ಸದ್ದಿಲ್ಲದೆ ಹೆಚ್ಚುತ್ತಿದೆ ಶಬ್ದ ಮಾಲಿನ್ಯ!

ಇಂದು ಮಹಾನಗರಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಶಬ್ದಮಾಲಿನ್ಯವೂ ಒಂದು.

ವಾಹನಗಳ ಕರ್ಕಶ ಶಬ್ದ, ವಾಹನಗಳ ಅನಗತ್ಯ ಹಾರ್ನ್ ಶಬ್ದ, ಕೈಗಾರಿಕೆಗಳ ಶಬ್ದ, ಧ್ವನಿವರ್ಧಕ ಗಳ ಶಬ್ದ, ವಿವಿಧ ಸಂದರ್ಭಗಳಲ್ಲಿ ಸುಡುವ ಪಟಾಕಿ ಶಬ್ದ, ಮೆರವಣಿಗೆ ಮತ್ತು ಉತ್ಸವಗಳಲ್ಲಿ ಮೈಕ್, ಡಿ.ಜೆ.ಗಳ ಶಬ್ದ ಇವುಗಳ ಜೊತೆಗೆ ಇತ್ತೀಚೆಗೆ ಬೀದಿ ಬದಿ, ಕೇರಿ ಕೇರಿ ಸಂಚರಿಸುವ ತಳ್ಳು ಗಾಡಿಯವರ ಸ್ವರ ಮುದ್ರಿತ ಮೈಕಿನ ಶಬ್ದ ಹೀಗೆ ಹತ್ತು ಹಲವಾರು ಶಬ್ದಗಳ ನಡುವೆ ನಾಗರೀಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ.

ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??

ಶಬ್ದವನ್ನು ಗ್ರಹಿಸುವ ನಮ್ಮ ಕಿವಿಗಳ ಸಾಮರ್ಥ್ಯಕ್ಕೂ ಒಂದು ಮಿತಿಯಿದೆ. ಆ ಮಿತಿಯನ್ನು ಮೀರಿದಾಗ ಶಬ್ದಮಾಲಿನ್ಯ ಉಂಟಾಗುತ್ತದೆ. ಸಾಮಾನ್ಯವಾಗಿ ಮನುಷ್ಯ ಸೊನ್ನೆಯಿಂದ 80 ಡೆಸಿಬಲ್ ವರೆಗಿನ ಶಬ್ದವನ್ನು ಆರಾಮವಾಗಿ ಕೇಳಬಲ್ಲನು. ಶಬ್ದದ ಪ್ರಮಾಣ 80 ಡೆಸಿಬಲ್ ದಾಟಿದಾಗ ನಿಧಾನವಾಗಿ ಆ ಶಬ್ದವು ಮನುಷ್ಯನಿಗೆ ಕಿರಿಕಿರಿ ಉಂಟುಮಾಡಲು ಪ್ರಾರಂಭಿಸುತ್ತದೆ. ಶಬ್ದದ ಪ್ರಮಾಣ 140 ಡೆಸಿಬಲ್ ದಾಟಿದಾಗ ಆ ಶಬ್ದವು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಕಿವುಡುತನ, ನಿರಂತರ ತಲೆನೋವು, ಕಣ್ಣುಗಳು ಮಂಜಾಗುವುದು, ಮಾನಸಿಕ ಅಸಮತೋಲನ ಉಂಟಾಗಬಹುದು.ಇತ್ತೀಚಿನ ವರ್ಷಗಳಲ್ಲಿ ನಗರವಾಸಿಗಳಲ್ಲಿ ರಕ್ತದೊತ್ತಡ, ಸಕ್ಕರೆಕಾಯಿಲೆಗಳು ಅತಿಹೆಚ್ಚು ಆಗಲು ಶಬ್ದ ಮಾಲಿನ್ಯ ಹಾಗೂ ಅದರಿಂದ ನಿದ್ದೆಯ ಕೊರತೆ ಕಾರಣವಿರಬಹುದು.

ಇದನ್ನು ಓದಿ : ಸಿಗಂದೂರು ಲಾಂಚ್‌ಗಳು ಇನ್ನು ಬೋಟ್ ಹೋಟೆಲ್‌ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!

ಜಾಹಿರಾತು:

ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!

ನಗರದಲ್ಲಿ ಬದಲಾದ ಜೀವನ ಶೈಲಿಯಿಂದ ಜನರಲ್ಲಿ ನಿದ್ರಾ ಕೊರತೆ ಕಾಡುತ್ತಿದೆ.ಶಿಫ್ಟ್ ಗಳಲ್ಲಿ ಕೆಲಸ ಮಾಡುವವರು, ತಡರಾತ್ರಿ ಮಲಗುವವರಿಗೆ ಬೆಳ್ಳಂಬೆಳಗ್ಗೆಯ ಶಬ್ದ ಮಾಲಿನ್ಯ ಕಾಡಿದರೆ, ಬ್ರಾಹ್ಮೀ ಮುಹೂರ್ತದಲ್ಲಿ ದಿನಚರಿ ಆರಂಭಿಸುವವರಿಗೆ ತಡ ರಾತ್ರಿ ಕಾರ್ಯಕ್ರಮ ಗಳ ಶಬ್ದ ಮಾಲಿನ್ಯ ಕಿರಿಕಿರಿ ಉಂಟು ಮಾಡುತ್ತದೆ.

ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಈಗಾಗಲೇ ಅನೇಕ ಕಾಯಿದೆ ಕಟ್ಟಲೆಗಳು ಜಾರಿಯಲ್ಲಿವೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6.00 ರ ತನಕ ಸಂಪೂರ್ಣ ಕಡಿವಾಣ ಇದೆ. ಆದರೆ ಅವುಗಳ ಕೆಲವು ಸಂದರ್ಭಗಳಲ್ಲಿ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಪಾಲನೆ ಆಗುತ್ತಿಲ್ಲ. ವಿಪರ್ಯಾಸವೆಂದರೆ ಇಂತಿಷ್ಟು ಡೆಸಿಬೆಲ್ ಒಳಗೆ ಶಬ್ದ ಇರಬೇಕು ಎನ್ನುವುದನ್ನು ಅಳೆಯಲು ಸಂಬಂಧ ಪಟ್ಟ ಇಲಾಖೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಾಪನಗಳೇ ಇಲ್ಲ. ಸರ್ಕಾರವು ನಗರದ ಎಲ್ಲಾ ಪೊಲೀಸ್ ಸ್ಟೇಶನ್ ಗಳಿಗೆ ಮಾಪಕಗಳನ್ನು ನೀಡಬೇಕು. ಹಾಗೂ ಶಬ್ದ ಮಾಲಿನ್ಯ ತಡೆಗೆ ಇನ್ನಷ್ಟು ಕಾನೂನು ಬಲ ನೀಡಬೇಕು.

ಇದನ್ನು ಓದಿ: ಡಾ. ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ: ನಿರ್ದೇಶಕ ಅನಿರುದ್ಧ ಜತ್ಕರ್‌ ಮನವಿ!

ಹಾಗಾದರೆ ಎಲ್ಲವೂ ಕಾನೂನಿನಿಂದಲೇ ಪರಿಹಾರವಾಗಬಲ್ಲುದೆ? ಖಂಡಿತಾ ಇಲ್ಲ. ಇದಕ್ಕೆ ಜನಜಾಗೃತಿ ಆಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರು ನಾಗರೀಕ ಶಿಷ್ಟಾಚಾರ ಬೆಳೆಸಿಕೊಳ್ಳಬೇಕು. 

ವಾಹನ ಚಲಾಯಿಸುವ ವೇಳೆ ತಾಳ್ಮೆ ವಹಿಸಬೇಕು, ಅನಗತ್ಯವಾಗಿ ಹಾರ್ನ್ ಮಾಡಲೇಬಾರದು. ( ಟ್ರಾಫಿಕ್ ಜಾಮ್ ಪರಿಹಾರಕ್ಕೆ ನಿಯಮ ಪಾಲನೆ ಹೊರತು ಹಾರ್ನ್ ಅಲ್ಲ!)

ಆಸ್ಪತ್ರೆ ಸರಹದ್ದಿನಲ್ಲಿ ಹಾರ್ನ್ ನಿಷೇಧವನ್ನು ಪಾಲಿಸಬೇಕು. ರೈಲು, ಬಸ್ಸು ಮುಂತಾದ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವ ವೇಳೆ ಇಯರ್ ಫೋನ್ ಬಳಸದೆ ಮೊಬೈಲ್ ನಲ್ಲಿ ಜೋರಾಗಿ ಹಾಡು , ಸಿನೆಮಾ ಇತ್ಯಾದಿ ಹಾಕಿಕೊಂಡು ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು ಮಾಡಬಾರದು. 

ಸಭೆ ಸಮಾರಂಭಗಳಲ್ಲಿ ಮಾತ್ರವಲ್ಲದೆ ವೈಯಕ್ತಿಕ ಸಂದರ್ಭಗಳಲ್ಲಿ ಸಹ ನಾಗರೀಕ ಶಿಷ್ಟಾಚಾರ ಪಾಲಿಸಬೇಕು.

ವಾಯು ಮಾಲಿನ್ಯ, ಜಲ ಮಾಲಿನ್ಯಗಳಿಂದ ಉಂಟಾಗುವ ದುಷ್ಪರಿಣಾಮಗಳಷ್ಟೇ ಶಬ್ದ ಮಾಲಿನ್ಯದಿಂದ ಆಗುತ್ತಿದೆ. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಆಡಳಿತ ಹೆಚ್ಚು ಗಮನ ಹರಿಸಬೇಕಾಗಿದೆ. ಚುನಾಯಿತ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಕಾನೂನನ್ನು ಬಲಪಡಿಸಬೇಕಾಗಿದೆ. ಈ ಬಗ್ಗೆ ಇಚ್ಛಾಶಕ್ತಿ ತೋರಬೇಕಾಗಿದೆ.

ಇದನ್ನು ಓದಿ: ಧರ್ಮಸ್ಥಳ ಅನುಮಾನಾಸ್ಪದ ಸಾವು ಪ್ರಕರಣ: ಕೊನೆಗೂ SIT ರಚಿಸಿದ ರಾಜ್ಯ ಸರ್ಕಾರ! ಆದೇಶದ ಪ್ರತಿ ಇಲ್ಲಿದೆ ನೋಡಿ!!

ಮೈಕ್ ಗಳನ್ನು ಬಳಸಲು ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕು ಎಂಬ ಕಾನೂನು ದೊಡ್ಡ ಮೈಕ್ ಗಳಿಗಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಬಳಸುವ ಸಣ್ಣ ಮೈಕ್ ಗಳಿಗೂ ಅನ್ವಯಿಸಬೇಕು. ಇತ್ತೀಚೆಗೆ ಕಡಿಮೆ ಬೆಲೆಯಲ್ಲಿ ಸಿಗುವ ಹ್ಯಾಂಡ್ ಮೈಕ್ ಗಳನ್ನು ಅನೇಕ ಕಡೆ ಬಳಸುತ್ತಿದ್ದು ಅವುಗಳ ನಿರಂತರ ಶಬ್ದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇವುಗಳಿಗೆ ಕಡಿವಾಣ ಹಾಕಬೇಕಾಗಿದೆ. 

ವಿಧ್ಯಾರ್ಥಿಗಳ ಪರೀಕ್ಷಾ ತಯಾರಿ ವೇಳೆಯಲ್ಲಿ( ಫೆಬ್ರವರಿ , ಮಾರ್ಚ್, ಎಪ್ರಿಲ್) ಎಲ್ಲಾ ರೀತಿಯ ಶಬ್ದ ಮಾಲಿನ್ಯಗಳಿಗೆ ಹೆಚ್ಚು ಗಮನ ಹರಿಸಿ ಮಾಲಿನ್ಯ ತಡೆಗೆ ಕ್ರಮವಹಿಸಬೇಕು.

ಈ ನಿಟ್ಟಿನಲ್ಲಿ ನಮ್ಮ ಆಡಳಿತ ವ್ಯವಸ್ಥೆ, ಸಾರ್ವಜನಿಕರು ಸದ್ದಿಲ್ಲದೆ ಕೆಲಸ ಮಾಡುವರೆಂಬ ಭರವಸೆ ಯೊಂದಿಗೆ……

ನಮಸ್ಕಾರಗಳು.

-ತ್ಯಾಗರಾಜ ಮಿತ್ಯಾಂತ,

    ಶಿವಮೊಗ್ಗ

ಜಾಹಿರಾತು:

ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207


Leave a Reply

Your email address will not be published.