ಸಹ್ಯಾದ್ರಿ ಕಾಲೇಜಿನ ಪಾಥ್‌ವೇಸ್ ಘಟಕದದಿಂದ ದಾವಣಗೆರೆ ವಿವಿ ಯ  ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ ರಮೇಶ್ ರವರಿಗೆ ಅಭಿನಂದನಾ ಸಮಾರಂಭ.

ಸಹ್ಯಾದ್ರಿ ಕಾಲೇಜಿನ ಪಾಥ್‌ವೇಸ್ ಘಟಕದದಿಂದ ದಾವಣಗೆರೆ ವಿವಿ ಯ ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ ರಮೇಶ್ ರವರಿಗೆ ಅಭಿನಂದನಾ ಸಮಾರಂಭ.

ಶಿವಮೊಗ್ಗ : ಇಂದು ನಗರದ ಸಹ್ಯಾದ್ರಿ ಕಾಲೇಜಿನ ಪಾಥ್‌ವೇಸ್ ಘಟಕದಿಂದ ದಾವಣಗೆರೆ ವಿಶ್ವ ವಿದ್ಯಾಲಯದ ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ .ರಮೇಶ್ ರವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸತತ ನಾಲ್ಕು ವರ್ಷಗಳ ಕಾಲ ಪಾಥ್ ವೇಸ್ ನಿರ್ದೇಶಕರಾಗಿ ಕಾರ್ಯನಿರ್ವಾಹಿಸಿದ್ದ ಪ್ರೊ. ಸಿ ಕೆ ರಮೇಶ್ ರವರು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ)ರಾಗಿ ನೇಮಕವಾಗಿರುವ ಪ್ರಯುಕ್ತ ಪಾಥ್ ವೇಸ್ ವಿದ್ಯಾರ್ಥಿಗಳು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು.

ಈ ಸಂಧರ್ಭದಲ್ಲಿ ಪ್ರೊ ಸಿ. ಕೆ .ರಮೇಶ್ ಮತ್ತು ಪಾಥ್ ವೇಸ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಹೊಯ್ಸಳ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಲಿಯಂ ಡಿಸೋಜ ಪ್ರೊ ಸಿ. ಕೆ ರಮೇಶ್ ರವರು ಎಂತಹ ಸವಾಲು ಬಂದರು ಎದುರಿಸುವ ಹಾಗೆ ವಿದ್ಯಾರ್ಥಿಗಳನ್ನು ಸಿದ್ದ ಮಾಡಿದ್ದಾರೆ,ಇಂಥ ಗುರುಗಳನ್ನು ಪಡೆದ ನೀವು ಪುಣ್ಯವಂತರು. ನೀವೆಲ್ಲಾ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಬೇಕು ಹಾಗೂ ನಿಜವಾದ ನಾಯಕನ ಗುಣಗಳ ಬಗ್ಗೆ ತಿಳಿಸಿದರು.

ನಂತರ ಮಾತನಾಡಿದ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ವಿಶ್ವನಾಥ್ ಕಾಶಿ ಗುರುಶಿಷ್ಯರ ಸಂಬಂಧ ಎಂತದ್ದು ಎಂಬ ಬಗ್ಗೆ ಹೇಳಿದರು. ತಮ್ಮ ಹಾಗೂ ರಮೇಶ್ ಅವರ ಜೊತೆ ಒಡನಾಟದ ಬಗ್ಗೆ ಹಂಚಿಕೊಂಡರು.

 ನಂತರ ಮಾತನಾಡಿದ ಪ್ರೊ. ಸಿ ಕೆ ರಮೇಶ್ ರವರು ತಮ್ಮ ಹಾಗೂಪಾಥ್ವೇಸ್ ಘಟಕದ ಅವಿನಾಭಾವ ಕಾರ್ಯಗಳನ್ನು ಸ್ಮರಿಸಿಕೊಂಡರು. ತಮಗೆ ಲಭಿಸಿರುವ ಮೌಲ್ಯಮಾಪನ ರಿಜಿಸ್ಟರ್ ಹುದ್ದೆಯನ್ನು ಸನ್ಮಾರ್ಗದಲ್ಲಿ ನಡೆಸುವುದಾಗಿ, ಅಧಿಕಾರ ಸದುಪಯೋಗದ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಬಗ್ಗೆ ಮುತುವರ್ಜಿವಹಿಸಿ ಎಂದು ಹೇಳಿದರು. ಪಾಥ್ವೇಸ್ ಘಟಕದ ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜಕ್ಕೆ ಮಾದರಿ ಯಾಗಬೇಕು ಎಂದು ಹೃದಯತುಂಬಿ ಹಾರೈಸಿದರು.

 ಈ ಸಂದರ್ಭದಲ್ಲಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ,ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಕುಂದನ್ ಬಸವರಾಜ್, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಮ್.ಬಿ.ಎ ವಿಭಾಗದ ಸಹಪ್ರಾಧ್ಯಾಪಕರಾದ ಪ್ರೊ. ಗಿರಿಧರ್ ಕೆ. ವಿ ಉಪಸ್ಥಿತರಿದ್ದರು.

ವರದಿ : ಲಿಂಗರಾಜ್ ಗಾಡಿಕೊಪ್ಪ

ಜಾಹಿರಾತು :


Leave a Reply

Your email address will not be published.