ಮಲವಗೊಪ್ಪದ ಬಳಿ ಮರದ ಕೆಳಗೆ ದಂಪತಿಯ ಶವ ಪತ್ತೆ  !

ಮಲವಗೊಪ್ಪದ ಬಳಿ ಮರದ ಕೆಳಗೆ ದಂಪತಿಯ ಶವ ಪತ್ತೆ !

ಶಿವಮೊಗ್ಗ : ನಗರದ ಮಲವಗೊಪ್ಪದಲ್ಲಿ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ ಮರವೊಂದರ ಕೆಳಗೆ ಓರ್ವ ಪುರುಷ ಮತ್ತು ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ಗಂಡ ಹೆಂಡತಿ ಇಬ್ಬರ ಮೃತದೇಹ ಪತ್ತೆಯಾಗಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಶುಗರ್​ ಪ್ಯಾಕ್ಟರಿ ಬಳಿ ಈ ಇಬ್ಬರ ಮೃತದೇಹ ನಿನ್ನೆ ರಾತ್ರಿ ಪತ್ತೆಯಾಗಿದೆ. ಇಬ್ಬರು ಸಹ ಮೃತಪಟ್ಟು ದಿನವಾಗಿರಬಹುದು ಎಂದು ಪೊಲೀಶ್ ಮೂಲಗಳು ತಿಳಿಸಿವೆ. 

ಇಬ್ಬರು ಸಹ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಯಿದ್ದು ಮೃತದೇಹವನ್ನು ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನೂ ಮೃತಪಟ್ಟವರು ಯಾರು? ಎಲ್ಲಿಯವರು ಎಂಬ ಗುರುತು ಸಹ ಪೊಲೀಸರಿಗೆ ತಿಳಿದುಬಂದಿಲ್ಲ. ಈ ಸಂಬಂಧ ಇನ್ನಷ್ಟೆ ವಿಚಾರಣೆ ನಡೆಯಬೇಕಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

 


Leave a Reply

Your email address will not be published.