ಶಿವಮೊಗ್ಗದಲ್ಲಿ ನಕಲಿ ಬಿಲ್ ಸೃಷ್ಟಿಸಿ ಯುವತಿಯರಿಂದ ಅಡಿಕೆ ಮಂಡಿ ಮಾಲೀಕನಿಗೆ ಬರೋಬ್ಬರಿ 7 ಕೋಟಿ ರೂ. ವಂಚನೆ ! ಏನಿದು ಪ್ರಕರಣ ?
ಶಿವಮೊಗ್ಗ : ಯುವತಿಯರಿಬ್ಬರ ಖತರ್ನಾಕ್ ಕೆಲಸದಿಂದ ಶಿವಮೊಗ್ಗ ಎಪಿಎಂಸಿಯಲ್ಲಿ ಅಡಿಕೆ ಮಂಡಿ ಮಾಲೀಕ ಮಂಜುನಾಥ್ ಗೆ ಬರೋಬ್ಬರಿ 7 ಕೋಟಿ ರೂಪಾಯಿ ವಂಚನೆ ನಡೆದ್ದು, ಅಡಕೆ ಮಂಡಿ ಮಾಲೀಕ ಪ್ರತಿನಿತ್ಯ ಕಣ್ಣೀರಿಡುವಂತಾಗಿದೆ. ಸಹನಾ ಮತ್ತು ಮೇಘನಾ ಎಂಬ ಮಹಿಳೆಯರಿಬ್ಬರು ನಕಲಿ ಬಿಲ್ ಸೃಷ್ಟಿಸಿ ಅಡಿಕೆ ಮಂಡಿ ಮಾಲೀಕರೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ.
ಈ ವಂಚನೆಯ ಕುರಿತು ದೂರು ನೀಡಿದ್ದಾರೆ.
ಘಟನೆ ಏನು: ಶಿವಮೊಗ್ಗ ಎಪಿಎಂಸಿ ಆವರಣದಲ್ಲಿರುವ ಮಂಡಿ ಮಾಲೀಕ ಮಂಜುನಾಥ್ ಬಳಿ ಏಳು ವರ್ಷದಿಂದ ಮೇಘನಾ ಮತ್ತು ಮೂರು ವರ್ಷದಿಂದ ಸಹನಾ ಕೆಲಸ ಮಾಡುತ್ತಿದ್ದರು. ಅಂಗಡಿಯ ಎಲ್ಲ ವ್ಯವಹಾರ ಮತ್ತು ಲೆಕ್ಕಪತ್ರಗಳನ್ನು ಈ ಇಬ್ಬರು ಮಹಿಳೆಯರು ನೋಡಿಕೊಳ್ಳುತ್ತಿದ್ದರು.
ಮಂಜುನಾಥ್ ಪತ್ನಿಗೆ ಕ್ಯಾನ್ಸರ್ ಇದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥ್ ಅಡಿಕೆ ಮಂಡಿಯ ಎಲ್ಲ ವ್ಯಹಹಾರಗಳನ್ನು ಸಹನಾ ಮತ್ತು ಮೇಘನಾ ಇಬ್ಬರು ನೋಡಿಕೊಳ್ಳುತ್ತಿದ್ದರು. ಇಬ್ಬರು ಮಹಿಳೆಯರು ಅಂಗಡಿ ಮಾಲೀಕ ಮಂಜುನಾಥ್ ಗೆ ನಂಬಿಸಿ ಮಂಡಿಯಲ್ಲಿ ಇರುವ 2100 ಅಡಿಕೆ ಮೂಟೆ ಅಂದಾಜು 7 ಕೋಟಿ ಕದ್ದು ಮುಚ್ಚಿ ಮಾರಾಟ ಮಾಡಿದ್ದಾರೆ.
ಇದೀಗ ಪ್ರಕರಣ ಕುರಿತು ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಹನಾ ಮತ್ತು ಮೇಘನಾ ಮತ್ತು ಮೇಘಾನ ಪತಿ ರವಿ ವಿರುದ್ಧ ಎಫ್ ಐಆರ್ ದಾಖಲು ಆಗಿತ್ತು. ಎಫ್‌ಐಆರ್ ದಾಖಲು ಆಗುತ್ತಿದ್ದಂತೆ ಸಹನಾ ಮತ್ತು ಮೇಘನಾ ಇಬ್ಬರೂ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಇನ್ನು ಮೇಘನಾ ಪತಿ ರವಿಯನ್ನು ಪೊಲೀಸರು ವಂಚನೆ ಕೇಸ್ ನಲ್ಲಿ ಬಂಧಿಸಿದ್ದರು. ರವಿ ಕೂಡಾ ಜಾಮೀನು ಪಡೆದುಕೊಂಡು ಸದ್ಯ ಬೇಲ್ ಮೇಲೆ ಹೊರಗೆ ಬಂದಿದ್ದಾನೆ. ಇತ್ತ ವಯಸ್ಸಾದ ಅಡಿಕೆ ಮಂಡಿಯ ಮಾಲೀಕ ಮಂಜುನಾಥ್ ಮಹಿಳಾ ಸಿಬ್ಬಂದಿಯನ್ನು ನಂಬಿ ಮೋಸ ಹೋಗಿದ್ದು ನಿತ್ಯವೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಆದರೆ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply