BREAKING NEWS : ಹಾಡುಹಗಲೇ ಶಿವಮೊಗ್ಗದ ಪ್ರೀಡಂ ಪಾರ್ಕ್ ನಲ್ಲಿ ಯುವಕನ ಮೇಲೆ ಮಾರಕಸ್ತ್ರಗಳಿಂದ ದಾಳಿ !

BREAKING NEWS : ಹಾಡುಹಗಲೇ ಶಿವಮೊಗ್ಗದ ಪ್ರೀಡಂ ಪಾರ್ಕ್ ನಲ್ಲಿ ಯುವಕನ ಮೇಲೆ ಮಾರಕಸ್ತ್ರಗಳಿಂದ ದಾಳಿ !

ಶಿವಮೊಗ್ಗ : ಶಿವಮೊಗ್ಗದ ಪ್ರೀಡಂ ಪಾರ್ಕ್ ನಲ್ಲಿ ಹಾಡುಹಗಲೇ ಶಶಿ ಎಂಬ ಯುವಕನ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಫ್ರೀಡಂ ಪಾರ್ಕ್ ನಲ್ಲಿರುವ ವಾಕಿಂಗ್ ಪಾತ್ ನ ಮೇಲೆ ಶಶಿ ಎಂಬ ಯುವಕ ನಡೆದುಕೊಂಡು ಹೋದಾಗ ಬೈಕ್ ನಲ್ಲಿ ಬಂದ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ದಾಳಿಗೊಳಗಾದ ವ್ಯಕ್ತಿ ಶಶಿ ಎಂಬಾತನ ಮೈ ರಕ್ತಸಿಕ್ತವಾಗಿದೆ. ಹೊಟ್ಟೆಯಲ್ಲಿದ್ದ ಕರಳುಪಚ್ಚಿ ಹೊರಬಿದ್ದಿದೆ. ಸಧ್ಯಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಯುವಕ ಪ್ರಾಣಾಪಾಯದಿಂದ ಬಜಾವ್ ಆಗಿದ್ದು ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಮೂಲಗಳ ಪ್ರಕಾರ, ಇದೊಂದು ರೌಡಿ ವಲಯದ ಹಲ್ಲೆ ಪ್ರಕರಣ ಎಂದು ತಿಳಿದುಬಂದಿದೆ. ಕನ್ನಡ ರಾಜ್ಯೋತ್ಸವದ ವಿಚಾರದಲ್ಲಿ ನಡೆದ ಕಿರಿಕ್ ವಿಚಾರವಾಗಿ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಈ ಹಿಂದೆ ಹತ್ಯೆಯಾಗಿದ್ದ ಮೆಂಟಲ್ ಸೀನಾನ ಜೊತೆಗಿದ್ದ ಆತನ ಸಹಚರ ಕೂಡ ಇವತ್ತಿನ ಘಟನೆಯಲ್ಲಿದ್ದ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

 ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.