ಶಿವಮೊಗ್ಗ | ಮೈಸೂರು “ಕುವೆಂಪು ಎಕ್ಸ್‌ಪ್ರೆಸ್” ರೈಲಿನಲ್ಲಿ ಬೆಂಕಿ: ನಿಖರ ಕಾರಣವೇನು? ದೊಡ್ಡ ಅನಾಹುತ ತಪ್ಪಿದ್ದೇಗೆ?

ಶಿವಮೊಗ್ಗ: ಶಿವಮೊಗ್ಗ ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ಕುವೆಂಪು ಎಕ್ಸ್‌ಪ್ರೆಸ್‌ ರೈಲಿನ ಚಕ್ರದ ಭಾಗದಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ರೈಲು ನಿಲ್ಲಿಸಿ ಪರಿಶೀಲನೆ ನಡೆಸಲಾಗಿದೆ.

ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?

ಘಟನೆ ವಿವರ:

ತರೀಕೆರೆ ರೈಲ್ವೆ ನಿಲ್ದಾಣದ ಸಮೀಪ ರೈಲಿನ ಭೋಗಿಯೊಂದರ ಕೆಳಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ರೈಲು ಸಿಬ್ಬಂದಿ ತಕ್ಷಣವೇ ರೈಲನ್ನು ನಿಲ್ಲಿಸಿ ಪರಿಶೀಲಿಸಿದ್ದಾರೆ. ಭೋಗಿಯ ಚಕ್ರಗಳ ಬಳಿ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಸಿಬ್ಬಂದಿ ಅದನ್ನು ನಂದಿಸಿದ್ದಾರೆ. ಈ ಕಾರಣಕ್ಕೆ ಕೆಲಹೊತ್ತು ನಿಂತಿದ್ದ ಟ್ರೈನ್, ಪರಿಶೀಲನೆ ಪೂರ್ಣಗೊಂಡ ಬಳಿಕ ಮುಂದಕ್ಕೆ ಸಾಗಿದೆ.

ಇದನ್ನು ಓದಿ : ಶಿವಮೊಗ್ಗ: ಬೇಡರ ಹೊಸಹಳ್ಳಿ ಕ್ರಾಸ್‌ನಲ್ಲಿ ಹಿಟ್ ಅಂಡ್ ರನ್; ಮೆಡಿಕಲ್ ರೆಪ್ ಸಾವು!

ಜಾಹಿರಾತು:

ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ಬೆಂಕಿ ಕಾಣಿಸಿಕೊಳ್ಳಲು ಕಾರಣಗಳೇನು?

ಚಲಿಸುವ ಚಕ್ರಗಳ ಅತಿಯಾದ ಘರ್ಷಣೆಯಿಂದ ಉಂಟಾಗುವ ತಾಪಮಾನದಿಂದ ರೈಲಿನ ಚಕ್ರಗಳಲ್ಲಿ ಬೆಂಕಿ ಅಥವಾ ಹೊಗೆ ಕಾಣಿಸಿಕೊಳ್ಳುವುದು ಸಹಜ ಎಂದು ರೈಲ್ವೆ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!

ಬ್ರೇಕ್‌ಗಳ ಘರ್ಷಣೆ: ರೈಲಿನ ಬ್ರೇಕ್‌ಗಳು ಸರಿಯಾಗಿ ಬಿಡುಗಡೆಯಾಗದೆ ಚಕ್ರಗಳಿಗೆ ಅಂಟಿಕೊಂಡಾಗ, ಘರ್ಷಣೆ ಹೆಚ್ಚಾಗಿ ಭಾರಿ ಶಾಖ ಉತ್ಪತ್ತಿಯಾಗುತ್ತದೆ. ಇದು ಚಕ್ರಗಳ ಸಮೀಪವಿರುವ ಗ್ರೀಸ್‌ನಂತಹ ವಸ್ತುಗಳಲ್ಲಿ ಬೆಂಕಿ ಮೂಡಿಸುತ್ತದೆ.

ಚಕ್ರಗಳ ಜಾರಿಕೆ (ಸ್ಲಿಪ್ಪಿಂಗ್): ರೈಲು ಚಲಿಸುವಾಗ, ಚಕ್ರಗಳು ಹಳಿಗಳ ಮೇಲೆ ಜಾರಿದಾಗಲೂ (ಸ್ಲಿಪ್ ಆದಾಗಲೂ) ಅತಿಯಾದ ಘರ್ಷಣೆ ಮತ್ತು ಶಾಖ ಉತ್ಪತ್ತಿಯಾಗುತ್ತದೆ. ಇದು ಕೂಡ ಬೆಂಕಿಗೆ ಕಾರಣವಾಗಬಹುದು.

ಯಾಂತ್ರಿಕ ದೋಷಗಳು: ಯಾಂತ್ರಿಕ ದೋಷಗಳು ಸಹ ಕೆಲವೊಮ್ಮೆ ಇದಕ್ಕೆ ಕಾರಣವಾಗಬಹುದು.

ಇದನ್ನು ಓದಿ: ಸಾಗರ ಜನತೆಗೆ ಗುಡ್ ನ್ಯೂಸ್ : 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭ! ಸಂಪೂರ್ಣ ವಿವರ ಇಲ್ಲಿದೆ…

ರೈಲ್ವೆ ಇಲಾಖೆಯ ಪ್ರಕಾರ, ಇದು ಸಾಮಾನ್ಯವಾಗಿ ಆಗಾಗ ಸಂಭವಿಸುವ ಘಟನೆಯಾಗಿದ್ದು, ನಿರ್ದಿಷ್ಟ ರೈಲ್ವೆ ಸ್ಟೇಷನ್‌ಗಳಲ್ಲಿ ಈ ಸಂಬಂಧ ಪರಿಶೀಲನೆ ನಡೆಸಲಾಗುತ್ತದೆ ಎನ್ನಲಾಗಿದೆ.

ಯಾವುದೇ ಅನಾಹುತವಿಲ್ಲ, ಪ್ರಯಾಣಿಕರು ಸುರಕ್ಷಿತ!

ಸಿಬ್ಬಂದಿಯ ಸಮಯೋಚಿತ ಕಾರ್ಯದಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಇದನ್ನು ಓದಿ: ಧರ್ಮಸ್ಥಳ ಅನುಮಾನಾಸ್ಪದ ಸಾವು ಪ್ರಕರಣ: ಕೊನೆಗೂ SIT ರಚಿಸಿದ ರಾಜ್ಯ ಸರ್ಕಾರ! ಆದೇಶದ ಪ್ರತಿ ಇಲ್ಲಿದೆ ನೋಡಿ!!

ಜಾಹಿರಾತು:

ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207


Leave a Reply

Your email address will not be published.