ಶಿವಮೊಗ್ಗ: ಹಿಂದೂ ಧರ್ಮದ ಸನಾತನ ಪರಂಪರೆಯಲ್ಲಿ ನಿತ್ಯ ಸಂಧ್ಯಾವಂದನೆ ಮತ್ತು ಗಾಯತ್ರಿ ಪಠಣ ಮಾಡುವುದರಿಂದ ಆತ್ಮಬಲ, ಮನೋಬಲ ವೃದ್ಧಿಯಾಗುತ್ತದೆ ಹಾಗೂ ಶರೀರದ ತೇಜಸ್ಸು ಹೆಚ್ಚುತ್ತದೆ ಎಂದು ವಿದ್ವಾನ್ ಸಂತೋಷ್ ಎನ್.ಭಟ್ ಅವರು ಅಭಿಪ್ರಾಯಪಟ್ಟರು.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ದೇವಜ್ಞ ಕಲ್ಯಾಣ ಮಂದಿರದಲ್ಲಿ ಶ್ರೀ ದೈವಜ್ಞ ಗುರುಪೀಠ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 4 ದಿನಗಳ ಸಂಧ್ಯಾವಂದನೆ ಮತ್ತು ದೇವಪೂಜೆ ಕಲಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂಧ್ಯಾವಂದನೆ ಮಾಡುವುದರಿಂದ ಒಳಿತಾಗುತ್ತದೆ ಎಂದು ಅವರು ತಿಳಿಸಿದರು.
ಇದನ್ನು ಓದಿ : ಸಿಗಂದೂರು ಲಾಂಚ್‌ಗಳು ಇನ್ನು ಬೋಟ್ ಹೋಟೆಲ್‌ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಇಂದಿನ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿಯೂ ಸನಾತನ ಧರ್ಮದಲ್ಲಿ ತಿಳಿಸಿರುವ ಧಾರ್ಮಿಕ ಆಚರಣೆಗಳನ್ನು ತಪ್ಪದೇ ಪಾಲಿಸಬೇಕು. ಇಂತಹ ಧಾರ್ಮಿಕ ಕಲಿಕಾ ಶಿಬಿರಗಳು ಕಾಲಕಾಲಕ್ಕೆ ನಡೆಯಬೇಕು. ದೈವಜ್ಞ ಗುರುಪೀಠ ಸಮಿತಿ ಉತ್ತಮ ಕಾರ್ಯಗಳನ್ನು ನಡೆಸುತ್ತಿದೆ ಎಂದು ಸಂತೋಷ್ ಎನ್.ಭಟ್ ಅವರು ಶ್ಲಾಘಿಸಿದರು.
ಇದನ್ನು ಓದಿ: ಡಾ. ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ: ನಿರ್ದೇಶಕ ಅನಿರುದ್ಧ ಜತ್ಕರ್ ಮನವಿ!
ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಸಂತೋಷ್ ಭಟ್ ಅವರನ್ನು ಸನ್ಮಾನಿಸಲಾಯಿತು. ನಾಲ್ಕು ದಿನಗಳ ಈ ಶಿಬಿರದಲ್ಲಿ ಹಾಜರಾದ 100ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಶ್ರೀ ದೇವಜ್ಞ ಗುರುಪೀಠ ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್ ಅವರು ಸಂಧ್ಯಾವಂದನೆ ಹಾಗೂ ದೇವಪೂಜೆ ಕಲಿಕಾ ಪುಸ್ತಕವನ್ನು ವಿತರಿಸಿದರು.
ಇದನ್ನು ಓದಿ: ಧರ್ಮಸ್ಥಳ ಅನುಮಾನಾಸ್ಪದ ಸಾವು ಪ್ರಕರಣ: ಕೊನೆಗೂ SIT ರಚಿಸಿದ ರಾಜ್ಯ ಸರ್ಕಾರ! ಆದೇಶದ ಪ್ರತಿ ಇಲ್ಲಿದೆ ನೋಡಿ!!
ಈ ಸಂದರ್ಭದಲ್ಲಿ ದೈವಜ್ಞ ಸಮಾಜದ ಅಧ್ಯಕ್ಷ ಎಸ್. ಪಾಂಡುರಂಗ ಶೇಟ್, ಮಾಜಿ ಅಧ್ಯಕ್ಷ ಜನಾರ್ಧನ ಎಂ. ಶೇಟ್, ಕಮಲಾಕ್ಷರ, ಗುರುರಾಜ ಎಂ. ಶೇಟ್, ನಿರ್ದೇಶಕರಾದ ಸುಧಾಕರ್, ರಾಘವೇಂದ್ರ, ಪ್ರಶಾಂತ ಸಿ. ರಾಯ್ಕರ್, ಮಹಿಳಾ ಸಮಾಜದ ಅಧ್ಯಕ್ಷೆ ಸೀಮಾ ಸದಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply