3 ತಿಂಗಳ ಹಿಂದೆ ನಾಪತ್ತೆಯಾದವ ಶವವಾಗಿ ಪತ್ತೆ ! ಕೊಲೆಯೋ.. ಆತ್ಮ ಹತ್ಯೆಯೋ..? ಏನಿದು ಪ್ರಕರಣ ?
ತೀರ್ಥಹಳ್ಳಿ : ಎನ್ ಆರ್ ಪುರ ತಾಲೂಕು ಕಣಿವೆಯ ಬಳಿ ಡಿ.31ರಂದು ವ್ಯಕ್ತಿ ಒಬ್ಬರ ಶವ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಗೋಪಾಲ್ ಎಂಬ ವ್ಯಕ್ತಿ ಹಲವು ವರ್ಷಗಳ ಕಾಲ ಬಾಂಬೆಯಲ್ಲಿ ಇದ್ದು ವ್ಯವಹಾರ ನಡೆಸುತ್ತಿದ್ದರು. ನಂತರ ಊರಿಗೆ ಬಂದು ಜಮೀನು ನೋಡಿಕೊಳ್ಳುತ್ತಿದ್ದರು.
ತೀರ್ಥಹಳ್ಳಿ ತಾಲೂಕು ಕೂಡಿಗೆಯ ಗೋಪಾಲ್ ಎಂಬ ವ್ಯಕ್ತಿ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಇವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ ಅವರ ಪತ್ನಿ, ನಂತರ ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಡಿಸೆಂಬರ್ 31ರಂದು ಎನ್ ಆರ್ ಪುರ ತಾಲೂಕು ಕಣಿವೆಯ ಬಳಿ ಗೋಪಾಲ್ ಮೃತ ದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply