದ್ದಿಗಳಿಗಾಗಿ ಶಿವಮೊಗ್ಗ ಎಕ್ಸ್ಪ್ರೆಸ್ ನ್ಯೂಸ್ ವೀಕ್ಷಿಸುತ್ತಿರಿ.
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply