ಡಿಸೆಂಬರ್ 6 ರಿಂದ 10 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಸ್ವದೇಶಿ ಮೇಳ ! ಐದು ದಿನಗಳ ಕಾಲ ಪ್ರತಿ ದಿನ ಲಕ್ಕಿಡಿಪ್ ಮುಖಾಂತರ ಮಹಿಳೆಯರಿಗೆ ಸೀರೆ ಉಡುಗೊರೆ ! ಮೇಳಕ್ಕೆ ಮೈಸೂರು ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮನ

ಶಿವಮೊಗ್ಗ : ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದರ ಜೊತೆಗೆ ದೇಶಿಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಡಿಸೆಂಬರ್ 6 ರಿಂದ 10 2023ರ ವರೆಗೆ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಶಿವಮೊಗ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಬೃಹತ್ ಸ್ವದೇಶಿ ಮೇಳವನ್ನು ಆಯೋಜಿಸಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟಕ್ ಕೆ ಜಗದೀಶ್ ಹೇಳಿದರು.

ಇಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತ್ರಿಕಾಗೋಷ್ಠಿ ನಡೆಸಿದ ಸ್ವದೇಶಿ ಮೇಳದ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸ್ವದೇಶಿ ಮೇಳದಲ್ಲಿ ಏನೆಲ್ಲ ವಿಶೇಷತೆಗಳಿವೆ.? ಶಿವಮೊಗ್ಗದ ಜನತೆಗೆ ಸ್ವದೇಶಿ ಮೇಳದಿಂದ ಆಗುವ ಉಪಯೋಗವೇನು ಎಂದು ಹೇಳಿದರು.

ಇನ್ನು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುವಂತಹ ಈ ಸ್ವದೇಶಿ ಮೇಳಕ್ಕೆ ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು.ವೈವಿಧ್ಯಮಯ ದೇಶೀ ಆಹಾರಗಳು, ದೇಶಿ ಆಟಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ತರಬೇತಿ ಕಾರ್ಯಕ್ರಮಗಳು ಸೇರಿದಂತೆ 250 ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಲಿದೆ.

ಡಿಸೆಂಬರ್ 6ರ ಸಂಜೆ 6:30ಕ್ಕೆ ಸಾರ್ವಜನಿಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದು. ಈ ವೇಳೆ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ ವೈ ರಾಘವೇಂದ್ರ ಮತ್ತು ಮಾನ್ಯ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ಆರ್ ಸೇಲ್ವಮಣಿ ಭಾಗವಹಿಸಲಿದ್ದು. ಪ್ರೊ ಬಿ.ಎಂ ಕುಮಾರಸ್ವಾಮಿ ಮುಖ್ಯ ಭಾಷಣ ಮಾಡಲಿದ್ದಾರೆ.

 ಡಿಸೆಂಬರ್ 6ರ ಸಂಜೆ ಜಾನಪದ ಕಲಾವೈಭವ, ಡಿಸೆಂಬರ್ 7ರ ಸಂಜೆ ಖ್ಯಾತ ಸಂಗೀತ ಕಲಾವಿದ ಪ್ರವೀಣ್ ಗೋಡ್ಚಿಂಡಿ ಅವರಿಂದ ಬಾನ್ಸುರಿ ಕಾರ್ಯಕ್ರಮ, ಡಿಸೆಂಬರ್ 8ರಂದು ಶ್ವೇತ ಕುಮಾರ ಚರಿತ್ರೆ ಯಕ್ಷಗಾನ, ಡಿಸೆಂಬರ್ 9ರಂದು ವಂದೇ ಮಾತರಂ ನೃತ್ಯ ರೂಪಕ, ಡಿಸೆಂಬರ್ 10 ರಂದು ಖ್ಯಾತ ಜಾದು ಕಲಾವಿದ ಕುದ್ರೊಳ್ಳಿ ಗಣೇಶ್ ಅವರಿಂದ ಜಾದು ಪ್ರದರ್ಶನ ನಡೆಯಲಿದೆ.

 ಸೌಭಾಗ್ಯವತಿ ಲಕ್ಕಿ ಡಿಪ್

ಭಾರತೀಯ ಪಾರಂಪರಿಕ ಉಡುಗೆಯಾದ ಸೀರೆ ಧರಿಸಿ ಬರುವ ಮಹಿಳೆಯರಿಗೆ ಲಕ್ಕಿ ಡಿಪ್ ಮುಖಾಂತರ ಸೀರೆಯನ್ನು ಉಡುಗೊರೆಯಾಗಿ ನೀಡಲಾಗುವುದು. ಪ್ರತಿ ದಿನ 10 ಮಹಿಳೆಯರಿಗೆ “ಸೌಭಾಗ್ಯವತಿ ಸೀರೆ” ಉಡುಗೊರೆ ಸಿಗಲಿದೆ. ಸಾರ್ವಜನಿಕರು ಐದು ದಿನದ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಹೇಳಿದೆ 

5 ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ. ಉಚಿತ ಪ್ರವೇಶವಿರುತ್ತದೆ.

ಸುದ್ದಿಗೋಷ್ಟಿಯಲ್ಲಿ ಸ್ವದೇಶಿ ಜಾಗರಣ ಮಂಚ್ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟಕ್ ಕೆ ಜಗದೀಶ್, ಹರ್ಷ ಕಾಮತ್, ಸಂಚಾಲಕ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ದತ್ತಾತ್ರಿ, ಜಿಲ್ಲಾ ಸಂಯೋಜಕರಾದ ದಿಲೀಪ್, ಮಾಜಿ ಪಾಲಿಕೆ ಸದಸ್ಯೆ ಸುರೇಖಾ ಮುರುಳೀಧರ್ ಮೊದಲಾದವರು ಉಪಸ್ಥಿತರಿದ್ದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.