ಮಕ್ಕಳಿಗೆ ಯುಕ್ತ ಶಿಕ್ಷಣ ನೀಡಿ ಬೆಳೆಸಿದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ – ಶ್ರೀ ಸಿ.ಆರ್. ಪರಮೇಶ್ವರಪ್ಪ,
ಮಕ್ಕಳು ಈ ರಾಷ್ಟ್ರದ ಅಮೂಲ್ಯ ಸಂಪತ್ತಾಗಿದ್ದು, ಅವರ ಮೇಲೆ ದೌರ್ಜನ್ಯವೆಸಗುವುದು, ಬಾಲಕಾರ್ಮಿಕರಾಗಿ ದುಡಿಸುವುದು ಹಾಗೂ ಶಿಕ್ಷಣದಿಂದ ವಂಚಿತರನ್ನಾಗಿಸುವುದು ಮುಂತಾದ ಸಾಮಾಜಿಕ ಪಿಡುಗುಗಳಿಂದ ಮುಕ್ತಗೊಳಿಸಿ, ಮಕ್ಕಳ ಹಕ್ಕುಗಳ ಕುರಿತು ಸಮಾಜದಲ್ಲಿ ಅರಿವನ್ನು ಮೂಡಿಸಿ, ಈ ದೇಶದ ಎಲ್ಲಾ ಮಕ್ಕಳಿಗೆ ಸಮಾನ ಹಾಗೂ ಗುಣಮಟ್ಟದ ಶೈಕ್ಷಣಿಕ ಅವಕಾಶ ನೀಡುವುದರ ಮೂಲಕ ದೇಶದ ಉತ್ತಮ ಮಾನವ ಸಂಪನ್ಮೂಲವನ್ನಾಗಿ ಬೆಳೆಸಿದಾಗ ಮಾತ್ರ ಈ ರಾಷ್ಟçದ ಅಭಿವೃದ್ಧಿ ಸಾಧ್ಯ, ಎಂದು ಶಿವಮೊಗ್ಗ ಜಿಲ್ಲೆಯ ಶಾಲಾ ಶಿಕ್ಷಣ ಉಪನಿರ್ದೆಶಕ ಶ್ರೀಯುತ ಸಿ.ಆರ್. ಪರಮೇಶ್ವರಪ್ಪ ಅಭಿಪ್ರಾಯ ಪಟ್ಟರು.
ಅವರು ರೋಟರಿ ಪೂರ್ವ ಶಾಲೆಯಲ್ಲಿ ಜವಾಹರಲಾಲ್ ನೆಹರು ಅವರ ಜಯಂತಿಯ ಅಂಗವಾಗಿ ಏರ್ಪಡಿಸಿದ ಮಕ್ಕಳ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಮ್ಮ ಮಾತನ್ನು ಮುಂದುವರೆಸಿದ ಶ್ರೀಯುತರು ರಾಜೇಂದ್ರನಗರದ ನಿವಾಸಿಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ರೋಟರಿ ಪೂರ್ವ ಸಂಸ್ಥೆಯು ಸಂಪೂರ್ಣ ಸೇವಾ ಮನೋಭಾವದಿಂದ ಈ ಶಾಲೆಯನ್ನು ನಡೆಸುತ್ತಿದ್ದು, ಶಾಲಾ ಆಡಳಿತ ಮಂಡಳಿಯಾದ “ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,)” ಇದು ತನ್ನ “ಫಾಸ್ಟರ್ ಪೇರೆಂಟ್” ಹಾಗೂ “ಫಂಡ್ ಫಾರ್ ನೀಡಿ” ಈ ಯೋಜನೆಗಳ ಮೂಲಕ ಹಲವು ರೋಟರಿ ಸದಸ್ಯರಿಂದ ಧನ ಸಹಾಯ ಪಡೆದು ಅರ್ಹ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ಭರಿಸುತ್ತಿರುವುದು ಸ್ತುತ್ಯಾರ್ಹ ಸಂಗತಿ ಎಂದರು. ಜೊತೆಗೆ ತಮಗೆ ಈ ಹಿಂದೆ ಹಿರಿಯ ಅಧಿಕಾರಿಗಳಾಗಿದ್ದ ನಿವೃತ್ತ ಡಿ.ಪಿ.ಐ. ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಚಂದ್ರಶೇಖರಯ್ಯ ಎಂ., ಇವರಿಗೆ ಇದೇ ನವೆಂಬರ್ ೧೪ಕ್ಕೆ ೭೫ ವರ್ಷಗಳು ತುಂಬಿದ್ದು, ಅವರಿಗೆ ಧೀರ್ಘಾಯುಷ್ಯವನ್ನು ದೇವರು ಕರುಣಿಸಲಿ ಎಂದು ಶುಭ ಕೋರಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ರೊ. ಸತೀಶ್‌ಚಂದ್ರ ಇವರು ಈ ಶಾಲೆಯಲ್ಲಿರುವ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಮನೆಯಲ್ಲಿ ಸೂಕ್ತ ಶೈಕ್ಷಣಿಕ ವಾತಾವರಣ ಇರದ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಕರು ವಿಶೇಷ ಗಮನ ಹರಿಸಿ ಈ ಕೊರತೆಯನ್ನು ನೀಗಿಸಬೇಕೆಂದು ಕೋರಿದರು.
ಟ್ರಸ್ಟ್ನ ಉಪಾಧ್ಯಕ್ಷ ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಇವರು ಶಾಲಾ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸಲು ಕೈಗೊಂಡ ಕ್ರಮಗಳು ಹಾಗೂ ಸಾಧಿಸಿದ ಪ್ರಗತಿಯ ಚಿತ್ರಣ ನೀಡಿದರು.
ಅತಿಥಿಗಳಾಗಿ ಆಗಮಿಸಿದ ಶಿಕ್ಷಣಾಧಿಕಾರಿ ಶ್ರೀಮತಿ ಬಿಂಬ, ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಖಜಾಂಚಿ ರೊ. ಜಿ. ವಿಜಯ್ ಕುಮಾರ್, ಸಹಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಇನ್ನರ್‌ವ್ಹೀಲ್ ಅಧ್ಯಕ್ಷೆ ಶ್ರೀಮತಿ ಶ್ವೇತಾ ಆಶಿತ್, ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣನ್, ಮುಖ್ಯ ಶಿಕ್ಷಕಿ ಶ್ರೀಮತಿ ಜಯಶೀಲಾ ಬಾಯಿ ಎಸ್. ಹಾಗೂ ಇಂರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಕು. ಹರ್ಷಿತ್ ಆರ್.ಎಸ್. ಇವರು ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸುವುದರ ಜೊತೆಗೆ ೭೫ ವರ್ಷಗಳನ್ನು ಪೂರ್ಣಗೊಳಿಸಿದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಚಂದ್ರಶೇಖರಯ್ಯ ಎಂ., ಇವರಿಗೆ ಶುಭ ಕೋರಿದರು.
ಜಾಹಿರಾತು :
ವೇದಿಕೆಯ ಮೇಲೆ ಟ್ರಸ್ಟ್ನ ಪದಾಧಿಕಾರಿಗಳಾದ ರೊ. ಚಂದ್ರಹಾಸ್ .ಪಿ ರಾಯ್ಕರ್, ರೊ. ನಾಗರಾಜ್ ಎಂ.ಪಿ., ಟ್ರಸ್ಟಿಗಳಾದ ರೊ. ಆದಿಮೂರ್ತಿ ಹೆಚ್.ಬಿ., ರೊ. ಪಿ. ನಾಗರಾಜ್, ರೊ. ಮಂಜುನಾಥ್ ಎನ್.ಬಿ., ರೊ. ಮಧು ಹೆಚ್.ಎಂ., ರೊ. ಹೇಮಂತ್ ಎಂ.ಸಿ., ರೊ. ಪವೀಶ್ ಡಿ., ರೊ. ಡಾ|| ಅರುಣ್ ಎಂ.ಎಸ್., ಇನ್ನರ್‌ವ್ಹೀಲ್ ಕಾರ್ಯದರ್ಶಿ ಶ್ರೀಮತಿ ವಾಗ್ದೇವಿ ಮುಂತಾದವರಿದ್ದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಪರವಾಗಿ ಉಪನ್ಯಾಸಕ ಶ್ರೀ ಸುನೀಲ್ ಎಂ.ಡಿ., ಇವರು ಏಪ್ರಿಲ್ ೨೦೨೩ರ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ. ೧೦,೦೦೦-೦೦ ನಗದು ಬಹುಮಾನ ಹಾಗೂ ಟ್ರಸ್ಟ್ನ ‘ಫಂಡ್ ಫಾರ್ ನೀಡಿ’ ಖಾತೆಗೆ ರೂ.೫,೦೦೦-೦೦ವನ್ನು ದಾನವಾಗಿ ನೀಡಿದರು.
ಸಮಾರಂಭದ ಮುಕ್ತಾಯ ಹಂತದಲ್ಲಿ ಅಧ್ಯಕ್ಷತೆ ವಹಿಸಿದ ರೊ. ಚಂದ್ರಶೇಖರಯ್ಯ ಎಂ., ಇವರಿಗೆ ಇದೇ ನವೆಂಬರ್ ೧೪ಕ್ಕೆ ೭೫ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೋಟರಿ ಪೂರ್ವ ಅಧ್ಯಕ್ಷರು, ಟ್ರಸ್ಟ್ನ ಪದಾಧಿಕಾರಿಗಳು, ಟ್ರಸ್ಟಿಗಳು, ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಸೇರಿ ಮೈಸೂರು ಪೇಟ ತೊಡಿಸಿ ಶಾಲು, ಫಲಪುಷ್ಪ ಹಾಗೂ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು. ಮ್ಯಾನೇಜಿಂಗ್ ಟ್ರಸ್ಟಿಯವರು ತಮ್ಮನ್ನು ಸನ್ಮಾನಿಸಿ, ಶುಭ ಕೋರಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply