ನಾಳೆ ಸಂಸದ ಬಿ ವೈ ರಾಘವೇಂದ್ರರಿಗೆ ” ಸಾರ್ಥಕ ಸುವರ್ಣ ” ಅಭಿನಂದನಾ ಕಾರ್ಯಕ್ರಮ
ಶಿವಮೊಗ್ಗ : ನಾಳೆ ಸಂಸದ ಬಿ ವೈ ರಾಘವೇಂದ್ರರಿಗೆ ” ಸಾರ್ಥಕ ಸುವರ್ಣ ” ಅಭಿನಂದನಾ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದೆ. ಸಂಸದ ಬಿ ವೈ ರಾಘವೇಂದ್ರ 50 ನೇ ವಸಂತ ಪೂರೈಸಿದ ಹಿನ್ನೆಲೆ ಸಮಾರಂಭ ಏರ್ಪಡಿಸಲಾಗಿದೆ.
ನಾಳೆ ಡಿಸೆಂಬರ್ 08 ರಂದು ಸಂಜೆ 5-30 ಕ್ಕೆ ನವುಲೆಯಲ್ಲಿರುವ ಸರ್ಜಿ ಕನ್ವೆನ್ಷನಲ್ ಹಾಲ್ ನಲ್ಲಿ ” ಸಾರ್ಥಕ ಸುವರ್ಣ ” ಎಂಬ ಶೀರ್ಷಿಕೆಯ ಅಡಿಯಲ್ಲಿ ಮಲೆನಾಡು ವೀರಶೈವ ಲಿಂಗಾಯತರ ಮಠಾಧೀಶರ ಪರಿಷತ್ತು ವತಿಯಿಂದ ಸಂಸದ ಬಿ.ವೈ.ರಾಘವೇಂದ್ರರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ
ಬೆಕ್ಕಿನಕಲ್ಮಠ ಶ್ರೀಗಳಾದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಂದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದು ,ಹುಂಚದ ಹೊಂಬುಜ ಜೈನಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ಬಾಮಿಗಳು, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿಗಳು, ನಿಟ್ಟೂರಿನ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಮಹಾಸ್ವಾಮಿಗಳು ಭಾಗಿಯಾಗಲಿದ್ದಾರೆ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬಿ ವೈ ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ , ಸಾಕಷ್ಟು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಎಂದು ಹೇಳಿದರು
ಈ ವೇಳೆ ಎಸ್.ಎಸ್.ಜ್ಯೋತಿ ಪ್ರಕಾಶ್, ಜಡೆಶ್ರೀಗಳು , ಬಿಳಕಿ,, ಡಾ.ಧನಂಜಯ್ ಸರ್ಜಿ, ಮಾಜಿ ಪಾಲಿಕೆ ಸದಸ್ಯ ವಿಶ್ವಾಸ್, ಶಾಂತವೀರಪ್ಪ ಮತ್ತು ಮೊದಲಾದವರು ಭಾಗಿಯಾಗಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
ಜಾಹಿರಾತು :
Leave a Reply