ಸಿಡಿಲು ಬಡಿದು ಸಹೋದರರಿಬ್ಬರೂ ಸಾವು !
ಭದ್ರಾವತಿ : ಜಮೀನಿನಲ್ಲಿ ಕಟಾವು ಆಗಿದ್ದ ಭತ್ತದ ರಾಶಿಯನ್ನು ರಕ್ಷಿಸಲು ಹೋದ ಸಹೋದರರಿಬ್ಬರೂ ಸಿಡಿಲು ಬಡಿದು ಸಾವನ್ನಪ್ಪಿರುವ ಧಾರುಣ ಘಟನೆ,
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.
ನಿನ್ನೆ ಮಂಗಳವಾರ ರಾತ್ರಿ ಭಾರಿ ಮಳೆ ಆಗುತ್ತಿದ್ದ ಕಾರಣ ಜಮೀನಿನಲ್ಲಿ ಕಟಾವು ಮಾಡಲಾಗಿದ್ದ ಭತ್ತದ ರಾಶಿಯನ್ನು ಮಳೆಯಿಂದ ರಕ್ಷಿಸಲು ಹೋಗಿದ್ದ ಗೌಳಿಗರ ಕ್ಯಾಂಪ್ ನ ನಿವಾಸಿಗಳಾದ ಸುರೇಶ್ (35) ಮತ್ತು ಬೀರು (32) ಮೃತ ದುರ್ದೈವಿಗಳಾಗಿದ್ದಾರೆ.
ಭತ್ತದ ರಾಶಿಯನ್ನು ರಕ್ಷಿಸಲು ಹೋಗಿದ್ದ ಸಂದರ್ಭದಲ್ಲಿ ಸಹೋದರರಿಬ್ಬರೂ ಸಿಡಿಲು ಬಡಿದು ಸಾವನಪ್ಪಿದ್ದಾರೆ. ಹೊರಗೆ ಹೋಗಿದ್ದ ಮಕ್ಕಳು ಬಹಳ ಹೊತ್ತಾದರೂ ಮನೆಗೆ ಬಾರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದ್ದಾರೆ, ಜಮೀನಿನಲ್ಲಿ ಬಂದು ನೋಡಿದಾಗ, ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply