ಧರ್ಮಸ್ಥಳ ಹತ್ಯೆ ಪ್ರಕರಣ: SIT ರಚನೆ ಸ್ವಾಗತಿಸಿದ ವಕೀಲ ಕೆ.ಪಿ. ಶ್ರೀಪಾಲ್! ಸತ್ಯ ಹೊರಬರಲಿ ಎಂದು ಆಗ್ರಹ

ಶಿವಮೊಗ್ಗ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹತ್ಯೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ತನಿಖಾ ತಂಡ (SIT) ರಚಿಸಿರುವುದನ್ನು ವಕೀಲ ಕೆ.ಪಿ. ಶ್ರೀಪಾಲ್ ಸ್ವಾಗತಿಸಿದ್ದಾರೆ.

ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?

“ಧರ್ಮಸ್ಥಳದಲ್ಲಿ ಧರ್ಮವಿದೆ, ಕ್ಷೇತ್ರದ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ವ್ಯಕ್ತಿಯೊಬ್ಬರು ಪೊಲೀಸರ ಮುಂದೆ ಹಾಗೂ ನಂತರ ನ್ಯಾಯಾಲಯದಲ್ಲಿ ಹಲವಾರು ಶವಗಳನ್ನು ಹೂತಿರುವ ಬಗ್ಗೆ ನೀಡಿರುವ ಹೇಳಿಕೆಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಿರುವುದು ಉತ್ತಮ ಬೆಳವಣಿಗೆ”

– ಕೆ ಪಿ ಶ್ರೀಪಾಲ್ 

ಕಳೆದ ಎಂಟು ವರ್ಷಗಳಲ್ಲಿ 98 ಪ್ರಕರಣಗಳು ಅಸಹಜ ಸಾವುಗಳಾಗಿವೆ ಎಂದು ವರದಿಯಾಗಿರುವುದು ಕಳವಳಕಾರಿ ಎಂದಿದ್ದಾರೆ.

ಇದನ್ನು ಓದಿ : ಶಿವಮೊಗ್ಗ: ಬೇಡರ ಹೊಸಹಳ್ಳಿ ಕ್ರಾಸ್‌ನಲ್ಲಿ ಹಿಟ್ ಅಂಡ್ ರನ್; ಮೆಡಿಕಲ್ ರೆಪ್ ಸಾವು!

ಜಾಹಿರಾತು:

ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ಘಟನೆಗಳು ಮತ್ತು ವ್ಯಕ್ತಿಯ ಹೇಳಿಕೆಗಳಲ್ಲಿ ವ್ಯತ್ಯಾಸಗಳಿದ್ದು, ಇದರ ಬಗ್ಗೆ ತನಿಖೆಯಾಗಬೇಕು. ಇದು ಧಾರ್ಮಿಕ ಕಾರಣಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅನನ್ಯ ಭಟ್ ಕಾಣೆ ಪ್ರಕರಣಕ್ಕೂ ನ್ಯಾಯ ಸಿಗಬೇಕು. ಕೇರಳದಲ್ಲಿ ಧರ್ಮಸ್ಥಳ ಪೊಲೀಸರು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಆರೋಪಗಳೂ ಇವೆ ಎಂದು ಅವರು ಹೇಳಿದರು.

ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!

“ಸತ್ಯಾಂಶ ಹೊರಬರಲಿ, ಪೂರ್ವಗ್ರಹ ಪೀಡಿತ ತನಿಖೆ ಬೇಡ. ಯಾವುದೇ ತನಿಖೆ ಮರುತನಿಖೆಯಾಗಬಾರದು, ಬದಲಿಗೆ ತನಿಖೆಯ ಮುಂದುವರಿದ ಭಾಗವಾಗಿ ಇಡೀ ದೇಶಾದ್ಯಂತ ತನಿಖೆಯಾಗಬೇಕು. ಸಮಾಜದಲ್ಲಿ ಇಂತಹ ಅರಾಜಕತೆಯನ್ನು ತಡೆಯಲು ಈ ತನಿಖೆ ಅಗತ್ಯ” ಎಂದು ಶ್ರೀಪಾಲ್ ಒತ್ತಿ ಹೇಳಿದರು.

ಇದನ್ನು ಓದಿ: ಸಾಗರ ಜನತೆಗೆ ಗುಡ್ ನ್ಯೂಸ್ : 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭ! ಸಂಪೂರ್ಣ ವಿವರ ಇಲ್ಲಿದೆ…

ಒಂದು ವರ್ಷದ ಹಿಂದೆಯೇ ಈ ಬಗ್ಗೆ ಒತ್ತಾಯ ಮಾಡಿದ್ದರೂ, ಕೇರಳದಲ್ಲಿ ಪ್ರಕರಣ ದಾಖಲಾದ ಒಂದು ತಿಂಗಳ ನಂತರ ಈಗ SIT ರಚನೆಯಾಗಿದೆ. ತನಿಖೆಯ ಮೇಲೆ ಯಾವುದೇ ಪ್ರಭಾವ ಬೀಳದಂತೆ ನೋಡಿಕೊಳ್ಳಬೇಕು ಎಂದರು. ಸೌಜನ್ಯಾ ಪ್ರಕರಣದ ತನಿಖೆ ಪ್ರತ್ಯೇಕ ಎಂದು ಗೃಹ ಸಚಿವರ ಹೇಳಿಕೆಗೆ ಸ್ಪಷ್ಟನೆ ನೀಡಿದ ವಕೀಲರು, SIT ತನಿಖೆಯಲ್ಲಿ ಎಲ್ಲ ಸತ್ಯಾಂಶಗಳೂ ಹೊರಬರಲಿ ಎಂದು ಆಶಿಸಿದರು.

ಇದನ್ನು ಓದಿ: ಶಿವಮೊಗ್ಗ | ಮೈಸೂರು “ಕುವೆಂಪು ಎಕ್ಸ್‌ಪ್ರೆಸ್” ರೈಲಿನಲ್ಲಿ ಬೆಂಕಿ: ನಿಖರ ಕಾರಣವೇನು? ದೊಡ್ಡ ಅನಾಹುತ ತಪ್ಪಿದ್ದೇಗೆ?

ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಕೆ.ಜಿ. ವೆಂಕಟೇಶ್, ವಕೀಲ ಸಿದ್ದಿಕಿ, ಡಿಎಸ್‌ಎಸ್ ಗುರುಮೂರ್ತಿ, ಸುರೇಶ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಾಹಿರಾತು:

ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207


Leave a Reply

Your email address will not be published.