ಹಸೆಮಣೆ ಏರಬೇಕಿದ್ದ ಯುವತಿ ಶಿವಮೊಗ್ಗದ ರಸ್ತೆ ಅಪಘಾತದಲ್ಲಿ ದುರಂತ ಸಾವು! ಮದುವೆಗೆ 15 ದಿನಗಳಿರುವಾಗಲೇ ಬಸ್ ಹರಿದು ಯುವತಿ ಸ್ಥಳದಲ್ಲೇ ಸಾವು.

ಶಿವಮೊಗ್ಗ: ಮದುವೆಗೆ ಇನ್ನೇನು 15 ದಿನಗಳಷ್ಟೇ ಬಾಕಿ ಇರುವಾಗ, ವಿಧಿಯಾಟಕ್ಕೆ ಬಲಿಯಾದ ಯುವತಿಯೋರ್ವಳ ದುರಂತ ಘಟನೆ ಶಿವಮೊಗ್ಗದ ಮಲವಗೊಪ್ಪ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?

ಘಟನೆಯ ವಿವರ:

ಇಂದು ಬೆಳಿಗ್ಗೆ ಸುಮಾರು 9:30ರ ಸುಮಾರಿನಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಮೃತ ಯುವತಿಯನ್ನು ಕವಿತಾ (26) ಎಂದು ಗುರುತಿಸಲಾಗಿದೆ. ಕವಿತಾ ತನ್ನ ಸಹೋದರ ಸಂತೋಷ್ ಜೊತೆ ದ್ವಿಚಕ್ರ ವಾಹನದಲ್ಲಿ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದಳು. ಈ ವೇಳೆ, ಕುರುಕಲು ಪದಾರ್ಥ ಮತ್ತು ಬೋಟಿ ಮಾರಾಟ ಮಾಡುವ ದ್ವಿಚಕ್ರ ವಾಹನವೊಂದು ಅತಿಯಾದ ಲಗೇಜ್‍ನೊಂದಿಗೆ ವೇಗವಾಗಿ ಬಂದು, ಅವರ ಬೈಕ್‌ಗೆ ತಾಗಿ ಅತಿವೇಗವಾಗಿ ಬಂತು. ಇದರಿಂದ ನಿಯಂತ್ರಣ ಕಳೆದುಕೊಂಡ ಕವಿತಾ ಹಾಗೂ ಸಂತೋಷ್ ರಸ್ತೆಗೆ ಬಿದ್ದಿದ್ದಾರೆ.

 

ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ಲಂಚದ ಬೇಡಿಕೆ ಕುರಿತ ಸಂಭಾಷಣೆಯನ್ನು ದೂರುದಾರ ಮೊಹಮ್ಮದ್‌ ಆಸಿಫ್‌ ವಾಯ್ಸ್‌ ರೆಕಾರ್ಡ್‌ ಮಾಡಿಕೊಂಡು, ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರುದಾರರು ಲಂಚ ನೀಡಲು ಇಷ್ಟವಿಲ್ಲದೆ ಇದ್ದುದರಿಂದ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಸಂತೋಷ್ ರಸ್ತೆಯ ಫುಟ್‍ಪಾತ್ ಕಡೆಗೆ ಬಿದ್ದಿದ್ದರೆ, ದುರದೃಷ್ಟವಶಾತ್ ಕವಿತಾ ರಸ್ತೆಯ ಮಧ್ಯಭಾಗಕ್ಕೆ ಬಿದ್ದಿದ್ದಾಳೆ. ಅದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ ಕವಿತಾಳ ತಲೆಯ ಮೇಲೆ ಹರಿದಿದೆ. ಇದರಿಂದ ಆಕೆಯ ಸ್ಥಳದಲ್ಲೇ ಅಸುನೀಗಿದ್ದಾಳೆ.

ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ:

ಕವಿತಾಳ ಮದುವೆಯು ಇನ್ನೇನು 15 ದಿನಗಳಲ್ಲಿ ನಿಶ್ಚಯವಾಗಿತ್ತು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಅನಿರೀಕ್ಷಿತ ದುರ್ಘಟನೆ ತೀವ್ರ ಆಘಾತವನ್ನು ನೀಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬೋಟಿ ಮಾರಾಟ ಮಾಡುವ ದ್ವಿಚಕ್ರ ವಾಹನದ ಅತಿವೇಗದ ಚಾಲನೆ ಮತ್ತು ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!

ಜಾಹಿರಾತು:

ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207


Leave a Reply

Your email address will not be published.