ಶಿವಮೊಗ್ಗದಲ್ಲಿ 15 ಲಕ್ಷ ಬಹುಮಾನ ನಂಬಿ 13.97 ಲಕ್ಷ ರೂ. ಕಳೆದುಕೊಂಡ ರೈತ !
ಶಿವಮೊಗ್ಗ : ಹೊಸನಗರ ತಾಲೂಕಿನ ರೈತನೋರ್ವ ಆನ್ಲೈನ್ ಶಾಪಿಂಗ್ನಲ್ಲಿ 15 ಲಕ್ಷ ರೂ. ಬಹುಮಾನ ಗ ಗೆದ್ದಿರುವುದಾಗಿ ಬಂದ ಪತ್ರವನ್ನು ನಂಬಿ 13.97 ಲಕ್ಷ ರೂ. ನ ಕಳೆದುಕೊಂಡಿದ್ದಾರೆ.
25 ವರ್ಷದ ರೈತ ವಂಚನೆಗೆ ಒಳಗಾದವರು. ನವೆಂಬರ್ 8ರಂದು ರೈತನ ತಾಯಿ ಹೆಸರಿಗೆ 15.50 ಲಕ್ಷ ರೂ. ಆನ್ ಲೈನ್ ಶಾಪಿಂಗ್ನಲ್ಲಿ ಗೆದ್ದಿರುವುದಾಗಿ ಅಂಚೆ ಮೂಲಕ ಪತ್ರ ಬಂದಿತ್ತು. ಅದರಲ್ಲಿದ್ದ ಸಹಾಯವಾಣಿಗೆ ಕರೆ ಮಾಡಿದ್ದ ರೈತನಿಗೆ ಸಂಸ್ಥೆಯ ಪಿ ಆರ್ ಒ ಎಂದು ಪರಿಚಯ ಮಾಡಿಕೊಂಡ ಅಪರಿಚಿತ 15.51 ಲಕ್ಷ ರೂ. ಗೆದ್ದಿರುವುದಾಗಿ ನಂಬಿಸಿದ್ದ. ಆ ಬಳಿಕ ಗುರುತಿನ ಚೀಟಿ ಕಳುಹಿಸುವಂತೆ ಹೇಳಿದ್ದ.
ಆತನ ಮಾತು ನಂಬಿದ ರೈತ ತನ್ನ ತಾಯಿಯ ಚುನಾವಣಾ ಗುರುತಿನ ಚೀಟಿಯನ್ನು ವಂಚಕ ನೀಡಿದ್ದ ವಾಟ್ಸ್ಆಪ್ ನಂಬರ್ ಗೆ ಕಳುಹಿಸಿದ್ದ. ಬಹುಮಾನದ ಹಣ ಕೊಡಲು ಶೇ.1 ಹಣ ಪಾವತಿಸುವಂತೆ ಆತ ಹೇಳಿದ್ದ. ಆನಂತರ ತೆರಿಗೆ ಕಟ್ಟಬೇಕು. ಅಧಿಕಾರಿಗಳಿಗೆ ಲಂಚ ಕೊಡಬೇಕು. ಹಣ ದ್ವಿಗುಣವಾಗಿದ್ದು ಬ್ಯಾಂಕ್ಗೆ ತೆರಿಗೆ ಪಾವತಿಸಬೇಕು ಎಂದು ನಂಬಿಸಿದ್ದ.
ಆತನ ಮಾತುಗಳನ್ನು ನಂಬಿದ ರೈತ ತನ್ನ ಖಾತೆ, ಪತ್ನಿ ಮತ್ತು ಸ್ನೇಹಿತರ ಖಾತೆಯಿಂದ ಹಂತ ಹಂತವಾಗಿ 13,97, 938 ರೂ. ಅನ್ನು ಆತ ನೀಡಿದ್ದ ವಿವಿಧ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದ. ನಂತರ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸೈಬರ್ ಠಾಣೆಗೆ ದೂರು ನೀಡಿದ್ದಾನೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply