ಕುಡಿದು ವಾಹನ ಚಲಾಯಿಸಿದವನಿಗೆ ಬಿತ್ತು ಬರೋಬ್ಬರಿ 11.000 ದಂಡ !
ಶಿವಮೊಗ್ಗ : ಕುಡಿದು ವಾಹನ ಚಲಾಯಿಸುವುದು ಅಪರಾಧ ಎಂದು ಗೊತ್ತಿದ್ದರೂ ಕೂಡ ನಿಯಮವನ್ನು ಗಾಳಿಗೆ ತೂರಿ ಕುಡಿದು ವಾಹನ ಚಲಾಯಿಸಿದವನಿಗೆ ಭದ್ರಾವತಿ ನ್ಯಾಯಾಲಯ ಬರೋಬ್ಬರಿ 11.000 ದಂಡ ವಿಧಿಸಿದೆ.
ದ್ವಿ ಚಕ್ರ ವಾಹನ ಸವಾರನೊಬ್ಬನು ಹೆಲ್ಮೆಟ್ ಧರಿಸದೆ ಮತ್ತು ಪಾನಮತ್ತನಾಗಿ ವಾಹನ ಚಲಾಯಿಸಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದರ ಹಿನ್ನೆಲೆಯಲ್ಲಿ ಭದ್ರಾವತಿಯ ನ್ಯಾಯಾಲಯ ಆತನಿಗೆ ರೂ 11 ಸಾವಿರ ದಂಡ ವಿಧಿ ಸಿದೆ.
ಡಿ. 4ರಂದು ಇಲ್ಲಿನ ರಬ್ಬರ್‌ಕಾಡು ವಾಸಿ ಕುಮಾರ್ (49) ದ್ವಿ ಚಕ್ರ ವಾಹನದಲ್ಲಿ ಹೋಗು ವಾಗ ನ್ಯೂ ಟೌನ್ ಎಸ್ ಐ ರಮೇಶ್ ತಪಾಸಿಸಿದ್ದರು. ಆಗ ಆತ ಕುಡಿತ ಮತ್ತಿನಲ್ಲಿರುವುದು ಬೆಳಕಿಗೆ ಬಂದಿತ್ತು. ಈತನ ವಿರುದ್ಧ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ವರದಿ ಸಲ್ಲಿಸಿದ್ದರು. ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಭದ್ರಾವತಿ ಇವರು ಪರಿಶೀಲನೆ ನಡೆಸಿ ದಂಡ ವಿಧಿ ಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
ಜಾಹಿರಾತು :
Leave a Reply