ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಆರ್.ಎಸ್.ಗೋಪಾಲಕೃಷ್ಣ ನಿಧನ

ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಆರ್.ಎಸ್.ಗೋಪಾಲಕೃಷ್ಣ ನಿಧನ 

ಶಿವಮೊಗ್ಗ: ನಗರದ ಪಿ & ಟಿ ಕಾಲೋನಿ ನಿವಾಸಿ ಆರ್.ಎಸ್.ಗೋಪಾಲಕೃಷ್ಣ ( 69 ) ಸ್ವಗೃಹದಲ್ಲಿ ಸೋಮವಾರ ನಿಧನರಾಗಿದ್ದಾರೆ. ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆಯು ರೋಟರಿ ಚಿತಾಗಾರದಲ್ಲಿ ಸೋಮವಾರ ಸಂಜೆ ನಡೆಯಲಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ, ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷ, ಭಾವಸಾರ ಸಮಾಜ ಅಧ್ಯಕ್ಷ, ಭಾವಸಾರ ಸೊಸೈಟಿ ನಿರ್ದೇಶಕ, ನೇತ್ರ ಭಂಡಾರ ಟ್ರಸ್ಟಿ, ಭಾವಸಾರ ವಿಷನ್ ಇಂಡಿಯಾ ಸಂಸ್ಥಾಪಕ ಸದಸ್ಯರಾಗಿ ಆರ್.ಎಸ್.ಗೋಪಾಲಕೃಷ್ಣ ಸೇವೆ ಸಲ್ಲಿಸಿದ್ದರು.

ಗೋಪಾಲಕೃಷ್ಣ ನಿಧನಕ್ಕೆ ವಿ.ನಾಗರಾಜ್, ಜಿ.ವಿಜಯ್‌ಕುಮಾರ್, ಎಸ್.ದತ್ತಾತ್ರಿ, ಲೋಕೇಶ್, ಮಲ್ಲಿಕಾರ್ಜುನ ಕಾನೂರು, ರವೀಂದ್ರನಾಥ ಐತಾಳ್, ಬಿಂದು ವಿಜಯ್‌ಕುಮಾರ್, ಶ್ರೀರಂಜನಿ ದತ್ತಾತ್ರಿ, ಮಹೇಶ್ವರಪ್ಪ, ಫ್ರೆಂಡ್ಸ್ ಸೆಂಟರ್ ಹಾಗೂ ರೋಟರಿ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.


Leave a Reply

Your email address will not be published.