ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳ: ಪುಸ್ತಕ ಮೇಳ, ಕರಕುಶಲ ಮೇಳ, ಖಾದಿ ಮೇಳ,  ಆಹಾರ ಮೇಳ ಇತರೆ ಮಳಿಗೆಗಳ ನೋಂದಣಿ ಆರಂಭ

ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳ: ಪುಸ್ತಕ ಮೇಳ, ಕರಕುಶಲ ಮೇಳ, ಖಾದಿ ಮೇಳ, ಆಹಾರ ಮೇಳ ಇತರೆ ಮಳಿಗೆಗಳ ನೋಂದಣಿ ಆರಂಭ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ ) ಸಂಸ್ಥೆಯು ಮೂರನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ರಾಯಚೂರು ಜಿಲ್ಲೆಯ ಲಿಂಗಸಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ 2023 ರ ಡಿಸೆಂಬರ್ 29,30 ರಂದು ನಡೆಸಲು ತೀರ್ಮಾನಿಸಲಾಗಿದ್ದು,

ಡಾ. ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯದ ಹಲವು ಕಡೆಗಳಿಂದ ಸಾವಿರಾರು ಜನ ಬರುವ ನಿರೀಕ್ಷೆ ಇದೆ. ಈ ಸಮ್ಮೇಳನದಲ್ಲಿ ಪುಸ್ತಕ ಮೇಳ, ಖಾದಿ ಮೇಳ, ಆಹಾರ ಮೇಳ, ಕರಕುಶಲ ಮೇಳ, ಇತರೆ ಮಳಿಗೆಗಳನ್ನು ತೆರೆಯಲು ಪರಿಷತ್ತು ಅನುವು ಮಾಡಿಕೊಡುತ್ತಿದ್ದೂ ಮಳಿಗೆ ತೆರೆಯಲು ಆಸಕ್ತ ಇರುವವರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುಲಗಪ್ಪ ಸಿ ಮುದಗಲ್ 8123636340 ಅವರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು.

2 ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಮಳಿಗೆ ತೆರೆಯಲು 2 ದಿನಕ್ಕೆ 1000/- ಸಂದಾಯ ಮಾಡಿ ಮಳಿಗೆ ತೆರೆಯಬಹುದು. ಮಳಿಗೆ ನೋಂದಣಿಗೆ ಡಿಸೆಂಬರ್ 10, 2023 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ನಭಿಸಾಬ್ ಅನಾಹೊಸೂರ್ ತಾಲೂಕು ಅಧ್ಯಕ್ಷರು 9008354975, ಚಿರಂಜೀವಿ ರೋಡಕರ್ ಜಿಲ್ಲಾಧ್ಯಕ್ಷರು 9845484624.

ವರದಿ : ಲಿಂಗರಾಜ್ ಗಾಡಿಕೊಪ್ಪ

ಜಾಹಿರಾತು :


Leave a Reply

Your email address will not be published.