ಡಿ ವಿ ಎಸ್ ಶಾಲಾ ಮುಂಭಾಗ ಬೈಕ್ ವೀಲಿಂಗ್ ಮಾಡಿದವನಿಗೆ ದಂಡ ವಿಧಿಸಿದ ನ್ಯಾಯಾಲಯ,
ಶಿವಮೊಗ್ಗ : ಇತ್ತೀಚೆಗೆ ಶಿವಮೊಗ್ಗದಲ್ಲಿ ಬೈಕ್ ವೀಲಿಂಗ್ ಮಾಡುವ ಪುಂಡರ ಸಂಖ್ಯೆ ಜಾಸ್ತಿಯಾಗಿದೆ, ಪ್ರಾಣದ ಮೇಲೆ ಹೆದರಿಕೆ ಇಲ್ಲದೆ,ಅಜಾಗರುಕತೆಯಿಂದ ಬೈಕ್ ವೀಲಿಂಗ್ ಮಾಡುತ್ತಿದ್ದವನಿಗೆ ಶಿವಮೊಗ್ಗ ನ್ಯಾಯಾಲಯ ದಂಡ ವಿಧಿಸಿದೆ.
ದಿನಾಂಕ:15/08/2023 ಬೆಳಿಗ್ಗೆ 10.00 ಗಂಟೆಯ ಸಮಯದಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ಟಾರ್ ರಸ್ತೆಯಲ್ಲಿ KA14 L-0080 ನಂಬರಿನ YAMAHA ಕಂಪನಿಯ RX 135 ಮೋಟಾರ್ ಬೈಕ್ ಹಾಗೂ KA18 H- 7937 ನಂಬರಿನ YAMAHA ಕಂಪನಿಯ RX 100 ಮೋಟಾರ್ ಬೈಕಿನಲ್ಲಿ ನಲ್ಲಿ ಅತಿ ವೇಗವಾಗಿ ಮತ್ತು ಅಜಾಗರುಕತೆಯಿಂದ, ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕರ ಮತ್ತು ತನ್ನ ಪ್ರಾಣಕ್ಕೆ ಹಾನಿಯಾಗುವಂತೆ ವ್ಹೀಲಿಂಗ್ ಮಾಡುತ್ತಿದ್ದ
ಈ ಬಗ್ಗೆ ಪಿಎಸ್ಐ ತಿರುಮಲೇಶ್ ಜಿ. ರವರು ದಿನಾಂಕ:-18/08/2023ರಂದು ಠಾಣಾ ಗುನ್ನೆ ನಂ.107/2023ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು 1ನೇ ಆರೋಪಿ 2ನೇ ಆರೋಪಿ ಹಾಗೂ ವ್ಹೀಲಿಂಗ್ ಮಾಡಲು ಬಳಸಿದ ಬೈಕಿನ ಆರ್ ಸಿ ಮಾಲೀಕರಾದ 3ನೇ ಆರೋಪಿರವರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣೆ ಪಟ್ಟಿನ್ನು ಸಲ್ಲಿಸಿದ್ದು,
ಘನ 3ನೇ ಎಸಿಜೆ & ಜೆಎಂಎಫ್ ಸಿ, ಶಿವಮೊಗ್ಗ, ನ್ಯಾಯಾಲಯವು ಈ ದಿನ ದಿನಾಂಕ:-06/12/2023ರಂದು ಕೈಗೊಂಡು 1ನೇ ಆರೋಪಿರವರಿಗೆ 11,000 ರೂ, 2ನೇ ಆರೋಪಿರವರಿಗೆ 8000 ರೂ ಹಾಗೂ ವ್ಹೀಲಿಂಗ್ ಮಾಡಲು ಬಳಸಿದ ಬೈಕಿನ ಆರ್ ಸಿ ಮಾಲೀಕರಾದ 3ನೇ ರವರಿಗೆ 4500 ರೂಗಳನ್ನು ದಂಡ ವಿಧಿಸಿರುತ್ತದೆ.
ಈ ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಶ್ರೀ ಪದ್ಮರಾಜ್.ಹೆಚ್.ಸಿ ಶ್ರೀ ನಾಗರಾಜ್.ಸಿ. ಹೆಚ್.ಸಿ ಹಾಗೂ ಶ್ರೀಮತಿ ಸುಧಾರಾಣಿ, ಮಪಿಸಿರವರು ಕರ್ತವ್ಯ ನಿರ್ವಹಿಸಿರುತ್ತಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
ಜಾಹಿರಾತು :
Leave a Reply