WEKEND STORY : ಅಜ್ಜಿ ಅಥವಾ ತಾತ ಮನೆಯಲ್ಲಿದ್ದರೆ ಬೆಳೆಯುವ ಮಕ್ಕಳಿಗೆ ಆಗುವಂತಹ ಲಾಭಗಳು

WEKEND STORY : ಅಜ್ಜಿ ಅಥವಾ ತಾತ ಮನೆಯಲ್ಲಿದ್ದರೆ ಬೆಳೆಯುವ ಮಕ್ಕಳಿಗೆ ಆಗುವಂತಹ ಲಾಭಗಳು 

1. ಅಪ್ಪ ಮತ್ತು ಅಮ್ಮ ಇಬ್ಬರು ಮಕ್ಕಳಿಗೆ ಕೊಡಲೇಬೇಕಾದಂತಹ ಕ್ವಾಲಿಟಿ ಟೈಮ್ ಕೊಡದೆ ಇದ್ದಾಗ ಅದು ತಾತ ಅಥವಾ ಅಜ್ಜಿಯಿಂದ ಸಿಗುತ್ತದೆ.

2. ಅಪ್ಪ ಮತ್ತು ಅಮ್ಮ ಇವರ ಕೋಪಕ್ಕೆ ಗುರಿಯಾದಾಗ ಮಕ್ಕಳಿಗೆ ಭದ್ರತೆ ಮತ್ತು ರಕ್ಷಣೆ ಸಿಗುತ್ತದೆ. 

3. ಅಪ್ಪ ಮತ್ತು ಅಮ್ಮ ಇಬ್ಬರೂ ಮಗುವಿಗೆ ತಾಳ್ಮೆಯಿಂದ ಅವರ ವಿಷಯಗಳಿಗೆ ಕಿವಿ ಕೊಡಲು ಆಗದೇ ಇರುವಾಗ ತಾತ ಅಥವಾ ಅಜ್ಜಿ ಅವರಿಗೆ ಕಿವಿಯಾಗಬಲ್ಲರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

4. ತಿನ್ನುವ ಉಡುವ ಮತ್ತು ಸ್ನಾನ ಮಾಡುವಂತಹ ವಿಷಯಗಳಲ್ಲಿ ಮಕ್ಕಳು ದೊಡ್ಡವರ ವೇಗಕ್ಕೆ ಸಮಾದೂಗಲಾರರು. ಅಂತಹ ಸಮಯದಲ್ಲಿ ತಂದೆ ಅಥವಾ ತಾಯಿ ಧಾವಂತದಲ್ಲಿ ಇರುವಾಗ ಅಜ್ಜಿ ಅಥವಾ ತಾತ ಮಗುವಿನ ವೇಗಕ್ಕೆ ಸಹಕರಿಸಬಲ್ಲರು. 

5. ಅಪ್ಪ ಮತ್ತು ಅಮ್ಮ ಇವರಿಬ್ಬರ ನಡುವೆ ಸಂಘರ್ಷ ಉಂಟಾದಾಗ ಮಗುವಿಗೆ ಸಿಗಬೇಕಾಗಿರುವಂತಹ ಸಾಂತ್ವಾನ ಮತ್ತು ಭಾವನಾತ್ಮಕವಾದಂತ ಬೆಂಬಲ ತಾತ ಮತ್ತು ಅಜ್ಜಿಯಿಂದ ಸಿಗುತ್ತದೆ. 

6. ತಾತ ಮತ್ತು ಅಜ್ಜಿ ಕಥೆಗಳನ್ನು ಹೇಳುವ ಅಥವಾ ಹತ್ತಿರದ ಪ್ರದೇಶಗಳಿಗೆ ಕರೆದೊಯ್ಯುವ ಅಥವಾ ಸ್ಥಳೀಯ ಜನರ ಮತ್ತು ಜಾಗಗಳ ಮೌಖಿಕ ಇತಿಹಾಸವನ್ನು ಮಕ್ಕಳಿಗೆ ನಿರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ.

7. ಮಕ್ಕಳಿಗೆ ಯಾವ ಆತುರ ಮತ್ತು ಒತ್ತಡ ಇಲ್ಲದ ಹಿರಿಯರ ಸಾಂಗತ್ಯ ಬೇಕು. ಅದು ಅವರಿಗೆ ವಿಷಯಗಳು ಅರಿಯುದರಲ್ಲಿ ಸನ್ನಿವೇಶಗಳನ್ನು ಗ್ರಹಿಸುವುದರಲ್ಲಿ ತಾಳ್ಮೆಯ ಗಮನಿಸುವಿಕೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. 

8. ಮಕ್ಕಳಿಗೆ ಓದುವ ಮತ್ತು ಬರೆಯುವ, ಅವರ ಕುತೂಹಲದ ವಿಷಯಗಳನ್ನು ಗಮನಿಸುವ, ಗ್ರಹಿಸುವ ವಿಷಯದಲ್ಲಿ ತಾತ ಅಜ್ಜಿ ಸುಮ್ಮನೆ ಜೊತೆಗಿದ್ದರೆ ಸಾಕು. ಮಕ್ಕಳಿಗೆ ಅವರು ಕಂಡುಕೊಂಡ ವಿಷಯಗಳನ್ನು ಪ್ರದರ್ಶಿಸುವಾಗ ಪುರುಸೊತ್ತಿರುವ ನೋಡುಗರು ಮತ್ತು ಕೇಳುಗರು ಬೇಕು. ಏಕೆಂದರೆ ಅವರು ಏನನ್ನ ಅಭಿವ್ಯಕ್ತಗೊಳಿಸುತ್ತಾರೋ ಮತ್ತು ಪ್ರದರ್ಶಿಸುತ್ತಾರೋ ಹಾಗೂ ಹಂಚಿಕೊಳ್ಳುತ್ತಾರೋ ಅದರ ಆಧಾರದಲ್ಲಿ ಅವರ ಚಿಂತನ ಕ್ರಮ ಮತ್ತು ನಡುವಳಿಕೆಯ ರೂಡಿಗಳು ಬೆಳೆಯುತ್ತವೆ. ಮಕ್ಕಳ ಕಲ್ಪನಾಶಕ್ತಿಗೆ ವಿಫುಲವಾದ ಅವಕಾಶ ಸಿಗುತ್ತದೆ. 

9. ತಾತ ಅಥವಾ ಅಜ್ಜಿ ಮಕ್ಕಳ ಸಣ್ಣಪುಟ್ಟ ಬಯಕೆಗಳನ್ನೆಲ್ಲ ಈಡೇರಿಸುವ ಜಾದುಗಾರರು. 

10. ತಾತ ಅಥವಾ ಅಜ್ಜಿ ಮನೆಯಲ್ಲಿ ಇರುವುದೆಂದರೆ ನಿಜವಾಗಿಯೂ ಮಗುವಿನ ಮಗುತನವನ್ನು ಜನ ಮಾಡಲು ಬಹು ದೊಡ್ಡ ಶಕ್ತಿ ಇದ್ದಂತೆ. 

(ಈ ಚಿತ್ರ ಮಾಯಸಂದ್ರದ ರಸ್ತೆಯಲ್ಲಿ ತೆಗೆದಿದ್ದು. ಇದರಲ್ಲಿ ತಾತ ತನ್ನ ಮೊಮ್ಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಸಿದ್ದ ಮಾಡಿಕೊಂಡು ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದಾರೆ. ರಸ್ತೆಯಲ್ಲಿ ಮಗುವಿನ ಜೊತೆಗೆ ನಡೆಯುವಾಗ ಮಗುವು ವಾಹನಗಳು ಓಡಾಡುವ ಬದಿಯಲ್ಲಿ ಇರಬಾರದು ಎಂಬ ಎಚ್ಚರಿಕೆ ಈ ತಾತನಿಗೆ ಇದೆ.) 

ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ.

ಲೇಖಕರು : ಯೋಗೇಶ್ ಮಾಸ್ಟರ್ 


Leave a Reply

Your email address will not be published.