ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಳಿದ ಸೀಟುಗಳ ಭರ್ತಿ ಮತ್ತು ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಎನ್ ಎಸ್ ಯು ಐ ಮನವಿ

ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಳಿದ ಸೀಟುಗಳ ಭರ್ತಿ ಮತ್ತು ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಎನ್ ಎಸ್ ಯು ಐ ಮನವಿ

ಶಿವಮೊಗ್ಗ : ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಳಿದ ಸೀಟುಗಳ ಭರ್ತಿ ಮತ್ತು ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಅಗ್ರಹಿಸಿ ಎನ್ ಎಸ್ ಯು ಐ ಮನವಿ ಮಾಡಿದೆ

ಕುವೆಂಪು ವಿವಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ 2023-24ನೇ ಸಾಲಿನ ಪಿಜಿ ಪ್ರವೇಶ ಮುಕ್ತಾಯಗೊಂಡಿದ್ದು ವಿವಿಧ ಕೋರ್ಸುಗಳಿಗೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಂಗವಿಕಲ ಕೋಟಾದಡಿ ಮೀಸಲಾಗಿದ್ದ ಸೀಟುಗಳು ಸಂಪೂರ್ಣ ಭರ್ತಿಯಾಗಿಲ್ಲ ಹಾಗಾಗಿ , ಖಾಲಿ ಉಳಿದಿರುವ ಸೀಟುಗಳನ್ನು ಇತರೆ ವರ್ಗದ ಆಕಾಂಕ್ಷಿಗಳಿಗೆ ಹಂಚಿಕೆ ಮಾಡಬೇಕು. ಇದಕ್ಕಾಗಿ ಮತ್ತೊಮ್ಮೆ ಕೌನ್ಸಿಲಿಂಗ್‌ ನಡೆಸಬೇಕು.ಎಂದು ಎನ್ ಎಸ್ ಯು ಐ ಮನವಿ ಮಾಡಿದೆ

ಕುವೆಂಪು ವಿವಿಯ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿದೆ. ತರಗತಿಗಳು ಆರಂಭವಾಗಿ ಸೆಮಿಸ್ಟರ್ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ಕುವೆಂಪು ವಿವಿ ನೇಮಕಾತಿ ಮಾಡಿಲ್ಲ.ತರಗತಿಗಳು ಆರಂಭವಾಗಿ ಎರಡು ತಿಂಗಳಾಗುತ್ತಾ ಬಂದಿದ್ದು, ನಿಗಧಿತ ಪಠ್ಯಕ್ರಮಗಳ ಬೋಧನೆ ನಡೆದಿಲ್ಲ. ಸೆಮಿಸ್ಟರ್ ಪರೀಕ್ಷೆ ಹತ್ತಿರವಾಗುತ್ತಿದ್ದು, ಪಾಠವನ್ನೇ ಕೇಳದೆ ಪರೀಕ್ಷೆ ಬರೆಯುವುದು ಹೇಗೆಂಬ ಅತಂಕ ವಿದ್ಯಾರ್ಥಿಗಳಲ್ಲಿ ಮನೆಮಾಡಿದೆ.

ತಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ ಕುವೆಂಪು ವಿಶ್ವವಿದ್ಯಾಲಯವನ್ನು ಬಂದ್‌ ಮಾಡಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎನ್‌ಎಸ್‌ಯುಐ ಕಾರ್ಯಕರ್ತರು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ವಿಜಯ್‌ ಕುಮಾರ್‌, ಪ್ರಮುಖರಾದ ಹರ್ಷಿತ್‌, ಮುರುಗೇಶ್‌, ನಿಖಿಲ್‌ ಕೀರ್ತಿ ಸೇರಿದಂತೆ ಹಲವರು ಇದ್ದರು.

ವರದಿ : ಲಿಂಗರಾಜ್ ಗಾಡಿಕೊಪ್ಪ

ಜಾಹಿರಾತು :


Leave a Reply

Your email address will not be published.