BREAKING NEWS : ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ! ಮೂವರು ಯುವತಿಯರ ರಕ್ಷಣೆ !
ಶಿವಮೊಗ್ಗ : ನಗರದ ಗಾಂಧಿನಗರದ ಕಟ್ಟಡವೊಂದರ ನೆಲಮಾಳಿಗೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ಗಾಂಧಿ ನಗರದ 1 ನೇ ಪ್ಯಾರಲಲ್ ರಸ್ತೆಯಲ್ಲಿದ್ದ ಅಡ್ಡೆ ಮೇಲೆ ರೇಡ್ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರು ನೀಡಿದ್ದ ದೂರಿನನ್ವಯ ದಾಳಿ ನಡೆಸಲಾಗಿದೆ.
ಇಲ್ಲಿನ ಕಟ್ಟಡವೊಂದರ ನೆಲಮಾಳಿಗೆಯನ್ನು ಕಂಟ್ರಾಕ್ಟರ್ ಕಚೇರಿ ಹಾಗೂ ಗೋಡೌನ್ ಗಾಗಿ ಬಾಡಿಗೆ ಪಡೆಯಲಾಗಿತ್ತು. ಆದರೆ ಅಲ್ಲಿ, ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಾಹಿತಿ ಪಡೆದು ರೇಡ್ ನಡೆಸಿದ ಅಧಿಕಾರಿಗಳು, ಮೂವರು ಯುವತಿಯರನ್ನು ರಕ್ಷಿಸಿ ಇಬ್ಬರನ್ನ ಬಂಧಿಸಿದ್ದಾರೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply