ಸಾರಿಗೆ ನಿಗಮದ ಈ ನಿರ್ಧಾರ ಎಷ್ಟರಮಟ್ಟಿಗೆ ಸಮಂಜಸ?
ಮಾಹಿತಿ ಹಕ್ಕು ಅರ್ಜಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ನೀಡಿರುವ ಮಾಹಿತಿಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಸಾಕು ಪ್ರಾಣಿಗಳನ್ನು ಪ್ರಯಾಣ ಟಿಕೇಟು ಖರೀದಿಸಿ ತೆಗೆದು ಕೊಂಡು ಹೋಗಲು ಅವಕಾಶ ಇದೆ ಎಂದು ಹೇಳಿರುತ್ತಾರೆ. ನಾಯಿಯನ್ನು ಒಬ್ಬ ವಯಸ್ಕರ ಪ್ರಯಾಣಿಕರಂತೆ ಪರಿಗಣಿಸಿ ದರ ವಿಧಿಸಿದ್ದರೆ ಮೊಲ, ನಾಯಿಮರಿ, ಬೆಕ್ಕು ಪಂಜರದಲ್ಲಿರುವ ಪಕ್ಷಿಗೆ ಮಕ್ಕಳ ದರ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಫ್ರಿಜ್, ಬೈಸಿಕಲ್, ವಾಷಿಂಗ್ ಮಷೀನ್, ಕಾರ್ ಟೈಯರ್, ಟೇಬಲ್ ಫ್ಯಾನ್, ಟೀವಿ, ಕಂಪ್ಯೂಟರ್ ಇತ್ಯಾದಿಗಳನ್ನು ಅವುಗಳ ಗಾತ್ರ ,ತೂಕಕ್ಕನುಗುಣವಾಗಿ ವಿವಿಧ ಯೂನಿಟ್ ಗಳನ್ನಾಗಿ ಪರಿಗಣಿಸಿ ಟಿಕೆಟ್ ದರ ನಿಗದಿಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ನಿಜಕ್ಕೂ ಇದು ಒಂದು ಯೋಗ್ಯ ತೀರ್ಮಾನವೇ? ಅಧಿಕಾರಿಗಳು ಇದರ ಅನಾನುಕೂಲತೆ, ಸಂಭಾವ್ಯ ಅಪಾಯ ಊಹಿಸಿರುವರೆ?
ಈಗಾಗಲೇ ಕೆಂಪು ಬಸ್ಸುಗಳಲ್ಲಿ ಜನರಿಗೆ ಪ್ರಯಾಣ ಮಾಡುವುದು ಪ್ರಯಾಸದ ಕೆಲಸ ವಾಗಿರುವ ಸಂದರ್ಭದಲ್ಲಿ ಇನ್ನು ಪ್ರಾಣಿ, ಪಕ್ಷಿ, ಮನೆ ಸರಂಜಾಮುಗಳ ದೊಡ್ಡ ಮೂಟೆಗಳ ಮಧ್ಯೆ ಸೀಟುಸಿಕ್ಕಿ ಕುಳಿತು ಪ್ರಯಾಣಿಸುವುದು ಬಿಡಿ, ನಿಂತು ಪ್ರಯಾಣಿಸಲೂ ಅಸಾಧ್ಯ ಎನ್ನುವ ಸನ್ನಿವೇಶ ಬರಬಹುದು. ಹಣ ತೆತ್ತ ಪ್ರಯಾಣಿಕನಿಗೆ ನೆಮ್ಮದಿಯ ಪ್ರಯಾಣವಂತೂ ಕನಸೇ ಇರಬಹುದು.
ಇದನ್ನು ಓದಿ : ಸಿಗಂದೂರು ಲಾಂಚ್‌ಗಳು ಇನ್ನು ಬೋಟ್ ಹೋಟೆಲ್‌ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಇನ್ನು ಮನೆಯ ವಾತಾವರಣದಿಂದ ಹೊರ ಬಂದ ನಾಯಿ ಇತರೆ ಸಾಕು ಪ್ರಾಣಿಗಳು ಪ್ರಯಾಣಿಕರಿಗೆ ಕಚ್ಚುವುದು, ಭಯಪಡಿಸುವುದು ಮಾಡುವುದಿಲ್ಲ ಎಂಬುದಕ್ಕೆ ಖಾತ್ರಿ ಏನು? ಒಂದು ವೇಳೆ ಪ್ರಯಾಣಿಕರಿಗೆ ಕಚ್ಚಿದರೆ ಚಿಕಿತ್ಸೆ ವೆಚ್ಚ, ಮಾನಸಿಕ ಆಘಾತಗಳಿಗೆ ಇಲಾಖೆ ಸೂಕ್ತ ಪರಿಹಾರ ನೀಡುವುದೆ?
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಎಲ್ಲಾ ಬಸ್ ನಿಲ್ದಾಣಗಳಲ್ಲಿ ಬಸ್ ಹತ್ತಲು ನೂಕುನುಗ್ಗಲು ಸಾಮಾನ್ಯ. ಇದರ ಜೊತೆಗೆ ನಾಯಿ, ಇತರೆ ಸಾಕುಪ್ರಾಣಿಗಳನ್ನು ನುಗ್ಗಿಸಲು ಪ್ರಯತ್ನಿಸಿದರೆ ಅಪಾಯವಾಗುವುದಿಲ್ಲ ಎಂಬುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡುವರೇ?
ಒಂದು ನಾಯಿಗೆ ವಯಸ್ಕ ಪ್ರಯಾಣಿಕನ ಟಿಕೇಟು ದರ ನೀಡಿದ ಮೇಲೆ ನಾಯಿ ಸೀಟಿನ ಮೇಲೆ ಕೂರಬಹುದಲ್ಲವೆ? ಪ್ರಯಾಣದ ವೇಳೆ ನಾಯಿ ಮಲ ಮೂತ್ರ ಮಾಡಿದರೆ ಅದನ್ನು ಮಾಲೀಕ ಸ್ವಚ್ಛಗೊಳಿಸಬೇಕೊ ಅಥವಾ ಬಡಪಾಯಿ ಕಂಡಕ್ಟರ್ ನ ಕೆಲಸ ಅಂತ ನಿರ್ಧರಿಸಿದ್ದಾರೊ?
ಇನ್ನು ಮರಿ ನಾಯಿಗೆ ಮಕ್ಕಳ ಟಿಕೆಟ್ ದರ ಅಂತ ತಿಳಿಸಿದ್ದಾರೆ. ಜನರು ಈಗ ಅನೇಕ ಜಾತಿಯ ನಾಯಿಗಳನ್ನು ಸಾಕುತ್ತಿರುವುದರಿಂದ ಅವುಗಳ ಗಾತ್ರ ಇತ್ಯಾದಿ ಗಳಿಂದ ವಯಸ್ಸು ನಿರ್ಧರಿಸುವುದು ಕಷ್ಟ. ನಾಯಿ ಇನ್ನೂ ಮರಿಯಾಗಿದೆ ಅಥವಾ ದೊಡ್ಡದಾಗಿದೆ ಎಂದು ಟಿಕೆಟ್ ನೀಡುವ ಕಂಡಕ್ಟರ್ ನಿರ್ಧರಿಸುವುದು ಹೇಗೆ? ಇದು ನಾಯಿ ಮಾಲೀಕ ಹಾಗೂ ಬಸ್ ನಿರ್ವಾಹಕನ ನಡುವೆ ವಾಗ್ವಾದಕ್ಕೆ ಕಾರಣವಾಗಬಹುದಲ್ಲವೆ?
ಇದನ್ನು ಓದಿ: ಡಾ. ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ: ನಿರ್ದೇಶಕ ಅನಿರುದ್ಧ ಜತ್ಕರ್ ಮನವಿ!
ಈಗಾಗಲೇ ಸಾಗಣಿಕೆ ಸಾದ್ಯವಿರುವ ಲಗ್ಗೇಜ್ ಗಳಿಗೆ ಪ್ರತ್ಯೇಕ ದರ ನಿಗದಿ ಇದ್ದು ಅವುಗಳು ಸೂಕ್ತವೂ ಆಗಿದೆ.
ಆದರೆ ಪ್ರಾಣಿ ಪಕ್ಷಿಗಳನ್ನು ಜನ ಸಾಗಿಸುವ ವಾಹನದಲ್ಲಿ ಸಾಗಿಸ ಹೊರಟರೆ ಅವರು ತಿಳಿಸಿದ ಹಾಗೆ ನಾಯಿಗೆ ಒಬ್ಬ ವಯಸ್ಕ ಪ್ರಯಾಣಿಕನ ದರ ನಿಗದಿಯಂತೆ ಒಬ್ಬ ವಯಸ್ಕ ಪ್ರಯಾಣಿಕನ ಪ್ರಯಾಣವೂ ನಾಯಿ ಪಾಡು ಎನ್ನುವುದು ಸದ್ಯದ ಪರಿಸ್ಥಿತಿ!
ಏನಂತೀರಿ?
-ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ
(ಕೆಂಪು ಬಸ್ ಪ್ರಯಾಣಿಕ)
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply