ಶಿವಮೊಗ್ಗದಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್!

ಶಿವಮೊಗ್ಗದಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್!

ಶಿವಮೊಗ್ಗ : 2019 ಮಾರ್ಚ್ 5 ರಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ಬೆದರಿಸಿ ದರೋಡೆ ಮಾಡಿದ್ದ ಆರು ಜನ ಆರೋಪಿಗಳಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಶಿವಮೊಗ್ಗ, ಪೀಠಾಸೀನ ಭದ್ರಾವತಿಯಲ್ಲಿ 2 ಪ್ರಕರಣಗಳ ವಿಚಾರಣೆ ನಡೆದು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧಿಶರಾದ ಶ್ರೀ ಆರ್ ವೈ ಶಶಿಧರ ರವರು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ.

ದಿನಾಂಕ 2019 ಮಾರ್ಚ್ 5 ರಂದು ಆರು ಜನರ ಅಪರಿಚಿತರ ತಂಡವೊಂದು ಎರಡು ಬೈಕ್ ಗಳಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆಯೊಡ್ಡಿ ರೂ 20,000/- ನಗದು ಮತ್ತು ಐ-ಪಾಡ್ ಮತ್ತು ಐ-ಫೋನ್ ಅನ್ನು ದರೋಡೆ ಮಾಡಿಕೊಂಡು ಹೋಗಿದ್ದರು,

ಅದೇ ದಿನ ರಾತ್ರಿ ಆರು ಜನ ಅಪರಿಚಿತರು ಎರಡು ಬೈಕ್ ಗಳಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆಯೊಡ್ಡಿ ರೂ 500 ಮತ್ತು ಮೊಬೈಲ್ ಫೋನ್ ಅನ್ನು ದರೋಡೆ ಮಾಡಿಕೊಂಡು ಹೋಗಿದ್ದರು.

ಈ ಹಿನ್ನೆಲೆಯಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು

ಅಂದಿನ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ತನಿಖಾಧಿಕಾರಿ ಸಿಪಿಐ ಕೆ ಎಂ ಯೋಗೇಶ್ 02 ಪ್ರಕರಣಗಳ ತನಿಖೆ ಪೂರೈಸಿ, ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ಪ್ರತ್ಯೇಖವಾಗಿ ದೋಷಾರೋಪಣಾ ಪತ್ರಗಳನ್ನು ಸಲ್ಲಿಸಿದ್ದರು.

2 ಪ್ರಕರಣಗಳ ವಿಚಾರಣೆ ನಡೆದು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧಿಶರಾದ ಶ್ರೀ ಆರ್ ವೈ ಶಶಿಧರ ರವರು ಮೊದಲ ಆರೋಪಿ ಸಿದ್ದಾಪುರದ ದೃವಕುಮಾರ್(22) ಈತನಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ 5,000/- ದಂಡ ವಿಧಿಸಲಾಗಿದೆ.

ದಂಡ ಕಟ್ಟಲು ವಿಫಲನಾದಲ್ಲಿ 03 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ಮತ್ತು ಉಳಿದ ಆರೋಪಿತರಾದ ವೇಲೂರು ಜನ್ಬಾಪುರದ ಸೈಯ್ಯದ್ ಇಮ್ರಾನ್, (22), ಸಿದ್ದಾಪುರ ಗ್ರಾಮದ ಶಿವಕುಮಾರ್ (24) ಸಿದ್ದಾಪುರದ ಸಚಿನ್ (21), ವೇಲೂರು ಶೆಡ್ ನ ಯೋಗೇಶ್ (24), ಮತ್ತು ಹೊಸ ಸಿದ್ದಾಪುರದ ಗಿರೀಶ ಕುಮಾರ್ (21) ವರ್ಷ, ತಲಾ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ರೂ 5,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 03 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿ ತೀರ್ಪು ನೀಡಿರುತ್ತಾರೆ

ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply

Your email address will not be published.