ನವದೆಹಲಿ: ದೇಶದ 6 ಲಕ್ಷ ಹೋಮ್ ಗಾರ್ಡ್ಗಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಮನವಿಯೊಂದನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಸಲ್ಲಿಸಲಾಗಿದೆ. ಹೋಮ್ ಗಾರ್ಡ್ಗಳ “ನಿಸ್ವಾರ್ಥ ಸೇವೆ” ಪದ್ಧತಿ ಮತ್ತು “ಮೂರು ವರ್ಷಗಳಿಗೊಮ್ಮೆ ನವೀಕರಣ” ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಈ ಮನವಿಯಲ್ಲಿ ಪ್ರಮುಖವಾಗಿ ಒತ್ತಾಯಿಸಲಾಗಿದೆ.
ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?
ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಅವರ ಪುತ್ರ, LRF ಸಂಸ್ಥಾಪಕರು ಮತ್ತು ಹೈಕೋರ್ಟ್ ವಕೀಲರಾದ ಪಾವಗಡ ಶ್ರೀರಾಮ್ ಅವರು ಈ ಮನವಿ ಸಲ್ಲಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರಿಗೆ ಈ ಬಗ್ಗೆ ಶಿಫಾರಸ್ಸು ಮಾಡುವಂತೆ ದೇವೇಗೌಡರಲ್ಲಿ ಕೋರಿದ್ದಾರೆ
ಇದನ್ನು ಓದಿ : ಶಿವಮೊಗ್ಗ: ಬೇಡರ ಹೊಸಹಳ್ಳಿ ಕ್ರಾಸ್ನಲ್ಲಿ ಹಿಟ್ ಅಂಡ್ ರನ್; ಮೆಡಿಕಲ್ ರೆಪ್ ಸಾವು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಇದನ್ನು ಓದಿ: ಕ್ರೆಡಿಟ್ ಕಾರ್ಡ್ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಪ್ರಮುಖ ಬೇಡಿಕೆಗಳು:
ನಿಸ್ವಾರ್ಥ ಸೇವೆ ರದ್ದು: 1942ರಲ್ಲಿ ಪ್ರಾರಂಭವಾದ ಹೋಮ್ ಗಾರ್ಡ್ ಸೇವೆ, ಆರಂಭದಲ್ಲಿ ಸ್ವಯಂಸೇವೆ ಆಧಾರಿತವಾಗಿದ್ದರೂ, ಈಗ ನಿರುದ್ಯೋಗಿ ಯುವಜನರು ಪ್ರಾಮಾಣಿಕ ಜೀವನಕ್ಕಾಗಿ ಇದನ್ನೇ ಅವಲಂಬಿಸಿದ್ದಾರೆ. ಹೀಗಾಗಿ, ನಿಸ್ವಾರ್ಥ ಸೇವಾ ನಿಯಮ ರದ್ದುಪಡಿಸುವಂತೆ ಆಗ್ರಹಿಸಲಾಗಿದೆ.
ನವೀಕರಣ ವ್ಯವಸ್ಥೆಗೆ ಅಂತ್ಯ: ಮೂರು ವರ್ಷಗಳಿಗೊಮ್ಮೆ ಇರುವ ನವೀಕರಣ ವ್ಯವಸ್ಥೆಯನ್ನು ಕೆಲವು ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಪ್ರಾಮಾಣಿಕ ಹೋಮ್ ಗಾರ್ಡ್ಗಳನ್ನು ಸೇವೆಯಿಂದ ತೆಗೆದುಹಾಕುತ್ತಿದ್ದಾರೆ. ಈ ವ್ಯವಸ್ಥೆಯನ್ನು ರದ್ದುಪಡಿಸಿ, ನಿವೃತ್ತಿಯಾಗುವವರೆಗೆ ಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.
ಸರ್ಕಾರಿ ನೌಕರರ ಸೌಲಭ್ಯ: ದೇಶದ ಎಲ್ಲಾ ಹೋಮ್ ಗಾರ್ಡ್ಗಳಿಗೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ದೊರೆಯಬೇಕು ಮತ್ತು ಮಹಿಳಾ ಹೋಮ್ ಗಾರ್ಡ್ಗಳಿಗೆ ಸೇವಾ ಭದ್ರತೆ ನೀಡಬೇಕೆಂದು ಒತ್ತಾಯಿಸಲಾಗಿದೆ.
ಇದನ್ನು ಓದಿ: ಸಾಗರ ಜನತೆಗೆ ಗುಡ್ ನ್ಯೂಸ್ : 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭ! ಸಂಪೂರ್ಣ ವಿವರ ಇಲ್ಲಿದೆ…
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಿಂದ ರಾಯಚೂರು ನ್ಯಾಷನಲ್ ಹೋಂ ಗಾರ್ಡ್ ಲೀಡರ್ ಮೌನ ಕೊರತಕುಂದ, ರಾಮನಗರ ಕುಮಾರ, ಸಂಗಪ್ಪ ಹಳೆಮನೆಸಾರ್, ನರಸಿಂಹರಾಜಸಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನು ಓದಿ: ಶಿವಮೊಗ್ಗ | ಮೈಸೂರು “ಕುವೆಂಪು ಎಕ್ಸ್ಪ್ರೆಸ್” ರೈಲಿನಲ್ಲಿ ಬೆಂಕಿ: ನಿಖರ ಕಾರಣವೇನು? ದೊಡ್ಡ ಅನಾಹುತ ತಪ್ಪಿದ್ದೇಗೆ?
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply