ಮಹಾನಗರಪಾಲಿಕೆಯ ಆಡಳಿತ ಅವಧಿ ಮುಕ್ತಾಯ : ಇನ್ನೂ ಆರು ತಿಂಗಳು ಅಧಿಕಾರಿಗಳ ಕೈ ಅಲ್ಲಿ ನಗರ ಪಾಲಿಕೆ, ಮಾಜಿ ಸದಸ್ಯರಿಗಾಗಿ ಎರಡು ಕೊಠಡಿ ಮೀಸಲು !
ಶಿವಮೊಗ್ಗ : ಮಹಾನಗರ ಪಾಲಿಕೆಯ ಆಡಳಿತ ಅವಧಿ ಸೋಮವಾರಕ್ಕೆ ಅಂತ್ಯಗೊಂಡಿದ್ದು, ಮಹಾನಗರ ಪಾಲಿಕೆಯ ಸುದೀರ್ಘ ಐದು ವರ್ಷದ ಅವಧಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಇಂದಿನಿಂದ ಎಲ್ಲಾ ಸದಸ್ಯರು ಮಾಜಿ ಸದಸ್ಯಗಳಾಗುತ್ತಾರೆ.
ಇಂದಿನಿಂದ ಮಹಾನಗರ ಪಾಲಿಕೆಯ ಆಯುಕ್ತರು ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ
ಮಹಾನಗರ ಪಾಲಿಕೆಯ 35 ಸದಸ್ಯರು ಮಾಜಿ ಸದಸ್ಯಗಳಾಗಿದ್ದು ಮತ್ತೆ ಮುಂದೆ ಬರಲಿರುವ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದಾರೆ, ಲೋಕ ಸಭಾ ಚುನಾವಣೆಯ ನಂತರ, ಪಾಲಿಕೆ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಯ ನಂತರ ಪಾಲಿಕೆಯ ಚುನಾವಣೆಯ ದಿನಾಂಕ ಪ್ರಕಟವಾಗಲಿದೆ. ಅಲ್ಲಿಯವರೆಗೂ ಆರು ತಿಂಗಳಗಳ ಕಾಲ ಅಧಿಕಾರಿಗಳ ಹಿಡಿತದಲ್ಲಿ ಪಾಲಿಕೆಯ ಆಡಳಿತ ನಡೆಯುತ್ತದೆ.
ಮಾಜಿ ಸದಸ್ಯರಿಗೆ ಎರಡು ಕೊಠಡಿ ಮೀಸಲು
ಇನ್ನು ಮಾಜಿ ಸದಸ್ಯರುಗಳಿಗೆ ಎರಡು ಕೊಠಡಿ ಮೀಸಲಿರಿಸಿದ್ದು. ತಮ್ಮ ವಾರ್ಡ್ ಕೆಲಸಕ್ಕೆ ಪಾಲಿಕೆಗೆ ಬಂದಾಗ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು, ಚರ್ಚಿಸಲು ಎರಡು ಕೊಠಡಿ ಮೀಸಲಿರಿಸಾದ್ದಾರೆ, ಸೋಮವಾರ ನಡೆದ ಪಾಲಿಕೆಯ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಬಿಜೆಪಿ ಸದಸ್ಯರಿಗೊಂದು ಮತ್ತು ಕಾಂಗ್ರೆಸ್ ಸದಸ್ಯರಿಗೊಂದು ಎರಡು ಕೊಠಡಿಯನ್ನು ಮೀಸಲಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
ಜಾಹಿರಾತು :
Leave a Reply