ಆಟೋ ಕಾಂಪ್ಲೆಕ್ಸ್ ನಲ್ಲಿ ಸ್ನೇಹಮಯಿ ಸಂಘದ ವತಿಯಿಂದ ಶ್ರೀ ಎಸ್.ಬಂಗಾರಪ್ಪ ಸವಿನೆನಪು
ಶಿವಮೊಗ್ಗ : ದೀನದಲಿತರ ನಾಯಕ, ಬಡವರ ಆಶಾಕಿರಣ,ಹಲವಾರು ಸಮಾಜಮುಖಿ ಯೋಜನೆಗಳ ಹರಿಕಾರ ನಮ್ಮೆಲ್ಲರ ಅಭಿಮಾನದ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್.ಬಂಗಾರಪ್ಪನವರ ೧೨ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಇಂದು ನಗರದ ಆಟೋ ಕಾಂಪ್ಲೆಕ್ಸ್ನಲ್ಲಿ ಸ್ನೇಹಮಯಿ ಸಂಘ ಚೈತ್ರ ಶ್ವೇತಾ ಆಟೋ ವರ್ಕ್ಸ್ ಹಾಗೂ ಆಟೋ ಕಾಂಪ್ಲೆಕ್ಸ್ ಮಾಲೀಕರುಗಳು ಹಾಗೂ ಸಿಬ್ಬಂದಿವರ್ಗದವರು, ಮಾಲೀಕರು ಇಂದು ಬಂಗಾರಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸ್ನೇಹಮಯಿ ಸಂಘದ ಅಧ್ಯಕ್ಷ ಎಸ್.ಚಿನ್ನಪ್ಪ ನವರು ಮಾತನಾಡುತ್ತಾ ಈ ನಾಡು ಕಂಡಅತ್ಯAತ ಶ್ರೇಷ್ಟ ಜನಪರ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ಅವರ ಅಕ್ಷಯ, ಆರಾಧನ, ಜನಪರ ಯೋಜನೆಗಳು ಇಂದಿಗೂ ಪ್ರಸ್ತುತ ಬಂಗಾರಪ್ಪನವರ ಅಮರರಾಗಿದ್ದರು ಅವರ ಯೋಜನೆಗಳು ಇಂದಿಗೂ ಶಾಶ್ವತವಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಎಲ್ಲರೂ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರೋ.ವಿಜಯಕುಮಾರ್, ಈಶ್ವರ್, ಬಾಬು, ನಹೀಂಪಾಷ, ಸನ್ನಿ ಮಾರ್ಷೆಲ್, ನಂದನ್ ಆಂಟೋನಿ, ನಸೀಮಾ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply