ನೆಹರು ಯುವ ಕೇಂದ್ರದಿಂದ ಸಂವಿಧಾನ ದಿನ ಆಚರಣೆ, ವಿಧಾನ ಪರಿಷತ್ ನ ಶಾಸಕರಾದ ಶ್ರೀ. ಡಿ.ಎಸ್ ಅರುಣ್ ಭಾಗಿ
ಶಿವಮೊಗ್ಗ : ಸಂವಿಧಾನ ದಿನಾಚರಣೆಯ ಪ್ರಯುಕ್ತ ನಗರದ ಸಿ .ಬಿ.ಆರ್ ಕಾನೂನು ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ,ಶಿವಮೊಗ್ಗ ಹಾಗೂ ಸಿ. ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಶಿವಮೊಗ್ಗ ಮತ್ತು ಚೌಡೇಶ್ವರಿ ಕಾಲೋನಿ ಕ್ಷೇಮಾಭಿವೃದ್ಧಿ ಸಮಿತಿ ಶಿವಮೊಗ್ಗ ಇವರ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ವಿಧಾನ ಪರಿಷತ್ ನ ಶಾಸಕರಾದ ಶ್ರೀ. ಡಿ.ಎಸ್ ಅರುಣ್ ರವರು ದೀಪ ಬೆಳಗಿಸಿ , ಡಾ. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯವನ್ನು ಕೋರಿದರು.”ದೇಶವು ನಮಗೆ ಏನು ಕೊಟ್ಟಿದೆ ಎಂಬುದು ಮುಖ್ಯವಲ್ಲ, ದೇಶಕ್ಕಾಗಿ ನಾವು ಏನು ಮಾಡಿದ್ದೇವೆ” ಎಂಬುದು ವಿದ್ಯಾರ್ಥಿಗಳು ಅರಿತು ಕೊಳ್ಳಬೇಕೆಂದು ತಿಳಿಸಿದರು. ಯುವಜನರು ರಾಜಕೀಯ ಕ್ಷೇತ್ರಕ್ಕೆ ಬರಬೇಕೆಂದು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿ.ಬಿ.ಆರ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎ ಅನಲ ರವರು ಮಾತನಾಡಿ ಸಂವಿಧಾನ ಪೂರ್ವ ಪೀಠಿಕೆಯು ಹೊಂದಿರುವ ವಿಷಯಗಳ ಬಗ್ಗೆ ವಿಶ್ಲೇಷಿಸಿದರು.
ನಂತರ ಮಾತನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಧನಂಜಯ ಕೆ.ಬಿ ರವರು ಒಂದು ದೇಶಕ್ಕೆ ಸಂವಿಧಾನ ಎಷ್ಟು ಮುಖ್ಯವೆಂದು ಹಾಗೂ ಸಂವಿಧಾನವನ್ನು ಅರಿತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾನೂನು ಬದ್ದವಾಗಿ & ಒಬ್ಬ ಒಳ್ಳೆಯ ಪ್ರಜೆಯಾಗಿ ನಡೆದುಕೊಳ್ಳುವಂತೆ ಹೇಳಿದರು
ಕಾನೂನು ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಆದರ್ಶ ರವರು ಎಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ, ಜಿಲ್ಲಾ ಯುವ ಅಧಿಕಾರಿಯಾದ ಶ್ರೀ. ಉಲ್ಲಾಸ್ ಕೆ.ಟಿ.ಕೆ ರವರು ಉಪಸ್ಥಿತರಿದ್ದರು. ಸಿ.ಬಿ.ಆರ್ ಕಾನೂನು ಕಾಲೇಜಿನ ಸಿಬ್ಬಂದಿ ವರ್ಗದವರು, ಕಾಲೇಜಿನ ವಿದ್ಯಾರ್ಥಿಗಳು ಹಾಗು ನೆಹರು ಯುವ ಕೇಂದ್ರದ ಕಾರ್ಯಕರ್ತರಾದ ಶೇಕ್ ಹಸೇನ್, ಹೇಮಂತ್, ಸ್ವಾತಿ, ಸಂಜು ಪಾಟೀಲ್ ಉಪಸ್ಥಿತರಿದ್ದರು
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply