ಶಿವಮೊಗ್ಗ : “ಜೆಸಿಐ ಸಂಸ್ಥೆ ಮಾನವೀಯ ಸೇವೆಗಳ ಜೊತೆಗೆ ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದೆ” ಎಂದು ಜೆಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜುಂಜುನ್‌ವಾಲಾ ಹೇಳಿದರು.
ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?
ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ವಲಯ 24ರ ಅಧಿಕೃತ ಭೇಟಿಯ ಭಾಗವಾಗಿ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂತರಾಷ್ಟ್ರೀಯ ಜೆಸಿಐ ಸಂಸ್ಥೆಯು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಜೊತೆಗೆ, ಮಕ್ಕಳಲ್ಲಿ ಜೀವನ ಕೌಶಲ್ಯ, ನಾಯಕತ್ವ ಗುಣಗಳು ಮತ್ತು ಸಂಘಟನಾ ಶಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ವಲಯ 24ರ ಜೆಸಿ ಘಟಕಗಳು ಸಮಾಜಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿವೆ ಎಂದು ಅವರು ಪ್ರಶಂಸಿಸಿದರು.
ಇದನ್ನು ಓದಿ : ಶಿವಮೊಗ್ಗ: ಬೇಡರ ಹೊಸಹಳ್ಳಿ ಕ್ರಾಸ್‌ನಲ್ಲಿ ಹಿಟ್ ಅಂಡ್ ರನ್; ಮೆಡಿಕಲ್ ರೆಪ್ ಸಾವು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ವಲಯ 24ರ ಅಧ್ಯಕ್ಷ ಜೆಸಿಐ ಸೆನೇಟರ್ ಗೌರೀಶ್ ಭಾರ್ಗವ್ ಮಾತನಾಡಿ, ವಲಯ 24 ಹೊಸ ಸದಸ್ಯರ ಸೇರ್ಪಡೆ, ಹೊಸ ಘಟಕಗಳ ಸ್ಥಾಪನೆ ಮತ್ತು ವಿಶೇಷ ಕಾರ್ಯಕ್ರಮಗಳ ಮೂಲಕ ಜೆಸಿಐನಲ್ಲಿ ವಿಶಿಷ್ಟ ಸಂಚಲನ ಮೂಡಿಸಿದೆ. ಜೆಸಿಐ ಫೌಂಡೇಶನ್‌ಗಳಿಗೆ ಅತಿ ಹೆಚ್ಚು ದೇಣಿಗೆ ನೀಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ ಎಂದು ಹೇಳಿದರು.
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ರಾಷ್ಟ್ರೀಯ ಅಧ್ಯಕ್ಷರ ಟೂರ್ ಡೈರೆಕ್ಟರ್ ಸುದರ್ಶನ್ ತಾಯಿಮನೆ ಅವರು ಜೆಸಿಐ ಸಂಸ್ಥೆಯ ಇತಿಹಾಸ ಮತ್ತು ರಾಷ್ಟ್ರೀಯ ಅಧ್ಯಕ್ಷರ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಇದನ್ನು ಓದಿ: ಸಾಗರ ಜನತೆಗೆ ಗುಡ್ ನ್ಯೂಸ್ : 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭ! ಸಂಪೂರ್ಣ ವಿವರ ಇಲ್ಲಿದೆ…
ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ. ಗಣೇಶ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷರ ಭೇಟಿಯು ಎಲ್ಲಾ ಜೆಸಿಐ ಘಟಕಗಳಿಗೆ ಮತ್ತಷ್ಟು ಹುಮ್ಮಸ್ಸು ಮೂಡಿಸಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ 22 ಜೆಸಿಐ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ ಹಿರಿಯ ಜೆಸಿಐ ಸದಸ್ಯರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಮಧುಸೂದನ್ ನಾವಡ, ಪ್ರಮೋದ್ ಶಾಸ್ತ್ರಿ, ವಿನೀತ್ ಆರ್. ಸೇರಿದಂತೆ ಹಲವು ಹಿರಿಯ ಸದಸ್ಯರು ಹಾಜರಿದ್ದರು.
ಇದನ್ನು ಓದಿ: ಎಕ್ಸ್‌ಪ್ರೆಸ್” ರೈಲಿನಲ್ಲಿ ಬೆಂಕಿ: ನಿಖರ ಕಾರಣವೇನು? ದೊಡ್ಡ ಅನಾಹುತ ತಪ್ಪಿದ್ದೇಗೆ?
ಈ ಕುರಿತು ನಿಮ್ಮ ಅನಿಸಿಕೆಗಳೇನು? ಕಾಮೆಂಟ್‌ಗಳಲ್ಲಿ ತಿಳಿಸಿ.
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply