ಪ್ರತಿ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದು ಅಗತ್ಯ -ಕಾಸ್ಮೋ ಪಾಲಿಟನ್ ಅಧ್ಯಕ್ಷ ಜಯದೇವ್ ಎಂ 

ಪ್ರತಿ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದು ಅಗತ್ಯ -ಕಾಸ್ಮೋ ಪಾಲಿಟನ್ ಅಧ್ಯಕ್ಷ ಜಯದೇವ್ ಎಂ 

ಶಿವಮೊಗ್ಗ: ಇಂದಿನ ದಿನಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇದ್ದು, ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಶಿಬಿರಗಳಿಂದಲೇ ರಕ್ತ ಸಂಗ್ರಹಿಸಬೇಕಿದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬೇಕು ಎಂದು ಕಾಸ್ಮೋ ಪಾಲಿಟನ್ ಅಧ್ಯಕ್ಷ ಜಯದೇವ್ ಎಂ ಹೇಳಿದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗೋಪಾಲಗೌಡ ಬಡಾವಣೆಯಲ್ಲಿ ನಿಸರ್ಗ ಉದ್ಯಾನವನ ಸಂಘ, ನಿಸರ್ಗ ಮಹಿಳಾ ಸಂಘ, ಕಾಸ್ಮೋಪಾಲಿಟನ್ ಲಯನ್ಸ್ ಕ್ಲಬ್, ರೆಡ್‌ಕ್ರಾಸ್ ಸಂಜೀವಿನಿ ರಕ್ತಕೇಂದ್ರ, ನಮ್ಮ ಯೋಗ ಕುಟುಂಬ ಶಿವಮೊಗ್ಗ ಸಂಯುಕ್ತ ಆಶ್ರಯದಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ದಲ್ಲಿ ಮಾತನಾಡಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಗರ್ಭಿಣಿ ಸ್ತೀಯರಿಗೆ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ, ವ್ಯಕ್ತಿ ಅಪಘಾತಕ್ಕಿಡಾದ ಚಿಕಿತ್ಸೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಒಂದು ಜೀವವನ್ನು ಉಳಿಸಲು ರಕ್ತವೇ ಮುಖ್ಯ. ಯಾವುದೇ ಪ್ರತಿಫಲ ನೀರೀಕ್ಷಿಸದೆ ರಕ್ತದಾನ ಮಾಡಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ರಕ್ತದಾನ ಮಾಡುವುದರಿಂದ ದಾನಿಯು ಕ್ಯಾನ್ಸರ್, ಹೃದಯಾಘಾತದಂತಹ ದೊಡ ದೊಡ್ದ ಕಾಯಿಲೆಗಳಿಂದ ದೂರವಾಗಬಹುದೆಂದು ವೈದ್ಯಕೀಯ ವರದಿಗಳಿಂದ ಕಂಡುಬರುತ್ತದೆ. ರಕ್ತವನ್ನು 18 ವರ್ಷ ವಯಸ್ಸಿನಿಂದ 65 ವಯಸ್ಸಿನ ಯಾರೊಬ್ಬರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವುರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕಾರಿಯಾಗುವ ಜೊತೆಗೆ ಕೊಬ್ಬಿನ ಅಂಶ ಕರಗಿ ಸುಲಲಿತ ರಕ್ತ ಸಂಚಾರಕ್ಕೆ ಸಹಾಯವಾಗುತ್ತದೆ ಎಂದರು. ರಕ್ತದ ಒತ್ತಡ ಕಡಿಮೆಯಾಗಿ ಕಾರ್ಯತತ್ವರತೆ ಹಾಗೂ ಜ್ಞಾಪಕಾ ಶಕ್ತಿ ವೃದ್ದಿಯಾಗಲು ಸಹಕಾರಿ ಆಗುತ್ತದೆ. ರಕ್ತದಾನದ ಅರಿವು ಮಾಡಿಸಲು ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

ನಮ್ಮ ಯೋಗ ಕುಟುಂಬದ ಅಧ್ಯಕ್ಷ ಹೊನ್ನಪ್ಪ ಅವರು ಗಿಡಕ್ಕೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಿದರು. ಶಿಬಿರದಲ್ಲಿ ಯೋಗ ಕುಟುಂಬದವರು, ಬಡಾವಣೆಯ ನಿವಾಸಿಗಳು ಮತ್ತು ಲಯನ್ಸ್ ಕ್ಲಬ್ ಸದಸ್ಯರು ರಕ್ತದಾನ ಮಾಡಿದರು.

ಗೋಪಾಲಗೌಡ ನಿವಾಸಿಗಳ ಸಂಘದ ಅಧ್ಯಕ್ಷ ಮೋಹನ್‌ಮೂರ್ತಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಮುರುಗೇಶ್, ನಿರ್ದೇಶಕರು, 113 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್, ಡಾ. ಮೇಘನಾ, ಸಿಂಧೂ, ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ದಿನೇಶ್ ಉಪಸ್ಥಿತರಿದ್ದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.