ತುಂಗೆಯ ಶುದ್ಧೀಕರಣಕ್ಕೆ ಮುಂದಾದ ಪಾಲಿಕೆ ! ಮಲೀನ ನೀರು ತುಂಗೆಗೆ ಸೇರುವುದನ್ನ ತಡೆಗಟ್ಟಲು ಹೊಸ ಕ್ರಿಯಾ ಯೋಜನೆ ! ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ತೀರ್ಮಾನ.
ಶಿವಮೊಗ್ಗ : ಜಗತ್ತಿನಲ್ಲಿ ಅತ್ಯಂತ ಸಿಹಿಯಾದ ನೀರಿಗೆ ಹೆಸರುವಾಸಿಯಾದ ತುಂಗಾ ನದಿ ಈಗ ಕುಡಿಯಲು ಅಲ್ಲ ಇಳಿದು ನೀರು ಮುಟ್ಟುವುದಕ್ಕೂ ಆಗುವುದಿಲ್ಲ ಅಷ್ಟು ಮಲಿನವಾಗಿದೆ, ಗಂಗಾ ಸ್ನಾನಂ – ತುಂಗಾಪಾನ ಎಂಬ ನಾಣ್ಣುಡಿಗೆ ಇಂದು ತುಂಗೆಯಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ನಗರಕ್ಕೆ ನೀರಿನಿಂದಲೇ ಅನಾರೋಗ್ಯ ಕಾಡುವ ಭೀತಿ ಆವರಿಸಿದ್ದಂತಾಗಿದೆ, ಎಂದು ನೆನ್ನೆ ಮಹಾನಗರ ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ಸರ್ವ ಪಕ್ಷದ ಸದಸ್ಯರುಗಳು ಒಕ್ಕೊರಲಿನಿಂದ ತುಂಗೆಯ ಶುದ್ಧೀಕರಣಕ್ಕೆ ಸುಧೀರ್ಘ ಚರ್ಚೆಯನ್ನ ಆರಂಭಿಸಿ, ತಂಗೆಗೆ
ಮಲೀನ ನೀರು ಸೇರುವುದನ್ನ ತಡೆಗಟ್ಟುವುದಕ್ಕೆ ಹೊಸ ಕ್ರಿಯಾ ಯೋಜನೆಗೆ ಮುಂದಾಗಿದ್ದಾರೆ.
ತುಂಗಾ ನದಿಗೆ ಯು.ಜಿ.ಡಿ, ಕೊಳಚೆ ನೀರು ಸೇರುವುದನ್ನ ತಡೆಗಟ್ಟುವುದಕ್ಕೆ ಹೊಸ ಕ್ರಿಯಾಯೋಜನೆಯ ರೂಪಿಸುವ ಸಂಬಂಧ ಪಾಲಿಕೆಯ ವಿಶೇಷ ಸಭೆಯಲ್ಲಿ ಎಲ್ಲಾ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಪ್ರತಿ ಮನೆಗೂ ಯು.ಜಿ.ಡಿ ಸಂಪರ್ಕ ಕಲ್ಪಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು, ಖಾಸಗಿ ಏಜೆನ್ಸಿ ಗಳ ಮೂಲಕ ಯುಜಿಡಿ ಸಂಪರ್ಕ ಕಲ್ಪಿಸಲಾಗಿದೆಯಾ ಎಂದು ಪರಿಶೀಲಿಸಿ ಪ್ರತಿ ಮನೆಗೂ ಯು.ಜಿ. ಡಿ ಕಲ್ಪಿಸಲು ಯೋಜನೆ ರೂಪಿಸಲಾಗುವುದು.
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ ತುಂಗಾ ನದಿಯ ನೀರಿನಲ್ಲಿ ಅಲ್ಯೂಮಿನಿಯಂ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಮಗ್ರ ಅಧ್ಯಯನಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಭಾಗವಾಗಿರುವ ಬೆಂಗಳೂರು ಸಾಯಿಲ್ ಸರ್ವೆ ಇನ್ಸ್ಟಿಟ್ಯೂಟ್ ವತಿಯಿಂದ ಪರೀಕ್ಷೆ ನಡೆಸಲಾಗುವುದು ಇದಕ್ಕೆ ಅಂದಾಜು 25 -30 ಲಕ್ಷ ಖರ್ಚಾಗಲಿದ್ದು, ಅದರ ವೆಚ್ಚವನ್ನು ಪಾಲಿಕೆಯ ಭರಿಸಲಿದೆ, ಮೂರು ತಿಂಗಳಲ್ಲಿ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಂಸ್ಥೆಗೆ ಮನವಿ ಮಾಡಲಾಗಿದೆ, ಇದರಲ್ಲಿ ತುಂಗಾ ನದಿಯ ಮೂಲ ಮತ್ತು ಭದ್ರ ಜಲಾಶಯದ ಬಗ್ಗೆಯೂ ಅಧ್ಯಯನ ನಡೆಸಿ ನಿರ್ದಿಷ್ಟ ಕಾರಣ ಅತ್ತೆ ಹಚ್ಚಲಾಗುವುದು ಎಂದು ಹೇಳಿದರು
ಶಾಸಕ ಚನ್ನಬಸಪ್ಪನವರು ಪ್ರತಿಕ್ರಿಯೆ ನೀಡಿ ಸಮಸ್ಯೆ ಪರಿಹಾರಕ್ಕೆ ವ್ಯಾಪಕ ಪ್ರಯತ್ನ ಮಾಡಲಾಗುತ್ತಿದೆ, ಸರ್ಕಾರದ ಮಟ್ಟದಲ್ಲಿ ತುಂಗಾ ನದಿಗೆ ಶಾಶ್ವತವಾದ ಪರಿಹಾರ ಬೇಕಾಗಿದೆ, ಜನರಲ್ಲಿ ಜಾಗೃತಿ ಕೂಡ ಅವಶ್ಯ ಎಂದರು,
ರಾಜ ಕಾಲುವೆಗಳ ಬಳಿ 9 ಕಡೆ ಮಲಿನ ನೀರು ಸೇರುವ ಜಾಗದಲ್ಲಿ ತಾಜ್ಯವನ್ನ ಬೇರ್ಪಡಿಸಿ ನೀರು ಬಿಡಲು 9 ಕಡೆ ವೆಟ್ ವೆಲ್ ಗಳನ್ನು ನಿರ್ಮಿಸಲಾಗಿದೆ , ಈಗಾಗಲೇ 5 ವೆಟ್ ವೆಲ್ ಗಳು ಕಾರ್ಯರಂಭ ಮಾಡುತ್ತಿದೆ. ವೆಟ್ ವೆಲ್ ಗಳ ನಿರ್ವಹಣೆಗೆ ತಲಾ 3 ಜನರಂತೆ 9 ಜನ ಸಿಬ್ಬಂದಿ ಅಗತ್ಯ ಇದೆ ಎಂದು ಕೊಳಚೆ ನೀರು ನಿರ್ವಹಣಾ ಮಂಡಳಿ ಇಂಜಿನಿಯರ್ ಮಿಥುನ್ ಸಭೆಗೆ ಕೋರಿದರು.
ತುಂಗಾ ನದಿಯ ಎಡ ಮತ್ತು ಬಲ ದಂಡೆಯ ಎರಡು ಕಡೆಗಳಿಂದಲೂ ಸುಮಾರು 140 ಕಡೆಯಿಂದಲೂ ಮಲಿನ ನೀರು ಬಂದು ತುಂಗಾ ನದಿಗೆ ಸೇರುತ್ತದೆ ಎಂದು ತುಂಗಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಸುರೇಶ್ ಸಭೆಗೆ ತಿಳಿಸಿದರು.
ಕಾಂಗ್ರೆಸ್ ಸದಸ್ಯೆ ಯಮುನಾ ರಂಗೇಗೌಡ ಮಾತನಾಡಿ, ತುಂಗಾ ನದಿಯ ಸ್ವಚ್ಛತೆಗೆ ಹಲವು ಸಂಘ ಸಂಸ್ಥೆಗಳು ಹಲವು ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿವೆ, ಆದರೂ ಯಾವುದೇ ಪ್ರಯೋಜನವಾಗದೆ ಅದರ ಪರಿಣಾಮ ಸೊನ್ನೆ ಆಗಿ ಉಳಿದಿದೆ ಎಂದರು
ಶಾಸಕ ಚೆನ್ನಬಸಪ್ಪ, ಪಾಲಿಕೆ ಸದಸ್ಯ ಯೋಗೇಶ್, ರಮೇಶ್ ಹೆಗ್ಡೆ, ವಿಶ್ವಾಸ್, ಮೆಹಕ್ ಶರೀಫ್, ಜ್ಞಾನೇಶ್ವರ್, ಧೀರರಾಜ್ ಹೊನ್ನವಿಲೆ, ಹಲವರು ತುಂಗಾ ನದಿಗೆ iqಕೊಳಚೆ ನೀರು ಸೇರುವ ತಡೆಗಟ್ಟುವುದನ್ನು ಮತ್ತು ಯುಜಿಡಿ ನಿರ್ವಹಣೆಗೆ ಸಲಹೆಯನ್ನು ನೀಡಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
ಜಾಹಿರಾತು :
Leave a Reply