[cmsmasters_row][cmsmasters_column data_width=”1/1″][cmsmasters_text]
ರೈತರು ಪೌಷ್ಟಿಕ ಆಹಾರ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು – ಲಕ್ಷ್ಮಿಪತಿ
ಶಿವಮೊಗ್ಗ : ಹೊಲ,ಗದ್ದೆ, ಬೆಳೆಗಳಿಗೆ ಜೀವಸತ್ವ ಬೇಕಾಗುವಂತೆ, ಮಾನವನ ದೇಹಕ್ಕೂ ಆ ಜೀವಸತ್ವಗಳು ಮುಖ್ಯ , ರೈತರು ಪೌಷ್ಟಿಕಾಂಶಯುಕ್ತ ಆಹಾರ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೊಳೆಹೊನ್ನೂರು ವೃತ್ತನಿರೀಕ್ಷಕ ಲಕ್ಷ್ಮಿಪತಿ ಹೇಳಿದರು.
ನಗರದ ಹೊಳೆಹೊನ್ನೂರಿನ ಯಡೆಹಳ್ಳಿಯಲ್ಲಿ ಲಯನ್ಸ್ ಕ್ಲಬ್ ಹಾಗೂ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಭವಿಷ್ಯದಲ್ಲಿ ನಮ್ಮ ಮಕ್ಕಳು ನಾವು ಅಂದುಕೊಂಡಂತೆ ಆಗಬೇಕು ಎನ್ನುವ ಹಿರಿಯರ ವಾದ ಸಮಂಜಸವಲ್ಲ, ಅವರವರ ಅಭಿರುಚಿಗೆ ತಕ್ಕಂತೆ ಬೆಳೆಯಲಿ ಎನ್ನುವುದೇ ನನ್ನ ಆಶಯ. ನಾಳೆಗೆ ಬದುಕದೆ ಇಂದಿನ ಜೀವನವನ್ನ ಇಂದೇ ಅನುಭವಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಎಸ್. ಹನುಮಂತಪ್ಪ, ಮೆಸ್ಕಾಂ ಅಭಿಯಂತರ ಲೋಕೇಶ್, ವೈದ್ಯಾಧಿಕಾರಿ ಆರ್.ಎಂ ಗಿರೀಶ್, ಅಧ್ಯಕ್ಷ ಎಚ್. ಜಿ ಮಲ್ಲಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
[/cmsmasters_text][/cmsmasters_column][/cmsmasters_row]