BREAKING NEWS : ಶಿವಮೊಗ್ಗದಲ್ಲಿ ಪೊಲೀಸ್ ಬುಲೆಟ್ ಫೈರಿಂಗ್ ! ಮಲೆನಾಡಲ್ಲಿ ಮತ್ತೆ ಪೊಲೀಸ್ ಗುಂಡಿನ ಸದ್ದು ! ರೌಡಿಶೀಟರ್ ವಲಂಗಾನ ಕಾಲಿಗೆ ಗುಂಡು !
ಶಿವಮೊಗ್ಗ : ನಗರದ ಫ್ರೀಡಂ ಪಾರ್ಕ್ ನಲ್ಲಿ ಶಶಿ ಎಂಬ ಯುವಕನ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ಹಿನ್ನಲೆ ಆರೋಪಿ ಮಂಜ ಅಲಿಯಾಸ್ ವಲಂಗನ ಕಾಲಿಗೆ ಜಯನಗರ ಪಿಐ ಗುಂಡು ಹಾರಿಸಿದ್ದಾರೆ.
ಫ್ರೀಡಂಪಾರ್ಕ್ನಲ್ಲಿ ಶಶಿ ಎಂಬ ಯುವಕನ ಮೇಲೆ ಮಂಜುನಾಥ್ ಯಾನೆ ಒಲಂಗ, ಮಂಜುನಾಥ್ ಯಾನೆ ನೇಪಾಳಿ ಮಂಜ, ಸಂದೀಪ ಮಲ್ಲೇಶ ಯಾನೆ ಮಲ್ಲಿ, ಕರಿಯಾ ವಿನಿ ಮತ್ತು ಇತರರು ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿದ್ದರು.
ಮಾರಣಾಂತಿಕ ಹಲ್ಲೆ ಪ್ರಕರಣದ ಸಂಬಂಧ ಇಂದು ಬೆಳಗ್ಗಿನ ಜಾವ ಆರೋಪಿ ಮಹಜರ್ ಪ್ರಕ್ರಿಯೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವ ಸಮಯದಲ್ಲಿ, ಆತ ಪೊಲೀಸ್ ಸಿಬ್ಬಂದಿ ರವಿ ಮತ್ತು ಇನ್ನೋರ್ವ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ.
ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ ರೌಡಿಶೀಟರ್ ಒಲಂಗನ ಮೇಲೆ ಜಯನಗರ ಪಿಐ ಸಿದ್ದನಗೌಡ ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply