“ಎಲ್ಲಾ ದಾನಕ್ಕಿಂತ ಶ್ರೇಷ್ಠವಾದ ದಾನ ರಕ್ತದಾನ” – ಜಿ. ವಿಜಯ್ ಕುಮಾರ್

ಶಿವಮೊಗ್ಗ: ರಕ್ತದಾನವು ಮತ್ತೊಂದು ಜೀವ ಉಳಿಸಲು ಸಹಾಯ ಮಾಡುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನೂ ವೃದ್ಧಿಸುತ್ತದೆ ಎಂದು ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘದ ಮಾಜಿ ಅಧ್ಯಕ್ಷರಾದ ಜಿ. ವಿಜಯ್ ಕುಮಾರ್ ಅವರು ಅಭಿಮತ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??

ಇಂದು (ಜುಲೈ 21, 2025) ಪ್ರೇರಣ ರಕ್ತದಾನಿಗಳ ಬಳಗ, ದೇವಾಲಯ ಸಂವರ್ಧನ ಸಮಿತಿ ಶಿವಮೊಗ್ಗ ನಗರ ಹಾಗೂ ಇತರೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾನಗರದ ಗಣಪತಿ ದೇವಸ್ಥಾನ, ಯಾಲಕಪ್ಪನ ಕೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ತಮ್ಮ ವೃತ್ತಿ ವ್ಯವಹಾರಗಳ ಮಧ್ಯದಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸುವುದು ಅತ್ಯಂತ ಶ್ರೇಷ್ಠವಾದ ಕೆಲಸ, ರಕ್ತದಾನಕ್ಕಿಂತ ಮಿಗಿಲಾದ ಮತ್ತೊಂದು ದಾನವಿಲ್ಲ” ಎಂದು ವಿಜಯ್ ಕುಮಾರ್ ಅವರು ತಿಳಿಸಿದರು.

 

ಇದನ್ನು ಓದಿ : ಸಿಗಂದೂರು ಲಾಂಚ್‌ಗಳು ಇನ್ನು ಬೋಟ್ ಹೋಟೆಲ್‌ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!

ಜಾಹಿರಾತು:

ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!

ಇದೇ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರತ್ನಾಕರ ಶನೈ ಅವರು ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಉಪಸ್ಥಿತರಿದ್ದ ವೈದ್ಯಾಧಿಕಾರಿಗಳು, ಹಿರಿಯ ರಕ್ತದಾನಿ ಧರಣೇಂದ್ರ ದಿನಕರ್ ಮತ್ತಿತರರು ಸುರಕ್ಷಿತ ರಕ್ತದಾನದ ಮಹತ್ವದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘದ ಸದಸ್ಯರಾದ ಶ್ರೀಯುತ ಆರ್. ಮನೋಹರ್, ಯಾಲಪ್ಪ ಕೇರಿ ವಿದ್ಯಾನಗರ ಲಕ್ಷ್ಮಣ್ ಆರ್. ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯ ರಕ್ತದಾನಿಗಳು ಈ ಸಾರ್ಥಕ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.

 

ಇದನ್ನು ಓದಿ: ಡಾ. ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ: ನಿರ್ದೇಶಕ ಅನಿರುದ್ಧ ಜತ್ಕರ್‌ ಮನವಿ!

ಇದನ್ನು ಓದಿ: ಧರ್ಮಸ್ಥಳ ಅನುಮಾನಾಸ್ಪದ ಸಾವು ಪ್ರಕರಣ: ಕೊನೆಗೂ SIT ರಚಿಸಿದ ರಾಜ್ಯ ಸರ್ಕಾರ! ಆದೇಶದ ಪ್ರತಿ ಇಲ್ಲಿದೆ ನೋಡಿ!!

ಜಾಹಿರಾತು:

ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207


Leave a Reply

Your email address will not be published.