ಪಂಚರಾಜ್ಯ ಚುನಾವಣೆಯ ಮಹಾ ಸಮೀಕ್ಷೆ : ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ ! ಯಾರಿಗೆ ಗೆಲುವು? ಯಾರಿಗೆ ಹಿನ್ನಡೆ ? ಇಲ್ಲಿದೆ ಪೂರ್ಣ ಮಾಹಿತಿ

ಪಂಚರಾಜ್ಯ ಚುನಾವಣೆಯ ಮಹಾ ಸಮೀಕ್ಷೆ : ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ ! ಯಾರಿಗೆ ಗೆಲುವು? ಯಾರಿಗೆ ಹಿನ್ನಡೆ ? ಇಲ್ಲಿದೆ ಪೂರ್ಣ ಮಾಹಿತಿ

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಎಕ್ಸಿಟ್ ಪೋಲ್ ಫಲಿತಾಂಶ ಹೊರಬರುತ್ತಿದೆ. ವಿವಿಧ ಸಂಸ್ಥೆಗಳು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹಾಗೂ ಮತಗಟ್ಟೆಗಳ ಸಮೀಕ್ಷೆಯ ವರದಿ ನೀಡುತ್ತಿವೆ.

ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ತೆಲಂಗಾಣದಲ್ಲಿ ಬಿಆರ್​ಎಸ್​ ಹಿನ್ನಡೆ ಸಾಧಿಸಲಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯುವ ಬಗ್ಗೆ ಭವಿಷ್ಯ ನುಡಿಯಲಾಗಿದೆ.

ಐದು ರಾಜ್ಯಗಳಿಗೆ ಏಕಕಾಲದಲ್ಲಿ ಚುನಾವಣೆ ಘೋಷಣೆ ಮಾಡಲಾಗಿತ್ತು. ನ.7ರಂದು ಮಿಜೋರಾಂನ ಎಲ್ಲ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು. ಛತ್ತೀಸ್‌ಗಢದ 90 ಕ್ಷೇತ್ರಗಳಿಗೆ ನ.7 ಮತ್ತು ನ.17ರಂದು ಎರಡು ಹಂತದಲ್ಲಿ ಚುನಾವಣೆ ನಡೆಸಲಾಗಿತ್ತು. ನ.17ರಂದು ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಎಲ್ಲ 230 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ನ.25ರಂದು ಮತದಾನವಾಗಿತ್ತು. ಇಂದು, ನ.30ರಂದು ತೆಲಂಗಾಣದ 119 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಇದರ ಬೆನ್ನಲ್ಲೆ ಸಮೀಕ್ಷೆಗಳ ವರದಿಗಳು ಹೊರ ಬರುತ್ತಿವೆ.

ಛತ್ತೀಸ್‌ಗಢ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-90, ಮ್ಯಾಜಿಕ್ ನಂಬರ್-46)

ಟಿವಿ9: ಬಿಜೆಪಿಗೆ 30-40, ಕಾಂಗ್ರೆಸ್‌ಗೆ 46-56, ಇತರರು 03-05 ಸ್ಥಾನ

ಇಂಡಿಯಾ ಟುಡೇ – ಆಕ್ಸಿಸ್ ಮೈ ಇಂಡಿಯಾ: ಕಾಂಗ್ರೆಸ್‌ಗೆ 40-50, ಬಿಜೆಪಿಗೆ 36-46, ಇತರರು 1-5 ಸ್ಥಾನ

ಮ್ಯಾಟ್ರಿಜ್: ಎಕ್ಸಿಟ್ ಪೋಲ್: ಬಿಜೆಪಿಗೆ 34-42 ಸ್ಥಾನ, ಕಾಂಗ್ರೆಸ್‌ಗೆ 44-52, ಇತರರು 0-2 ಸ್ಥಾನ

ಟುಡೇಸ್ ಚಾಣಕ್ಯ: ಕಾಂಗ್ರೆಸ್‌ಗೆ 57, ಬಿಜೆಪಿಗೆ 33, ಇತರರು 0 ಸ್ಥಾನ

ಮಧ್ಯಪ್ರದೇಶದ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-230, ಮ್ಯಾಜಿಕ್ ನಂಬರ್-116)

 

ಟಿವಿ9: ಬಿಜೆಪಿಗೆ 106-116, ಕಾಂಗ್ರೆಸ್‌ಗೆ 111-121, ಇತರರು 00-06 ಸ್ಥಾನ

ರಿಪಬ್ಲಿಕ್ ಟಿವಿ: ಬಿಜೆಪಿಗೆ 118-130, ಕಾಂಗ್ರೆಸ್‌ಗೆ 97-107, ಇತರರು 0-2 ಸ್ಥಾನ

ಪೋಲ್​ಸ್ಟಾರ್: ಬಿಜೆಪಿಗೆ 106-116, ಕಾಂಗ್ರೆಸ್​ಗೆ 111-121, ಇತರರು 0-6 ಸ್ಥಾನ

ಜನ್ ಕಿ ಬಾತ್: ಬಿಜೆಪಿಗೆ 100-123, ಕಾಂಗ್ರೆಸ್​ಗೆ 102-125, ಇತರರು 5 ಸ್ಥಾನ

ಮ್ಯಾಟ್ರಿಜ್: ಬಿಜೆಪಿಗೆ 118-130, ಕಾಂಗ್ರೆಸ್​ಗೆ 97-107, ಇತರರು 0-2 ಸ್ಥಾನ

ಟುಡೇಸ್ ಚಾಣಕ್ಯ: ಬಿಜೆಪಿಗೆ 151 ± 12, ಕಾಂಗ್ರೆಸ್​ಗೆ 74 ± 12, ಇತರರು 5 ± 4 ಸ್ಥಾನ

ರಾಜಸ್ಥಾನ ಎಕ್ಸಿಟ್ ಪೋಲ್ (ಒಟ್ಟು ಸ್ಥಾನ-200, ಮ್ಯಾಜಿಕ್ ನಂಬರ್-101)

ಪೋಲ್​ಸ್ಟಾರ್​ : ಬಿಜೆಪಿಗೆ 100-110, ಕಾಂಗ್ರೆಸ್​ಗೆ 90-100, ಇತರರು 5-15 ಸ್ಥಾನ

ಜನ್ ಕಿ ಬಾತ್: ಕಾಂಗ್ರೆಸ್​ಗೆ 62-85, ಬಿಜೆಪಿಗೆ 100-122, ಇತರರು 14-15 ಸ್ಥಾನ

PMARQ: ಕಾಂಗ್ರೆಸ್​ಗೆ 69-91, ಬಿಜೆಪಿಗೆ 105-125, ಇತರರು 5-15 ಸ್ಥಾನ

ಇಟಿಜಿ: ಕಾಂಗ್ರೆಸ್​ಗೆ 56-72, ಬಿಜೆಪಿಗೆ 108-128, ಇತರರು 13-21 ಸ್ಥಾನ

ಆಕ್ಸಿಸ್ ಮೈ ಇಂಡಿಯಾ: ಕಾಂಗ್ರೆಸ್​ಗೆ 96, ಬಿಜೆಪಿಗೆ 90, ಇತರರು 13 ಸ್ಥಾನ

ತೆಲಂಗಾಣ ಎಕ್ಸಿಟ್ ಪೋಲ್ (ಒಟ್ಟು ಸ್ಥಾನ-119, ಮ್ಯಾಜಿಕ್ ನಂಬರ್-60)

ಜನ್ ಕಿ ಬಾತ್: ಕಾಂಗ್ರೆಸ್​ಗೆ 48-64, ಬಿಆರ್‌ಎಸ್​ಗೆ 40-55, ಬಿಜೆಪಿಗೆ 7-13, ಎಐಎಂಐಎಂಗೆ 4-7

ಪೋಲ್​ಸ್ಟಾರ್: ಕಾಂಗ್ರೆಸ್​ಗೆ 49-59, ಬಿಆರ್‌ಎಸ್​ಗೆ 48-58, ಬಿಜೆಪಿಗೆ 5-10, ಎಐಎಂಐಎಂಗೆ 6-8

ಮಿಜೋರಾಂ ಎಕ್ಸಿಟ್ ಪೋಲ್ (ಒಟ್ಟು ಸ್ಥಾನ-40, ಮ್ಯಾಜಿಕ್ ನಂಬರ್-21)

ಜನ್ ಕಿ ಬಾತ್: MNFಗೆ 10-14, ಕಾಂಗ್ರೆಸ್​ಗೆ 5-9, ಬಿಜೆಪಿಗೆ 0-2 ಸ್ಥಾನ

ಇಂಡಿಯಾ ಟಿವಿ-ಸಿಎನ್​ಎಕ್ಸ್: MNFಗೆ 14-18, ZPMಗೆ 12-16, ಕಾಂಗ್ರೆಸ್​ಗೆ 8-10, ಬಿಜೆಪಿಗೆ 0 ಸ್ಥಾನ

ನಾಲ್ಕು ಪ್ರಮುಖ ರಾಜ್ಯಗಳ ಪೋಲ್​ ಆಫ್​ ಪೋಲ್ ಸಮೀಕ್ಷೆ

ಮಧ್ಯಪ್ರದೇಶ: ಬಿಜೆಪಿಗೆ 116, ಕಾಂಗ್ರೆಸ್‌ಗೆ 111, ಇತರರು 3 ಸ್ಥಾನ

ರಾಜಸ್ಥಾನ: ಬಿಜೆಪಿಗೆ 115, ಕಾಂಗ್ರೆಸ್‌ಗೆ 71 ಮತ್ತು ಇತರರು 13 ಸ್ಥಾನ

ತೆಲಂಗಾಣ: ಕಾಂಗ್ರೆಸ್‌ಗೆ 54, ಬಿಆರ್‌ಎಸ್‌ಗೆ 52, ಎಐಎಂಐಎಂಗೆ 6, ಬಿಜೆಪಿಗೆ 7 ಸ್ಥಾನ

ಛತ್ತೀಸ್‌ಗಢ: ಕಾಂಗ್ರೆಸ್‌ಗೆ 49, ಬಿಜೆಪಿಗೆ 38 ಮತ್ತು ಇತರರಿಗೆ 3 ಸ್ಥಾನಗಳು.


Leave a Reply

Your email address will not be published.