ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ತಂಪೆರದ ಮಳೆರಾಯ ! ಶಿವಮೊಗ್ಗ ,ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಮಳೆ !
ಶಿವಮೊಗ್ಗ : ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರದಿದ್ದಾನೆ, ಶಿವಮೊಗ್ಗ ನಗರದಲ್ಲಿ ಸಂಜೆ 7ರಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದಿದ್ದು, ರಾತ್ರಿ 9ರ ಸುಮಾರಿಗೆ ಜೋರು ಮಳೆ ಸುರಿದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಜೋರು ಮಳೆ ಸುರಿದಿದೆ.
ಶಿವಮೊಗ್ಗದ ಆಯನೂರ್, ಕುಂಸಿ, ಮಲವಗೊಪ್ಪ, ಹಾರೋಬೆನ್ನವಳ್ಳಿ , ಭದ್ರಾವತಿಯ ವಿವಿದೆಡೆ ಮಳೆ ವರದಿಯಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply