ಮುಂಬೈನಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದೆ. 12ನೇ ಮಹಡಿಯ ಮನೆಯ ಕಿಟಕಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ನಾಲ್ಕು ವರ್ಷದ ಪುಟ್ಟ ಬಾಲಕಿ ಅನ್ವಿಕಾ ಪ್ರಜಾಪತಿ ಸಾವನ್ನಪ್ಪಿದ್ದಾಳೆ.
ಈ ಆಘಾತಕಾರಿ ಘಟನೆ ಬುಧವಾರ ಸಂಜೆ 8 ಗಂಟೆ ಸುಮಾರಿಗೆ ನಡೆದಿದೆ. ಅನ್ವಿಕಾ ಮತ್ತು ಆಕೆಯ ತಾಯಿ ಹೊರಗೆ ಹೋಗಲು ಸಿದ್ಧರಾಗಿದ್ದರು. ಅನ್ವಿಕಾ ವಯಸ್ಕರ ಚಪ್ಪಲಿ ಹಾಕಿಕೊಂಡು ಜಾರಿ ಬಿದ್ದಾಗ, ಆಕೆಯ ತಾಯಿ ಮಗಳನ್ನ ಎತ್ತಿ ಶೂ ಕಪಾಟಿನ ಮೇಲ್ಭಾಗದಲ್ಲಿ ಕೂರಿಸಿದ್ದಾರೆ. ನಂತರ ತಾಯಿ ತಮ್ಮ ಚಪ್ಪಲಿ ಧರಿಸಲು ಮುಂದಾದಾಗ, ಅನ್ವಿಕಾ ಕಪಾಟಿನ ಮೇಲೆ ನಿಂತು, ಕಿಟಕಿಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಸಮತೋಲನ ಕಳೆದುಕೊಂಡು 12ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ.
ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?
ವಿಡಿಯೋ ನೋಡಿ 👇ತಮ್ಮ ಕಣ್ಣೆದುರೇ ಮಗಳು ಬಿದ್ದಿದ್ದನ್ನು ನೋಡಿ ತಾಯಿ ಆಘಾತಕ್ಕೊಳಗಾಗಿ ಸಹಾಯಕ್ಕಾಗಿ ಅಳಲು ಪ್ರಾರಂಭಿಸಿದ್ದಾರೆ. ನೆರೆಹೊರೆಯವರು ತಕ್ಷಣ ಬಾಲಕಿಯನ್ನು ವಸಾಯಿ ಪಶ್ಚಿಮದಲ್ಲಿರುವ ಸರ್ ಡಿಎಂ ಪೆಟಿಟ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಅನ್ವಿಕಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಘಟನೆ ನಿಜಕ್ಕೂ ದುರದೃಷ್ಟಕರ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ನಾವು ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು? ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ.
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply