BREAKING NEWS : ಭದ್ರಾವತಿಯಲ್ಲಿ ಯುವಕನ ಕೊಲೆ ! ಹಳೇ ದ್ವೇಷಕ್ಕೆ ನಡೀತಾ ಮರ್ಡರ್ ?
ಭದ್ರಾವತಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವೈನ್ ಶಾಪ್ ನಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಹಳೇ ದ್ವೇಷದ ಹಿನ್ನಲೆ ಯುವಕನ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಭದ್ರಾವತಿ ಸಿಟಿಯಲ್ಲಿರುವ ಭದ್ರಾ ವೈನ್ ಶಾಪ್ ನಲ್ಲಿ ಹೇಮಂತ್ ಅಲಿಯಾಸ್ ಕರಿ ಚಿಕ್ಕಿಯನ್ನ ( 35 ) ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಹಿಂದೆ ಮುಜ್ಜು ಎಂಬಾತನ ಕೊಲೆಗೆ ಪತ್ರೀಕಾರವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ, ಸದ್ಯ ಘಟನೆ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply